Advertisement
ಈ ಪರಿಸ್ಥಿತಿಯನ್ನು ನಿರ್ವಹಣೆ ಮಾಡಲುನೀವೇನು ಕೆಲಸ ಮಾಡಿದ್ದೀರಿ?
Related Articles
Advertisement
ನಾನು1 ಕೋಟಿ ಹಣವನ್ನೂಕೋವಿಡ್ ನಿರ್ವಹಣೆಗೆನೀಡಲು ಸಿದ್ಧನಿದ್ದೇನೆ. ನನ್ನಕ್ಷೇತ್ರದಲ್ಲಿ ಕೊರೊನಾ ಕಡಿಮೆಮಾಡಬೇಕೆಂಬುದಷ್ಟೇ ನನ್ನ ಕಾಳಜಿ.ಇದಲ್ಲದೇ ಕೋವಿಡ್‌ನಿಂದ ಮೃತಪಟ್ಟಬಡ ಕುಟುಂಬಗಳಿಗೆ ನನ್ನ ಸ್ವಂತ ಹಣದಿಂದ ತಲಾ 10ಸಾವಿರ ರೂ. ನೆರವು ನೀಡುತ್ತಿದ್ದೇನೆ. ಪ್ರತಿ ಗ್ರಾಪಂಗೆ1000ದಷ್ಟು ಎನ್ 95 ಮಾಸ್ಕ್ ವಿತರಿಸುತ್ತಿದ್ದೇನೆ.
ನಿಮ್ಮ ಕ್ಷೇತ್ರದಲ್ಲಿ ರೋಗಿಗಳಿಗೆ ಅಗತ್ಯಹಾಸಿಗೆ, ಆಕ್ಸಿಜನ್ ಲಭ್ಯ ಇದೆಯೇ?
ನಮ್ಮ ಕ್ಷೇತ್ರದಲ್ಲಿ ಪ್ರಕರಣಗಳು ಜಾಸ್ತಿಯಿವೆ. ಜಿಲ್ಲಾಕೇಂದ್ರ ನನ್ನ ಕ್ಷೇತ್ರದ ವ್ಯಾಪ್ತಿಗೇ ಬರುತ್ತದೆ. ಜಿಲ್ಲಾಕೋವಿಡ್ ಆಸ್ಪತ್ರೆಯ ಎಲ್ಲ ಬೆಡ್‌ಗಳೂಭರ್ತಿಯಾಗಿವೆ. ಸದ್ಯಕ್ಕೆ ಆಕ್ಸಿಜನ್ ಸಮಸ್ಯೆಯಿಲ್ಲ.ಆದರೂ ಮುಂದಿನ ದಿನಗಳಲ್ಲಿ ಆಕ್ಸಿಜನ್ ಪೂರೈಕೆಹೆಚ್ಚು ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು.
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿಆಕ್ಸಿಜನ್ ದುರಂತ ಸಂಭವಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಕೇತ್ರದಶಾಸಕರಿಗೂ ಇತ್ತು ಎಂಬ ಟೀಕೆಯಿದೆ?
ನಾನು ಅಂದು ಬೆಳಗ್ಗೆಯೇ ಇದರ ಬಗ್ಗೆ ಗಮನಹರಿಸಿದ್ದೇನೆ. ಮೇ 2ನೇ ತಾರೀಕು ಬೆಳಗ್ಗೆ ಡೀನ್‌ಗೆ ಕರೆಮಾಡಿ ಆಸ್ಪತ್ರೆಯಲ್ಲಿ ಏನಾದರೂ ಸಮಸ್ಯೆ ಇದೆಯೇಎಂದು ವಿಚಾರಿಸಿದೆ. ಆಕ್ಸಿಜನ್ ಕೊರತೆ ಇದೆ,ಜಿಲ್ಲಾಧಿಕಾರಿಯವರ ಜೊತೆ ಮಾತನಾಡಿ ಎಂದರು.
ಡೀಸಿಯವರಿಗೆ ಕರೆ ಮಾಡಿ ಈ ಬಗ್ಗೆ ಕ್ರಮಕೈಗೊಳ್ಳಲು ಸೂಚಿಸಿದೆ. ನಂತರ ಕೈಗಾರಿಕಾ ಸಚಿವಜಗದೀಶ ಶೆಟ್ಟರ್ ಅವರಿಗೆ ಕರೆ ಮಾಡಿ ಆಕ್ಸಿಜನ್‌ವ್ಯವಸ್ಥೆ ಮಾಡಿ ಎಂದೆ. ಬಳಿಕ ಮುಖ್ಯ ಕಾರ್ಯದರ್ಶಿರವಿಕುಮಾರ್ ಅವರಿಗೆ ಕರೆ ಮಾಡಿ ಸಮಸ್ಯೆ ತಿಳಿಸಿದೆ.ಆದರೂ ಪ್ರಯೋಜನವಾಗಲಿಲ್ಲ. ಅಂದು ರಾತ್ರಿಯೇದುರಂತ ನಡೆಯಿತು. 36 ಜನರು ಆಕ್ಸಿಜನ್‌ಕೊರತೆಯಿಂದ ಸಾಯಲು ರಾಜ್ಯ ಸರ್ಕಾರವೇ ನೇರಕಾರಣ.
ಗ್ರಾಮಗಳಲ್ಲಿ ಕೋವಿಡ್ ಸೋಂಕುಇದ್ದರೂ ಜನರು ನಿರ್ಲಕ್ಷ್ಯ ತೋರುತ್ತಿದ್ದಾರೆ.ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ?
ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಆಶಾ, ಅಂಗನವಾಡಿ ಕಾರ್ಯಕರ್ತರು, ವೈದ್ಯರು,ಪಂಚಾಯಿತಿ ಸದಸ್ಯರನ್ನೊಳಗೊಂಡ ಟಾಸ್ಕ್ಫೋರ್ಸ್‌ಸಭೆ ನಡೆಸುತ್ತಿದ್ದೇನೆ. ರೋಗ ಲಕ್ಷಣಗಳುಕಾಣಿಸಿಕೊಂಡ ತಕ್ಷಣವೇ ಟ್ರಯಾಜ್ ಸೆಂಟರ್‌ಗೆಕರೆತರಬೇಕೆಂದು ಸೂಚಿಸಿದ್ದೇನೆ. ಸರ್ಕಾರಪರೀಕ್ಷೆಗಳನ್ನು ಹೆಚ್ಚಿಸಬೇಕು. ಪ್ರತಿ ಹಳ್ಳಿಯಲ್ಲೂ ಟೆಸ್ಟ್‌ಗಳನ್ನು ಮಾಡಬೇಕು. ಹೋಂ ಐಸೋಲೇಷನ್‌ಮಾಡಬಾರದು.