Advertisement

ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ  ಜನ

08:54 PM May 25, 2021 | Team Udayavani |

ಚಿಕ್ಕಬಳ್ಳಾಪುರ: ಕೊರೊನಾ ಸೋಂಕುತಡೆಗಟ್ಟಲು ಜಿಲ್ಲಾಡಳಿತ ಮೇ 20 ರಿಂದ 23ವರೆಗೆ ಜಾರಿ ಮಾಡಿದ್ದ ಕಠಿಣ ಲಾಕ್‌ಡೌನ್‌ಪೂರ್ಣಗೊಂಡ ಹಿನ್ನೆಲೆಯಲ್ಲಿ ನಗರ ಸೇರಿ ಎಲ್ಲಾತಾಲೂಕು, ಹೋಬಳಿ ಕೇಂದ್ರಗಳಲ್ಲಿ ತರಕಾರಿ,ದಿನಸಿ ಸೇರಿ ಅಗತ್ಯ ವಸ್ತುಗಳನ್ನು ಖರೀದಿಮಾಡಲು ಜನ ಮುಗಿಬಿದ್ದ ದೃಶ್ಯ ಸೋಮವಾರಕಂಡು ಬಂತು.

Advertisement

ಈಗಾಗಲೇ ರಾಜ್ಯಾದ್ಯಂತ ಜಾರಿ ಮಾಡಿರುವಲಾಕ್‌ಡೌನ್‌ ಮುಂದುವರಿದಿದ್ದು, ಅದರಂತೆ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯವಸ್ತುಗಳ ಖರೀದಿಗೆ ಜಿಲ್ಲೆಯಲ್ಲೂ ಅವಕಾಶಒದಗಿಸಲಾಗಿತ್ತು. ಲಾಕ್‌ಡೌನ್‌ ಸಡಿಲಮಾಡುತ್ತಿರುವುದರಿಂದ ಜನ ಅಗತ್ಯ ವಸ್ತುಗಳ ಖರೀದಿಗಾಗಿ ಮುಗಿ ಬೀಳುತ್ತಾರೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ನಗರ ಪ್ರದೇಶದಲ್ಲಿ ಪೌರಾಯುಕ್ತರಿಗೆ ಹಾಗೂ ಗ್ರಾಮೀಣಪ್ರದೇಶದಲ್ಲಿ ಪಿಡಿಒಗಳಿಗೆ ಝೂಮ್‌ ವಿಡಿಯೋಸಂವಾದ ಮೂಲಕ ಸಾಮಾಜಿಕ ಅಂತರವನ್ನುಕಾಯ್ದುಕೊಂಡು ವ್ಯಾಪಾರ ವಹಿವಾಟುನಡೆಸಲು ಅಂಗಡಿ ಮಾಲಿಕರಿಗೆ ಅವಕಾಶ ಕಲ್ಪಿಸಬೇಕೆಂದು ನಿರ್ದೇಶನ ನೀಡಿದ್ದಾಗಿಸ್ಪಷ್ಟಪಡಿಸಿದರು.ಆದರೆ, ಸೋಮವಾರ ಜಿಲ್ಲಾ ಕೇಂದ್ರದಲ್ಲಿನಮಾರುಕಟ್ಟೆ, ವಾಣಿಜ್ಯ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು. ಜನ ಕೊರೊನಾಸೋಂಕು ಇನ್ನೂ ಇದೆ ಎಂಬುದನ್ನು ಮರೆತುವ್ಯಾಪಾರವ ಹಿವಾಟಿನಲ್ಲಿ ತೊಡಗಿಸಿಕೊಂಡಿದ್ದರು.

ಚಿಕ್ಕಬಳ್ಳಾಪುರ ನಗರದಲ್ಲಿ ನಗರಸಭೆ ಅಧ್ಯಕ್ಷಡಿ.ಎಸ್‌.ಆನಂದ್‌ರೆಡ್ಡಿ, ಪೌರಾಯುಕ್ತಡಿ. ಲೋಹಿತ್‌, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್‌,ಡಿವೈಎಸ್ಪಿ ರವಿಶಂಕರ್‌, ಪೊಲೀಸರು ಮಾರುಕಟ್ಟೆಮತ್ತು ವಾಣಿಜ್ಯ ಕೇಂದ್ರಗಳ ಬಳಿ ಸಂಚರಿಸಿ,ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯಾಪಾರವಹಿವಾಟು ಮಾಡುತ್ತಿದ್ದ ವರ್ತಕರು ಮತ್ತುನಾಗರಿಕರಿಗೆ ದಂಡ ವಿಧಿಸಿದರು.ಅಂಗಡಿಗಳ ಮುಂದೆ ಗುರುತು: ವ್ಯಾಪಾರವಹಿವಾಟು ಮಾಡಿಕೊಳ್ಳಲು ಅವಕಾಶಕಲ್ಪಿಸಿರುವ ಜಿಲ್ಲಾಡಳಿತ, ಪ್ರತಿ ಅಂಗಡಿಮುಂಗಟ್ಟುಗಳ ಮುಂದೆ ಸಾಮಾಜಿಕ ಅಂತರಕಾಯ್ದುಕೊಳ್ಳಲು ಗುರುತು ಮಾಡಬೇಕುಎಂದು ವರ್ತಕರಿಗೆ ತಿಳಿಸಿದೆ.

ನಿಗಪಡಿಸಿರುವಸ್ಥಳದಲ್ಲಿ ನಿಂತು ಅಗತ್ಯ ವಸ್ತು ಖರೀದಿಸಲುಗ್ರಾಹಕರಿಗೆ ಮನವರಿಕೆ ಮಾಡಿಕೊಡಬೇಕೆಂದೂಅಂಗಡಿ ಮಾಲಿಕರಿಗೆ ಸೂಚನೆ ನೀಡಿದೆ.ಈಗಾಗಲೇ ಕೋವಿಡ್‌ ಮಾರ್ಗಸೂಚಿಗಳನ್ನುಪಾಲಿಸದೆ ನಿರ್ಲಕ್ಷ್ಯವಹಿಸಿರುವ ಅಂಗಡಿಮಾಲಿಕರ ಮೇಲೆಯೂ ಕ್ರಮ ಜರುಗಿಸಿ ದಂಡಸಹ ವಸೂಲಿ ಮಾಡಲಾಗಿದೆ.

10ಗಂಟೆ ನಂತರ ಬಿಗಿ ಕ್ರಮ: ಬೆಳಗ್ಗೆ 6ರಿಂದ10 ಗಂಟೆಯವರೆಗೆ ವ್ಯಾಪಾರ ವಹಿವಾಟುಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟ ನಂತರ,ಪೊಲೀಸರು ನಗರ ಮತ್ತು ಗ್ರಾಮೀಣಪ್ರದೇಶದಲ್ಲಿ ಗಸ್ತು ನಡೆಸಿ, ಅನಗತ್ಯವಾಗಿಸಂಚರಿಸುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿ,ಮಾಸ್ಕ್ ಧರಿಸದವರಿಗೆ ದಂಡ ವಿಧಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next