ವಿಜಯಪುರ: ಕೋವಿಡ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ಗರ್ಭಿಣಿ (ಪಿ8789) ಸಹಜ ಹೆರಿಗೆ ಮೂಲಕ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ಗರ್ಭಿಣಿ ಅನೇಮಿಯಾ ರೋಗದಿಂದ ಬಳಲುತ್ತಿದ್ದು, ಸೋಮವಾರ ಬೆಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಡಾ.ಮನ್‍ಪ್ರೀತ್ ಕೌರ್ ಅವರ ವೈದ್ಯರ ತಂಡ ಸಹಜ ಹೆರಿಗೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಣಂತಿ-ಅವಳಿ ಮಕ್ಕಳು ಆರೋಗ್ಯವಂತರಾಗಿದ್ದಾರೆ ಎಂದು ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಶರಣಪ್ಪ ಕಟ್ಟಿ ತಿಳಿಸಿದ್ದಾರೆ.
ಅವಳಿ ಹೆಣ್ಣು ಮಕ್ಕಳಲ್ಲಿ ಪ್ರಥಮ ಮಗು 2.0 ಕೆ.ಜಿ ಹಾಗೂ ಎರಡನೇ ಮಗು 2.1 ಕೆ.ಜಿ. ತೂಕ ಹೊಂದಿದೆ.
ಡಾ.ಮನ್‍ಪ್ರೀತ್ ಕೌರ್ ತಹರೀಯಾ, ಸಿಸ್ಟರ್ ಕಾಶೀಬಾಯಿ, ಡಾ.ಉಪಾಸೆ, ರವಿ ಕೂಚಬಾಳ, ಮೊಹಸೀನ್ ಮಮದಾಪೂರ, ಕ್ಲಾಸ್ ಡಿ ಸಿಬ್ಬಂದಿ ಮಲ್ಲಿಕಾರ್ಜುನ ಅವರನ್ನು ಒಳಗೊಂಡ ವೈದ್ಯರ ತಂಡ ಸೋಂಕಿತ ಗರ್ಭಿಣಿಗೆ ಸಹಜ ಹೆರಿಗೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡಾ.ಮನ್‍ಪ್ರೀತ್ ಕೌರ್ ತಹರೀಯಾ ಅವರು ಇಂತಹ ಎರಡು ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಡಾ.ಶರಣಪ್ಪ ವಿವರಿಸಿದ್ದಾರೆ.