ಚಾಮರಾಜನಗರ: “ಜಿಲ್ಲೆಯಲ್ಲಿ ಮೇ 17ರಿಂದಕೋವಿಡ್ ಪರೀಕ್ಷೆಗಳನ್ನು ಏಕಾಏಕಿ ಕಡಿಮೆಮಾಡಲಾಗುತ್ತಿದ್ದು ಇದರಿಂದಾಗಿ ಪ್ರಕರಣಗಳಸಂಖ್ಯೆಯೂ ಕಡಿಮೆ ವರದಿಯಾಗುತ್ತಿದೆ. ಹೀಗಾಗಿಮೇಲ್ನೋಟಕ್ಕೆ ಜನ ಜಿಲ್ಲೆಯಲ್ಲಿ ಕೋವಿಡ್‌ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಎಂದುಭಾವಿಸುವುದು ತಪ್ಪು’.!8-10 ದಿನಗಳ ಹಿಂದಿನವರೆಗೂ ಜಿಲ್ಲೆಯಲ್ಲಿ ದಿನಕ್ಕೆಸರಾಸರಿ 2000 ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗುತ್ತಿತ್ತು.
ಆಗ ಪ್ರತಿನಿತ್ಯ ಸರಾಸರಿ 500ರಿಂದ 600 ಪ್ರಕರಣ ವರದಿಯಾಗುತ್ತಿದ್ದವು. ಆದರೆ,ಕಳೆದ 10 ದಿನಗಳಿಂದ ಪ್ರತಿದಿನ 1000 ದಿಂದ 1200ಪರೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ ಪ್ರತಿದಿನ 300ರಿಂದ 400 ಪ್ರಕರಣಗಳಷ್ಟೇ ವರದಿಯಾಗುತ್ತಿವೆ.ಮೇ ತಿಂಗಳ ಆರಂಭದಲ್ಲಿ 2000 ದಷ್ಟು ಮಾದರಿಗಳನ್ನು ಪರೀಕ್ಷಿಸಲಾಗುತ್ತಿತ್ತು. ಮೇ 3ರಂದು 1974ಮಾದರಿ ಪರೀಕ್ಷೆ ಮಾಡಿದಾಗ, 726 ಪಾಸಿಟಿವ್‌ಬಂದಿತ್ತು. ಮೇ 5ರಂದು 1882 ಪರೀಕ್ಷೆಗೆ 553ಪಾಸಿಟಿವ್ ಆಗಿತ್ತು. ಮೇ 7 ರಂದು 2220 ಮಾದರಿ ಪರೀಕ್ಷಿಸಲಾಗಿ, 611 ಪಾಸಿಟಿವ್ ಬಂದಿದ್ದವು.
ಮೇ8ರಂದು 667 ಪ್ರಕರಣ ವರದಿಯಾಗಿದ್ದವು, ಅಂದಿನಪರೀಕ್ಷೆಗಳ ಸಂಖ್ಯೆ 1819. ಮೇ 10ರಂದು 669ಪ್ರಕರಣ ಪತ್ತೆಯಾಗಿದ್ದವು. ಅಂದು ಮಾಡಿದ್ದ ಪರೀಕ್ಷೆ2286. ಮೇ 13ರಂದು 799 ಮಂದಿಗೆ ಪಾಸಿಟಿವ್‌ಆಗಿತ್ತು. ಅಂದು ಪರೀಕ್ಷಿಸಿದ ಮಾದರಿಗಳ ಸಂಖ್ಯೆ1678 ಆಗಿತ್ತು.ಮೇ 15ರಂದು ದಾಖಲೆ ಪ್ರಮಾಣದಲ್ಲಿ ಅಂದರೆ2842 ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 535ಪ್ರಕರಣ ಪಾಸಿಟಿವ್ ಆಗಿದ್ದವು. ಮೇ 16 ರಂದು2186 ಪರೀಕ್ಷೆ ನಡೆಸಲಾಗಿತ್ತು.
ಅಂದು 444 ಪ್ರಕರಣಪಾಸಿಟಿವ್ ಆಗಿದ್ದವು.ಈ ಅಂಕಿ ಅಂಶಗಳನ್ನೇ ನೋಡಿದಾಗ ಒಂದುವಿಷಯ ಸ್ಪಷ್ಟವಾಗುತ್ತಾ ಹೋಗುತ್ತದೆ. ಪರೀಕ್ಷಾಸಂಖ್ಯೆಗಳನ್ನು ಹೆಚ್ಚು ಮಾಡಿದಾಗ ಪ್ರಕರಣಗಳೂಹೆಚ್ಚು ಬೆಳಕಿಗೆ ಬರುತ್ತವೆ. ಪರೀಕ್ಷಾ ಸಂಖ್ಯೆ ಕಡಿಮೆಮಾಡಿದ ನಂತರ ಪ್ರತಿದಿನ ಪಾಸಿಟಿವ್ ಪ್ರಮಾಣವೂಇಳಿಕೆಯಾಗುತ್ತದೆ.
ರಾಜ್ಯ ಸರ್ಕಾರದ ಆದೇಶ: ಕೋವಿಡ್ ಲಕ್ಷಣಹೊಂದಿರುವವರಿಗೆ ಮಾತ್ರ ಪರೀಕ್ಷೆ ನಡೆಸಬೇಕು,ಲಕ್ಷಣಗಳು ಇಲ್ಲದವರನ್ನು ಪರೀಕ್ಷಿಸುವ ಅಗತ್ಯವಿಲ್ಲಎಂಬ ಸರ್ಕಾರದ ಆದೇಶ ಪರೀಕ್ಷಾ ಸಂಖ್ಯೆಗಳನ್ನುಕಡಿಮೆ ಮಾಡಲು ಕಾರಣ.
ಜನತೆ ಆತಂಕ:ಒಂದನೇ ಅಲೆ ವೇಳೆ ರಾಜ್ಯ ಸರ್ಕಾರ, ಹೆಚ್ಚುಪರೀಕ್ಷೆ ನಡೆಸಿ ಸೋಂಕಿತರನ್ನು ಪತ್ತೆ ಹಚ್ಚಿದ್ದು, ಪ್ರಕರಣಕಡಿಮೆಯಾಗಲು ಕಾರಣ ಎಂದು ತಿಳಿಸಿತ್ತು. ಈಗ2ನೇ ಅಲೆ ಸಂದರ್ಭದಲ್ಲಿ ಕಡಿಮೆ ಸಂಖ್ಯೆಯ ಪರೀಕ್ಷೆನಡೆಸುವ ಮೂಲಕ ಸರ್ಕಾರವೇ ಸೋಂಕಿತರಪತ್ತೆಯನ್ನು ನಿಧಾನವಾಗುವಂತೆ ಮಾಡುತ್ತಿದೆ ಎಂದುಜಿಲ್ಲೆಯ ಜನತೆ ಆತಂಕಪಡುತ್ತಿದ್ದಾರೆ.
ಕೆ.ಎಸ್.ಬನಶಂಕರ ಆರಾಧ್ಯ