Advertisement
ತಾಲೂಕಿನ ವ್ಯಾಪ್ತಿಯಲ್ಲಿ ಸದ್ಯಕ್ಕೆ ಕೋವಿಡ್ ಪರಿಸ್ಥಿತಿ ಹೇಗಿದೆ ?
Related Articles
Advertisement
ಕೋವಿಡ್ ಸಂಕಷ್ಟಕ್ಕೆ ನಿಮ್ಮ ಕೊಡುಗೆ ಏನು ?
ಕೊರೋನಾ ಸಂಕಷ್ಟಕ್ಕೆ ಕೇಂದ್ರ ಮತ್ತು ರಾಜ್ಯಸರಕಾರದಿಂದ ನೀಡಬೇಕಾದ ಎಲ್ಲಾ ರೀತಿಯಸೌಲಭ್ಯಗಳನ್ನು ತಾಲೂಕಿಗೆ ಕೊಡಿಸಿಕೊಡಲಾಗಿದೆ.ದೆಹಲಿಯಲ್ಲಿರುವ ಎನ್‌ಡಿಆರ್‌ಎಫ್ ಯವರಸಂಪರ್ಕ ಸಾಧಿಸಿ 40ಕ್ಕೂ ಹೆಚ್ಚು ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳನ್ನು ಹಾಗೂ 2 ವೆಂಟಿಲೇಟರ್‌ಗಳನ್ನುಕೊಡಿಸಿಕೊಡಲಾಗಿದೆ. ಸ್ವತಃ ಸೋಂಕಿಗೆ ಒಳಗಾದಸಂದರ್ಭದಲ್ಲಿಯೂ ಉಸ್ತುವಾರಿ ಸಚಿವರು ಮತ್ತುಸಂಸದರೊಂದಿಗೆ ಚರ್ಚಿಸಿ ಅಧಿಕಾರಿಗಳೊಂದಿಗೆಸಮನ್ವಯತೆ ಸಾಧಿಸಿ ಸೋಂಕಿತರಿಗೆ ಸೂಕ್ತಅನುಕೂಲತೆಗಳನ್ನು ಕಲ್ಪಿಸಿಕೊಡಲಾಗಿದೆ.ನನ್ನ ಅನುದಾನದಲ್ಲಿ ಎಲ್ಲಾ ಪಿಎಚ್‌ಸಿಗಳಿಗೂತಲಾ 5, ಹಾಗೂ ಸೋಲೂರು ಹೋಬಳಿಯ 3ಪಿಎಚ್‌ಸಿಗಳಿಗೆ 10 ಸೇರಿದಂತೆ 60 ಆಕ್ಸಿಜನ್‌ಕಾನ್ಸನ್ ಟ್ರೇಟರ್‌ಗಳನ್ನು ನೀಡಲುಕ್ರಮವಹಿಸುತಿದ್ದೇನೆ.
ಕೋವಿಡ್ ಆಸ್ಪತ್ರೆಗಳು, ಕೇರ್ ಸೆಂಟರ್‌ಗಳಿಗೆ ಭೇಟಿ ನೀಡಿದ್ದೀರಾ?
ಹೌದು ಈಗಾಗಲೆ ಸಾಕಷ್ಟು ಭಾರಿ ಭೇಟಿ ನೀಡಿಅಲ್ಲಿನ ಆರೋಗ್ಯ ಸಿಬ್ಬಂದಿ ಮತ್ತು ಸೋಂಕಿತರಸಮಸ್ಯೆಗಳನ್ನು ಆಲಿಸಿದ್ದೇನೆ. ನಿನ್ನೆಯೂ ಕೇರ್‌ಸೆಂಟರ್ ಮತ್ತು ಆಸ್ಪತ್ರಗೆ ಭೇಟಿ ನೀಡಿಅಗತ್ಯತೆಗಳನ್ನು ಪೂರೈಸಲು ತಹಶೀಲ್ದಾರ್‌ಮಂಜುನಾಥ್ ಅವರಿಗೆ ತಿಳಿಸಿದ್ದೇನೆ. ಎಲ್ಲಾರೀತಿಯ ಪರಿಕರಗಳನ್ನು ಬಳಕೆ ಮಾಡಲಾಗುತ್ತಿದೆ.ಸದ್ಯಕ್ಕೆ ಬೆಡ್, ಆಕ್ಸಿಜನ್ ಸೇರಿದಂತೆ ಆಂಬುಲೆನ್ಸ್‌ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆಎಚ್ಚರಿಕೆ ವಹಿಸಲಾಗಿದೆ.
ಸಾಮಾನ್ಯ ವ್ಯಕ್ತಿಯಾಗಿ ಕೊರೊನಾ ತಡೆಗೆ ನಿಮ್ಮ ಸಲಹೆ ?
ನನ್ನ ಪ್ರಕಾರ ಹೇಳುವುದಾರರೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೋವಿಡ್ ವಿಚಾರದಲ್ಲಿ ಮೈ ಮರೆತಫಲವಾಗಿ ರಾಜ್ಯ ಸಂಕಷ್ಟವನ್ನು ಎದುರಿಸಬೇಕಾಯಿತು. ಮೊದಲನೇ ಅಲೆ ಬಳಿಕ ಎಚ್ಚೆತ್ತುಕೊಂಡಿದ್ದರೆ ಸಮಸ್ಯೆಉಲ್ಬಣವಾಗುತ್ತಿರಲಿಲ್ಲ, ಪ್ರಸ್ತುತ ಜಾರಿಯಲ್ಲಿರುವ ಕಠಿಣ ಕ್ರಮಗಳನ್ನು ಈ ಮೊದಲೆ ತೆಗೆದುಕೊಳ್ಳಬೇಕಿತ್ತು.ಸರ್ಕಾರ ನಿಲುವಿನಿಂದ ಅನೇಕ ಜನ ಪ್ರಾಣ ತೆತ್ತರು. ಪ್ರಸ್ತುತ ಜನರು ಜಾಗೃತಿ ವಹಿಸಿ, ಸ್ವತ್ಛತೆ, ಅಂತರಕಾಪಾಡಿಕೊಂಡರೆ ಈಗಲೂ ಕೊರೊನಾ ನಿರ್ನಾಮ ಸಾಧ್ಯ.ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೊನಾಕ್ಕೆ ಕಡಿವಾಣ ಹಾಕುವಲ್ಲಿ ನನ್ನೊಂದಿಗೆ ಹಗಲಿರುಳೆನ್ನದೆಶ್ರಮಿಸುತ್ತಿರುವ ತಾಲೂಕು ಆಡಳಿತ, ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗ, ಸಂಘಸಂಸ್ಥೆಗಳು ಹಾಗೂ ಕೋರೊನಾ ವಾರಿಯರ್ಗಳ ಸಹಕಾರ ಮತ್ತು ಸಂಸದಬಿ.ಎನ್.ಬಚ್ಚೇಗೌಡರು ಹಾಗೂ ವಿಧಾನಪರಿಷತ್ ಸದಸ್ಯ ಎಸ್.ರವಿ ಅವರುಗಳು ತಲಾ25ಲಕ್ಷ ರೂ. ಗಳನ್ನು ಕ್ಷೇತ್ರ ಸಂಕಷ್ಟಕ್ಕೆ ನೀಡಿದ್ದು ಅಭಿನಂದನಾರ್ಹವಾಗಿವೆ.
ಕೊಟ್ರೇಶ್.ಆರ್