Advertisement
ಯಶವಂತಪುರ ವಿಧಾನಸಭಾ ಕ್ಷೇತ್ರದ ತಾವರೆಕೆರೆ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿಚೋಳನಾಯಕನಹಳ್ಳಿ, ತಾವರೆಕೆರೆ, ಅಜ್ಜನಹಳ್ಳಿ,ಚಿಕ್ಕನಹಳ್ಳಿ ಹಾಗೂ ಚುಂಚನಕುಪ್ಪೆ ಗ್ರಾಪಂವ್ಯಾಪ್ತಿಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವ್ಯಕ್ತಿಗಳ 38 ಕುಟುಂಬಗಳಿಗೆ 1 ಲಕ್ಷ ರೂ. ಧನಸಹಾಯವನ್ನು ವಿತರಿಸಿ ಮಾತ ನಾಡಿದರು.
Related Articles
Advertisement
ಸಿಎಂ ಪುತ್ರ ರಾಜ್ಯದ ಉಪಾಧ್ಯಕ್ಷರಾಗಿದ್ದು,ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆಯಲ್ಲಿತೊಡಗಿಸಿಕೊಂಡಿದ್ದು, ಯಾವುದೇ ರೀತಿಯಲ್ಲಿನನ್ನ ಖಾತೆಯಲ್ಲಿ ಹಸ್ತಕ್ಷೇಪ ನಡೆಸಿಲ್ಲ, ಯಾವುದೇಸಚಿವರ ಖಾತೆಯಲ್ಲೂ ಹಸ್ತಕ್ಷೇಪ ನಡೆಸಿಲ್ಲ.ಸಿ.ಪಿ.ಯೋಗೊಶ್ವರ್ ಅವರ ಹೇಳಿಕೆ ಸತ್ಯಕ್ಕೆದೂರವಾದ ಮಾತು ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಕೊರೊನಾ ನಿಯಂತ್ರಣಕ್ಕೆ ಹಲವಾರುಯೋಜನೆಗಳನ್ನು ಹಮ್ಮಿಕೊಂಡಿದ್ದು, ನಗರ,ಗ್ರಾಮಾಂತರ ಭಾಗದ ಪ್ರತಿ ಮನೆ ಮನೆಗೆ ತೆರಳಿಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಮನವೊಲಿಸಿಕ್ಷೇತ್ರದ ಎಲ್ಲಾ ಜನರಿಗೆ ಅವಶ್ಯಕತೆ ಇದ್ದಲ್ಲಿ ಸೂಕ್ತಚಿಕಿತ್ಸೆ ಕೊಡಿಸಲಾಗುವುದು. ಎಂಥಹ ಪರಿಸ್ಥಿತಿಯಲ್ಲೂ ಜನರು ಧೃತಿಗೆಡದೆ ಸದಾ ಕಾಲನಿಮ್ಮ ರಕ್ಷಣೆಗೆ ನಾನು ಇದ್ದೇನೆ ಎಂಬ ಭರವಸೆನೀಡಲಾಗುವುದು ಎಂದರು.
ಎಂಎಲ್‌ಸಿ ರವಿಕುಮಾರ್, ತಾವರೆಕೆರೆ ಗ್ರಾಪಂಅಧ್ಯಕ್ಷ ಟಿ.ಎಲ್.ಕೆಂಪೇಗೌಡ, ಬೆಂಗಳೂರು ನಗರಜಿಪಂ ಅಧ್ಯಕ್ಷ ಟಿ.ಜಿ.ನರಸಿಂಹಮೂರ್ತಿ,ಬೆಂಗಳೂರು ದಕ್ಷಿಣ ವಿಭಾಗದಉಪವಿಭಾಗಾಧಿಕಾರಿ ಡಾ.ಶಿವಣ್ಣ, ಚುಂಚನಕುಪ್ಪೆಗ್ರಾಪಂ ಅಧ್ಯಕ್ಷ ಸೂಲಿವಾರ ಬಸವರಾಜು,ಮುಖಂಡರಾದ ನಿಶಾಂತ್ ಸೋಮಶೇಖರ್,ಡಿ.ಹನುಮಂತಯ್ಯ, ಡಿ.ಆನಂದಸ್ವಾಮಿ,ರಾಮಕೃಷ್ಣ ಇತರರು ಇದ್ದರು.