Advertisement
ನಿಮ್ಮಕ್ಷೇತ್ರದಲ್ಲಿಕೊರೊನಾ ಪರಿಸ್ಥಿತಿ ಹೇಗಿದೆ?
Related Articles
Advertisement
ಕೊರೊನಾ ಸೋಂಕಿತರಿಗೆ ಚಿಕಿತ್ಸೆಗೆಸಮಸ್ಯೆಯಾಗುತ್ತಿಲ್ಲವೇ?
ಇಲ್ಲ.ಟ್ಯಾನರಿ ರಸ್ತೆಯ ಈದ್ಗಾ ಶಾದಿಮಹಲ್‌ನಲ್ಲಿ80 ಹಾಸಿಗೆ ಆಸ್ಪತ್ರೆ ಸ್ಥಾಪಿಸಿ ಸೋಂಕಿತರಿಗೆ ಚಿಕಿತ್ಸೆನೀಡಲಾಗುತ್ತಿದೆ. ಅಂಬೇಡ್ಕರ್ ಮೆಡಿಕಲ್‌ಕಾಲೇಜಿನಲ್ಲಿ 75 ಹಾಸಿಗೆ ಪುಲಕೇಶಿನಗರ ಕ್ಷೇತ್ರದಸೋಂಕಿತರಿಗೆ ಮೀಸಲಿಡಲಾಗಿದೆ.ಅದರಲ್ಲಿ 45 ಆಕ್ಸಿಜನ್‌ಯುಕ್ತಹಾಸಿಗೆಗಳಾಗಿವೆ.ಹೋಂಐಸೋಲೇಷನ್ ಅನುಕೂಲ ಇದ್ದವರಿಗೆಮನೆ ಬಾಗಿಲಿಗೆ ವೈದ್ಯಕೀಯಕಿಟ್ ನೀಡಲಾಗುತ್ತಿದೆ.
ಕೊರೊನಾ ತಪಾಸಣೆವ್ಯವಸ್ಥೆ ಹೇಗಿದೆ?
ಆಶಾ ಕಾರ್ಯಕರ್ತೆಯರು ಮನೆಮನೆಗೆಭೇಟಿನೀಡಿತಿಳಿವಳಿಕೆ ನೀಡುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರ,ಸಮುದಾಯ ಆರೋಗ್ಯ ಕೇಂದ್ರವಷ್ಟೇ ಅಲ್ಲದೆಕ್ಷೇತ್ರದ ಎಲ್ಲ ವಾರ್ಡ್‌ಗಳ ಪ್ರಮುಖ ಸ್ಥಳಗಳಲ್ಲೂತಪಾಸಣೆಗೆ ವ್ಯವಸ್ಥೆ ಮಾಡಿಸಲಾಗುತ್ತಿದೆ.
ಬಡವರಿಗೆ ಕೈಗೊಂಡಿರುವ ನೆರವುಕಾರ್ಯಗಳೇನು?
ನಿತ್ಯ ಬಡವರಿಗೆ 10 ಸಾವಿರ ಆಹಾರ ಪೊಟ್ಟಣವಿತರಿಸಲಾಗುತ್ತಿದೆ. 20 ಸಾವಿರ ಕುಟುಂಬಗಳಿಗೆಆಹಾರ ಧಾನ್ಯಗಳಕಿಟ್ ನೀಡಲಾಗಿದೆ.
ಸರ್ಕಾರ ಘೋಷಿಸಿರುವ ಪ್ಯಾಕೇಜ್ ನಿಮ್ಮಕ್ಷೇತ್ರದವರಿಗೆ ತಲುಪಿದೆಯಾ?
ಸೇವಾಸಿಂಧು ಆ್ಯಪ್ ಮೂಲಕ ಅರ್ಜಿ ಸಲ್ಲಿಕೆಗೆಸರ್ಕಾರ ತಿಳಿಸಿರುವುದರಿಂದ ನಮ್ಮ ಕ್ಷೇತ್ರದ ಆಟೋ,ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಾಲಕರು, ಬೀದಿ ವ್ಯಾಪಾರಿಗಳು, ಕುಶಲಕರ್ಮಿಗಳಿಗೆ ನೆರವುಪಡೆಯಲು ಮಾರ್ಗದರ್ಶನ ನೀಡಲಾಗುತ್ತಿದೆ.ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮತ್ತುದಾಖಲಾತಿ ಒದಗಿಸುವುದು ಸಮಸ್ಯೆಯಾಗಿದೆ.ಸರ್ಕಾರ ಸರಳೀಕೃತ ವ್ಯವಸ್ಥೆ ಮಾಡಬೇಕಾಗಿದೆ.
ಎಸ್. ಲಕ್ಷ್ಮೀ ನಾರಾಯಣ