Advertisement

ಸೋಂಕಿತ  ಮೃತದೇಹ  ಅಂತ್ಯಕ್ರಿಯೆಗೆ ವಸೂಲಿ ನಿಲ್ಲಲಿ

02:54 PM Jun 03, 2021 | Team Udayavani |

ಎಚ್‌.ಡಿ.ಕೋಟೆ: ಕೊರೊನಾದಿಂದ ಕುಟುಂಬದಸದಸ್ಯರನ್ನು ಕಳೆದುಕೊಂಡ ದುಃಖ ಒಂದೆಡೆಯಾದರೆ,ಮೃತದೇಹಪಡೆಯಲುಆಸ್ಪತ್ರೆಯ ವರುಹಣಕ್ಕೆ ಬೇಡಿಕೆಯೊಡ್ಡುವುದು ಮತ್ತೂಂದು ಹಿಂಸೆಯ ಸಂಗತಿಯಾಗಿದೆ.

Advertisement

ಕೊರೊನಾ ಪ್ರವೇಶಿಸಿದ ಬಳಿಕ ಇಂತಹ ಘಟನೆಗಳು ಸಾಮಾನ್ಯವಾಗಿವೆ.ಎಚ್‌.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯಲ್ಲಿಇಂತಹದ್ದೇ ಒಂದು ಘಟನೆ ಜರುಗಿದೆ.ಸರಗೂರು ತಾಲೂಕಿನ ಕುಂದೂರು ಗ್ರಾಮದರಾಜಮ್ಮ (65) ಎಂಬ ವೃದ್ಧೆ ಕಳೆದ 5 ದಿನಗಳಹಿಂದೆ ಕೊರೊನಾ ಸೋಂಕಿತರಾಗಿ ಕೋಟೆಯಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಾಗಿದ್ದರು.

ಚಿಕಿತ್ಸೆ ಫ‌ಲಿಸದೇ ಮಂಗಳವಾರ ರಾತ್ರಿಸಾವನ್ನಪ್ಪಿದರು.ವಿಷಯ ತಿಳಿದು ರಾಜಮ್ಮ ಪುತ್ರ ಮಂಜುಬುಧವಾರ ಮುಂಜಾನೆ ಆಸ್ಪತ್ರೆಗೆ ಧಾವಿಸಿ,ಮೃತದೇಹ ನೀಡುವಂತೆ ಕೋರಿಕೊಂಡಿದ್ದಾರೆ.

ಆಗ ಆಸ್ಪತ್ರೆಯಲ್ಲಿನ ಇಬ್ಬರು ಸಿಬ್ಬಂದಿ ಪ್ರತಿಕ್ರಿಯಿಸಿ,”ಪಿಪಿಇ ಕಿಟ್‌ ಧರಿಸಿ ನಾವೇ ಅಂತ್ಯಕ್ರಿಯೆ ಮಾಡಬೇಕು. ಇದಕ್ಕಾಗಿ 5 ಸಾವಿರ ರೂ.ನೀಡಬೇಕು.ಇಲ್ಲದಿದ್ದರೆ ನೀವೇ ಸ್ವಂತ ವಾಹನ ಮಾಡಿಕೊಂಡುಮೃತದೇಹ ತೆಗೆದುಕೊಂಡು ಹೋಗಿ’ ತಿಳಿಸಿದ್ದಾರೆಎನ್ನಲಾಗಿದೆ.ಸೋಂಕಿತ ಮೃತದೇಹವನ್ನು ಆಸ್ಪತ್ರೆಯವರೇಸಾಗಿಸಬೇಕು. ಯಾವ ಪಂಚಾಯಿತಿ ವ್ಯಾಪ್ತಿಗೆಸೇರುತ್ತದೆಯೋ ಆ ಪಂಚಾಯಿತಿ ಪಿಡಿಒನೇತೃತ್ವದಲ್ಲಿ ಅಂತ್ಯ ಸಂಸ್ಕಾರನೆರವೇರಿಸಿಕೊಡಬೇಕುಎಂಬುದು ನಿಯಮವಾಗಿದೆ.

ಬಳಿಕ ಪುತ್ರ ಮಂಜು ಮಾಧ್ಯಮದವರ ಮೊರೆಹೋಗಿದ್ದಾರೆ. ಸ್ಥಳಕ್ಕಾಗಮಿಸಿದ ಮಾಧ್ಯಮದವರುಈ ಬಗ್ಗೆ ಪ್ರಶ್ನಿಸಿದಾಗ “ನಾವು ಹಣ ಕೇಳೇ ಇಲ್ಲ’ಎಂದು ಸಬೂಬು ಹೇಳಿದ ಆಸ್ಪತ್ರೆ ಸಿಬ್ಬಂದಿ ಕೆಲವೇಕ್ಷಣದಲ್ಲಿ ಮೃತದೇಹವನ್ನು ಪುರಸಭೆಯಶವಸಾಗಣೆ ವಾಹನದಲ್ಲಿ ಸರಗೂರು ತಾಲೂಕಿನಕುಂದೂರು ಗ್ರಾಮಕ್ಕೆ ಕಳುಹಿಸಿಕೊಟ್ಟಿದ್ದಾರೆ. ನಂತರಗ್ರಾಮದಲ್ಲಿ ಜೆಸಿಬಿ ಯಂತ್ರದ ಮೂಲಕಅಂತ್ಯಕ್ರಿಯೆ ನಡೆಸಲಾಗಿದೆ.

Advertisement

ಈ ಸಂದರ್ಭದಲ್ಲಿಅಂತ್ಯಸಂಸ್ಕಾರದ ವೆಚ್ಚವಾಗಿ ಜೆಸಿಬಿ ಚಾಲಕ 5ಸಾವಿರ ರೂ. ಪಡೆದುಕೊಂಡಿದ್ದರು. ಈ ಕುರಿತುಪಿಡಿಒ ಅವರನ್ನು ಪ್ರಶ್ನಿಸಿದಾಗ, ಹಣ ಪಡೆದಿರುವವಿಚಾರ ನನಗೆ ತಿಳಿದೇ ಇಲ್ಲ ಎಂದು ಸ್ಪಷ್ಟನೆ ನೀಡಿ,ಕೆಲ ಸಮಯದ ಬಳಿಕ ಮೃತರ ಕುಟುಂಬದವರಿಗೆಹಣವನ್ನು ವಾಪಸ್‌ ನೀಡಿದ್ದಾರೆ. ಈ ರೀತಿಯಘಟನೆಗಳು ನಡೆಯುತ್ತಲೇ ಇರುತ ¤ವೆ. ಮನೆಯವರನ್ನುಕಳೆದುಕೊಂಡು ದುಃಖದ ಮಡುವಿನಲ್ಲಿರುವಾಗ ಹೀಗೆ ಹಣಕ್ಕೆ ಬೇಡಿಕೆಯೊಡ್ಡುವುದು ಎಷ್ಟರಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next