Advertisement

3ನೇ ಅಲೆ ನಿಯಂತ್ರಣಕ್ಕೆ ಜಿಲ್ಲಾಡಳಿತ ಸಜ್ಜು

06:58 PM Jun 10, 2021 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ನಿಂದ20 ವರ್ಷಕ್ಕಿಂತ ಕೆಳಗಿನ ವಯಸ್ಕರಲ್ಲಿ ಯಾವುದೇಮರಣ ಸಂಭವಿಸಿಲ್ಲ ಅದೇ ರೀತಿ 3ನೇ ಅಲೆ ಬಂದರೂ ಯಾವ ಮಕ್ಕಳಿಗೂ ಸೋಂಕು ತಗುಲದಂತೆ ಪೂರ್ವಸಿದ್ಧತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಹಾಗೂ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ನಿವಾರಿಸುವನಿಟ್ಟಿನಲ್ಲಿ ಈಗಿನಿಂದಲೇ ಜಿಲ್ಲಾಡಳಿತದಿಂದ ಪರಿಣಾಮ ಕಾರಿಯಾಗಿ ಕಾರ್ಯಕ್ರಮಜಾರಿಗೊಳಿಸಿದೆ ಎಂದು ಜಿಲ್ಲಾಧಿಕಾರಿ ಆರ್‌. ಲತಾ ತಿಳಿಸಿದರು.

Advertisement

ಬುಧವಾರ ತಾಲೂಕಿನ ಆವಲಗುರ್ಕಿ ಗ್ರಾಮದಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಜಿಲ್ಲಾಡಳಿತಮತ್ತು ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್‌ ನಿಂದಜಿಲ್ಲೆಯ ತೀವ್ರತರ ಮತ್ತು ಸಾಧಾರಣ ಅಪೌಷ್ಟಿಕಮಕ್ಕಳಿಗೆ ಸಾಯಿ ಶೂರ್‌ ಹೆಲ್ತ್‌ ಫೌಡರ್‌ ಹಾಗೂಮದ್ಯಾಹ್ನದ ಉಪಾಹಾರ ಯೋಜನೆಯ ಅಡುಗೆಸಿಬ್ಬಂದಿಗೆ ಆಹಾರದ ಕಿಟ್‌ಗಳನ್ನು ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

3ನೇ ಅಲೆಯು ಅಪೌಷ್ಟಿಕ ಮಕ್ಕಳನ್ನು ಹೆಚ್ಚಾಗಿಬಾ ಧಿಸಲಿದೆ ಎಂದು ಆರೋಗ್ಯ ಕ್ಷೇತ್ರದ ತಜ್ಞರುಹೇಳುತ್ತಿದ್ದಾರೆ. ಈ ದಿಸೆಯಲ್ಲಿ ಜಿಲ್ಲೆಯಲ್ಲಿ ಪ್ರಸ್ತುತ 2ಲಕ್ಷ ಮಕ್ಕಳಿದ್ದು, ಈ ಮಕ್ಕಳ ಆರೋಗ್ಯದ ಕಡೆ ಹೆಚ್ಚುಗಮನ ಕೊಡಬೇಕಿದೆ. ಈಗಿನಿಂದಲೇ ಅಗತ್ಯಮುನ್ನೆಚ್ಚರಿಕಾ ಕ್ರಮ ಕೈಗೊಂಡು ಅಪೌಷ್ಟಿಕ ಮಕ್ಕಳನ್ನುಸದೃಢರನ್ನಾಗಿ ಮಾಡುವ ಸದುದ್ದೇಶದಿಂದ ಸತ್ಯಸಾಯಿ ಸಂಸ್ಥೆಯವರ ಸಹಕಾರದಲ್ಲಿ ಜಿಲ್ಲೆಯ ಎಲ್ಲಾಅಪೌಷ್ಟಿಕ ಮಕ್ಕಳಿಗೆ ಹೆಚ್ಚಿನ ಪೌಷ್ಟಿಕಾಂಶವುಳ್ಳ ಫೌಡರ್‌ಅನ್ನು ನೀಡುತ್ತಿದ್ದು, ಇದು ಶ್ಲಾಘನೀಯ ಕಾರ್ಯ ಎಂದುಟ್ರಸ್ಟ್‌ ಮುಖ್ಯಸ್ಥರಿಗೆ ಧನ್ಯವಾದ ತಿಳಿಸಿದರು.

ಸಾಂಕೇತಿಕವಾಗಿ ಆವಲಗುರ್ಕಿ ಗ್ರಾಮದಸಾಧಾರಣ ಅಪೌಷ್ಟಿಕ ಮಕ್ಕಳಿಗೆ ಸಾಯಿ ಶೂರ್‌ ಹೆಲ್ತ್‌ಫೌಡರ್‌ ಅನ್ನು ಹಾಗೂ ಮದ್ಯಾಹ್ನ ಉಪಾಹಾರಯೋಜನೆಯ ಅಡುಗೆ ಸಿಬ್ಬಂದಿಗಳಿಗೆ ಆಹಾರದಕಿಟYಳನ್ನು ವಿತರಿಸಲಾಯಿತು. ಜಿಲ್ಲಾದ್ಯಂತ 5,200ಸಾಧಾರಣ ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕ ಆಹಾರಇಲಾಖೆಯಿಂದ ನೀಡುವಂತೆ ಇದರ ಜೊತೆಗೆ ಸಾಯಿಶೂರ್‌ ಹೆಲ್ತ್‌ ಫೌಡರ್‌ ಅನ್ನು ವಿತರಿಸಲು ಸೂಚಿಸಿದರು ಹಾಗೂ ಮದ್ಯಾಹ್ನ ಉಪಾಹಾರ ಯೋಜನೆಯಅಡುಗೆ ಸಿಬ್ಬಂದಿಗೆ ಆಹಾರದ ಕಿಟ್‌ಗಳನ್ನು ವಿತರಿಸಲುಮದ್ಯಾಹ್ನದ ಉಪಾಹಾರ ಯೋಜನೆಯ ಶಿಕ್ಷಣಾಧಿಕಾರಿಗೆ ಸೂಚಿಸಿದರು

.ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಆರ್‌.ಲತಾ ಮತ್ತುಜಿಪಂ ಸಿಇಒ ಪಿ.ಶಿವಶಂಕರ್‌ ಅವರು ಶಾಲಾಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆನೀಡಿದರು. ಜಿಪಂ ಉಪ ಕಾರ್ಯದರ್ಶಿ ನೋಮೇಶ್‌ಕುಮಾರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣಇಲಾಖೆಯ ಉಪನಿರ್ದೇಶಕ ಎಸ್‌.ಸಿ.ಪದ್ಮರಾಜು,ತಾಪಂ ಇಒ ಹರ್ಷವರ್ಧನ್‌, ಮಧ್ಯಾಹ್ನ ಉಪಾಹಾರಯೋಜನೆಯ ಶಿಕ್ಷಣಾ ಕಾರಿ ಶೈಲಾ, ಪಂಚಾಯತ್‌ಅಭಿವೃದ್ಧಿ ಅಧಿಕಾರಿ ವೆಂಕಟೇಶ್‌, ಶ್ರೀಸತ್ಯ ಸಾಯಿಅನ್ನಪೂರ್ಣ ಟ್ರಸ್ಟ್‌ನ ಪ್ರತಿನಿ ಗಳು, ತಾಲೂಕು ಮಟ್ಟದಅಧಿಕಾರಿಗಳು ಹಾಗೂ ಅಂಗನವಾಡಿಕಾರ್ಯಕರ್ತರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next