ಮೈಸೂರು: ಮೈಸೂರು ತಾಲೂಕು ವ್ಯಾಪಿ ¤ಯಲ್ಲಿ ಸೋಂಕು ಹೆಚ್ಚಿರುವುದರಿಂದ ಇಲವಾಲಹೋಬಳಿಯಲ್ಲಿ 200 ಹಾಸಿಗೆ ಸಮಾರ್ಥ್ಯದಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದುಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ನಗರದ ದಟ್ಟಗಳ್ಳಿಯ ವಿಶ್ವಪ್ರಜ್ಞಾ ವಿದ್ಯಾಸಂಸ್ಥೆಯಲ್ಲಿ ಆರಂಭಿಸಲಾಗಿರುವ ಕೋವಿಡ್‌ಮಿತ್ರ ಕೇಂದ್ರದಲ್ಲಿ ಆ್ಯಂಬುಲೆನ್ಸ್ ಸೇವೆಗೆಚಾಲನೆ ನೀಡಿ ಮಾತನಾಡಿದ ಅವರು,ಸೋಂಕು ನಿಯಂತ್ರಣಕ್ಕೆ ಹಾಗೂ ಹೋಂಐಸೋಲೇಷನ್ ಮಾಡುವುದನ್ನು ತಗ್ಗಿಸುವಸಲುವಾಗಿ ಇಲವಾಲದ ಬಳಿ ಇರುವತೋಟಗಾರಿಕ ಇಲಾಖೆಯ ಹಾಸ್ಟೆಲ್‌ನಲ್ಲಿ 200ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ತೆರೆಯತ್ತಿದ್ದೇವೆ.
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆಎಂದರು.ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿನಸೋಂಕಿತರಿಗೆ ಔಷಧ ಕಿಟ್ ನೀಡಲಾಗುತ್ತಿದ್ದು,ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವಆಶಾ, ಅಂಗನವಾಡಿ ಕಾರ್ಯಕರ್ತರಿಗೂಅಗತ್ಯ ಸಾಮಗ್ರಿ ನೀಡಿದ್ದೇವೆ.
ಈ ವ್ಯಾಪ್ತಿಯಲ್ಲಿಸುಮಾರು 700 ಮಂದಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದಾರೆ. ಅವರುಪ್ರತಿ ಮನೆಗೆ ಭೇಟಿ ನೀಡಿ ಸರ್ವೆ ಮಾಡಲುಅನುಕೂಲವಾಗುವ ದೃಷ್ಟಿಯಿಂದ ಅಗತ್ಯಉಪಕರಣಗಳು, 10 ಗ್ಲೌಸ್,ಫೇಸ್‌ಶೀಲ್ಡ್, ಬಿಸಿನೀರು ಶೇಖರಿಸಲು ಅನುಕೂಲವಾಗುವ ಬಾಟಲ್‌ಗಳನ್ನು ಕೊಟ್ಟಿದ್ದೇವೆ ಎಂದರು.
ಇದಕ್ಕೂ ಮುನ್ನ ಚಾಮುಂಡೇಶ್ವರಿಕ್ಷೇತ್ರದ ವ್ಯಾಪ್ತಿಯಲ್ಲಿರುವ ವಾರ್ಡ್‌ಗಳಾದ44, 45, 46, 58 ಹಾಗೂ ಕೋವಿಡ್ ಮಿತ್ರಕೇಂದ್ರಗಳಲ್ಲಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಸ್ಥಳಾಂತರ ಮಾಡಲು, ಆಸ್ಪತ್ರೆಗೆ ದಾಖಲಿಸಲು ಅನುಕೂಲವಾಗಲೆಂದು ಶಾಸಕ ಜಿ.ಟಿ.ದೇವೇಗೌಡ ವೈಯಕ್ತಿಕವಾಗಿ ಆ್ಯಂಬುಲೆನ್ಸ್ ಹಸ್ತಾಂತರಿಸಿದರು. ಈ ವೇಳೆ ಪಾಲಿಕೆ ಸದಸ್ಯರಾದಸವಿತಾ ಸುರೇಶ್, ನಿರ್ಮಲಾ ಹರೀಶ್, ಲಕ್ಷ್ಮೀಕಿರಣ್, ಶರತ್ ಕುಮಾರ್ ಮತ್ತಿತರರಿದ್ದರು.