Advertisement

ರೈತರ ರಕ್ಷಣೆಗೆ ಧಾವಿಸಿ: ವೆಂಕಟೇಶ್‌

05:48 PM Jun 03, 2021 | Team Udayavani |

ಮುಳಬಾಗಿಲು: ಟೊಮೆಟೋ ಬೆಳೆಗೆ ಸೂಕ್ತಬೆಲೆ ದೊರೆಯದೇ ದಿನೇ ದಿನೆ ಬೆಲೆಕುಸಿತದಿಂದಾಗಿ ಸಂಕಷ್ಟದಲ್ಲಿರುವ ರೈತರ ರಕ್ಷಣೆಗೆಸರ್ಕಾರದ ವತಿಯಿಂದ ನೆರವು ನೀಡಬೇಕೆಂದುಎಪಿಎಂಸಿ ಅಧ್ಯಕ್ಷ ಗೊಲ್ಲಹಳ್ಳಿ ವೆಂಕಟೇಶ್‌ ಮತ್ತುನಿರ್ದೇಶಕಎನ್‌.ಆರ್‌.ಸತ್ಯಣ್ಣ ಜಿಲ್ಲಾ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಬೇಸತ್ತಿದ್ದಾರೆ:ಈ ಸಂದರ್ಭದಲ್ಲಿ ಮಾತನಾಡಿದಅವರು, ಹಾಕಿದ ಬಂಡವಾಳ ಸಿಗದೇ ಟೊಮೆಟೋ ಬೆಳೆಗಾರರು ಸಾಲದ ಸುಳಿಗೆ ಸಿಲುಕಿದ್ದಾರೆ.ಲಾಕ್‌ಡೌನ್‌ಕಾರಣ ಮಾರುಕಟ್ಟೆಯಲ್ಲಿ ಉತ್ತಮಬೆಲೆ ಇಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿ 15 ಕೆ.ಜಿ.ಬಾಕ್ಸ್‌ ಟೊಮೆಟೋ 15 ರಿಂದ 50 ರೂ.ಗೆ ಮಾರಾಟ ವಾಗುತ್ತಿದೆ. ರೈತರು ಬೇಸತ್ತುಬೆಳೆಯನ್ನು ರಸ್ತೆಗೆ ಸುರಿದು ಹೋಗಿರುವಘಟನೆಗಳು ಸಂಭವಿಸಿದೆ ಎಂದರು.

ಲಾಕ್‌ಡೌನ್‌ ಪ್ರಕಟಿಸಿದ ಹಿನ್ನೆಲೆ ಹೊರ ರಾಜ್ಯಹಾಗೂ ಸ್ಥಳೀಯ ಸಂಸ್ಕರಣ ಘಟಕಕಾರ್ಯನಿರ್ವಹಿಸದೇ ಇರುವುದು, ಹೊರರಾಜ್ಯದ ಮಾರುಕಟ್ಟೆಗಳು ಲಾಕ್‌ಡೌನ್‌ಆಗಿರುವುದು, ಕಳೆದ 2 ವರ್ಷಗಳಿಗಿಂತಲೂ ಈಸಾಲಿನಲ್ಲಿ ಟೊಮೆಟೋಆವಕ ಹೆಚ್ಚಾಗಿರುವುದು,ಮಾರುಕಟ್ಟೆ ವ್ಯವಹಾರಕ್ಕೆ ಇಂತಿಷ್ಟೇ ಸಮಯಾವಕಾಶ ನಿಗದಿಪಡಿಸಿರುವುದರಿಂದಹೆಚ್ಚಾಗಿ ಉತ್ಪನ್ನ ಮಾರಾಟವಾಗುತ್ತಿಲ್ಲ. ಎಲ್ಲೆಡೆಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಮದುವೆ/ಸಮಾರಂಭಗಳು ನಿರ್ಬಂಧಿಸಿರುವುದರಿಂದ ಉತ್ಪನ್ನಕ್ಕೆ ಹೆಚ್ಚಿನ ಬೇಡಿಕೆ ಇಲ್ಲವಾಗಿದೆ.

ಮುಳಬಾಗಿಲು ತಾಲೂಕಿನಲ್ಲಿ ಅಂದಾಜು2323 ಹೆಕ್ಟೇರ್‌ನಲ್ಲಿ ಸುಮಾರು 81305 ಮೆ.ಟನ್‌ ಟೊಮೆಟೋ ಉತ್ಪಾದನೆ ಇದೆ. ಬೇಡಿಕೆ ಹೆಚ್ಚಾಗದೇ ಇದ್ದಲ್ಲಿ ಧಾರಣೆ ಇನ್ನೂಕುಸಿತಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ರೈತರಸಂಕಷ್ಟಕ್ಕೆ ಸರ್ಕಾರದ ವತಿಯಿಂದನೆರವಾಗಬೇಕು, ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next