Advertisement

ನ್ಯಾಮತಿ ಕೆಪಿಎಸ್‌ ಶಾಲೆಯಲ್ಲಿ ಲಸಿಕಾಕರಣ

03:01 PM Jan 04, 2022 | Team Udayavani |

ಹೊನ್ನಾಳಿ: ನ್ಯಾಮತಿ ಪಟ್ಟಣದ ಕರ್ನಾಟಕ ಪಬ್ಲಿಕ್‌ ಶಾಲೆಯಪಿಯು ಕಾಲೇಜಿನ ವಿಭಾಗದ ಪ್ರಥಮ ಹಾಗೂ ದ್ವಿತೀಯಪಿಯುಸಿ ವಿದ್ಯಾರ್ಥಿಗಳಿಗೆ ಹಾಗೂ ಪ್ರೌಢಶಾಲಾ ವಿಭಾಗದ15 ವರ್ಷ ವಯೋಮಿತಿ ಮೀರಿದ9ಮತ್ತು 10ನೇ ತರಗತಿವಿದ್ಯಾರ್ಥಿಗಳಿಗೆ ಸೋಮವಾರ ಲಸಿಕಾ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿತ್ತು.

Advertisement

ಕಾಲೇಜು ಪ್ರಾಂಶುಪಾಲ ವಿ.ಪಿ. ಪೂರ್ಣಾನಂದ ಮಾಹಿತಿನೀಡಿ, ಕಾಲೇಜು ವಿಭಾಗದ ಒಟ್ಟು508 ವಿದ್ಯಾರ್ಥಿ ಹಾಗೂವಿದ್ಯಾರ್ಥಿನಿಯರ ಪೈಕಿ 443 ವಿದ್ಯಾರ್ಥಿಗಳಿಗೆ ಹಾಗೂಪ್ರೌಢಶಾಲಾ ವಿಭಾಗದ ಒಟ್ಟು 167 ವಿದ್ಯಾರ್ಥಿಗಳಿಗೆ ಲಸಿಕೆಹಾಕಲಾಗಿದ್ದು, ಶೇ. 90ರಷ್ಟು ಲಸಿಕಾ ಸಾಧನೆ ಮಾಡಲಾಗಿದೆ.ಗೈರಾದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಲಸಿಕೆನೀಡಲಾಗುವದು ಎಂದು ತಿಳಿಸಿದರು.

ಲಸಿಕಾ ಕಾರ್ಯಕ್ರಮದಲ್ಲಿ ನ್ಯಾಮತಿ ಹಾಗೂಒಡೆಯರಹತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಸಿಬ್ಬಂದಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿದರು.ಉಪನ್ಯಾಸಕರಾದ ಎಚ್‌.ಆರ್‌. ಗಂಗಾಧರ, ಶಿವಕುಮಾರ್‌,ಗಂಗಾಧರ ನವುಲೆ, ಡಾ| ನಾದ, ರಾಜಶ್ರೀ, ಶಾಂತಲಾ,ಆಕಾಶ್‌, ರೂಪಾ, ಮಂಜುನಾಥ್‌, ತಾಪಂ ಮಾಜಿ ಉಪಾಧ್ಯಕ್ಷಸಿದ್ಧಲಿಂಗಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next