ದಾವಣಗೆರೆ: ನಗರದ ಹಳೇ ಭಾಗಗಳಾದ ಆಜಾದ್ ನಗರಹಾಗೂ ಮಂಡಕ್ಕಿ ಭಟ್ಟಿ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದಜಿಲ್ಲಾಡಳಿತದ ಹಿರಿಯ ಅಧಿಕಾರಿಗಳ ತಂಡ ಜನರು ಕೆಲಸ ಮಾಡುವಸ್ಥಳಗಳಿಗೇ ಹೋಗಿ ಕೋವಿಡ್ ಲಸಿಕೆ ಹಾಕಿ ಲಸಿಕಾ ಅಭಿಯಾನ ನಡೆಸಿತು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ| ವಿಜಯಮಹಾಂತೇಶ್‌ದಾನಮ್ಮನವರ್ ನೇತೃತ್ವದ ವಿವಿಧ ಅಧಿಕಾರಿಗಳ ತಂಡ ಮನೆಮನೆಗೆ ತೆರಳಿ ಹಾಗೂ ಮಂಡಕ್ಕಿ ಭಟ್ಟಿಗಳಲ್ಲಿ ಕಾರ್ಯ ನಿರ್ವಹಿಸುವಕಾರ್ಮಿಕರಿಗೆ ಲಸಿಕೆ ನೀಡಿತು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಮಹಾಂತೇಶ ಬೀಳಗಿ, ಜಿಲ್ಲೆಯಲ್ಲಿ ಲಸಿಕೆ ನೀಡಿಕೆ ಪ್ರಮಾಣಗ್ರಾಮಾಂತರ ಪ್ರದೇಶದಲ್ಲಿ ಶೇ. 100ರಷ್ಟಿದೆ. ಆದರೆ ನಗರಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಿದೆ.
ಹೀಗಾಗಿ ಲಸಿಕೆನೀಡಿಕೆ ಚುರುಕುಗೊಳಿಸಲು ಕಳೆದೊಂದು ವಾರದಿಂದ ಅಭಿಯಾನರೂಪದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ದಿನೇದಿನೇ ಲಸಿಕೆ ನೀಡಿಕೆ ಪ್ರಮಾಣ ಹೆಚ್ಚಳವಾಗುತ್ತಿದ್ದು, ಶೇ. 96 ಇರುವಲಸಿಕಾ ಗುರಿ ಶೀಘ್ರದಲ್ಲಿ ಶೇ 100ರ ಗುರಿ ತಲುಪುವ ವಿಶ್ವಾಸವಿದೆಎಂದರು.ಮಾಸ್ಕ್ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದ್ದು ಬುಧವಾರ20ರಿಂದ 30 ಜನರಿಗೆ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಲಾಗಿದೆ.
ಇನ್ನು ಮುಂದೆ ಸಾರ್ವಜನಿಕರು ಎಚ್ಚೆತ್ತುಕೊಂಡುಮಾಸ್ಕ್ ಧರಿಸಬೇಕು ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ,ಇಂದಿನಿಂದ ಬಹಳ ಕಟ್ಟುನಿಟ್ಟಾಗಿ ಮಾಸ್ಕ್ ಧರಿಸಬೇಕು. ಜನಜಂಗುಳಿನಿಯಂತ್ರಿಸಲಾಗುತ್ತದೆ. ಜಿಲ್ಲೆಯಲ್ಲಿ ಶೇ. 0.6 ಇದ್ದ ಪಾಸಿಟಿವಿಟಿಪ್ರಮಾಣ ಶೇ.1.3ರಷ್ಟಾಗಿದೆ. ಹಾಗಾಗಿ ಇಂದಿನಿಂದಲೇ ಎಲ್ಲಪ್ರದೇಶಗಳಲ್ಲೂ ನಮ್ಮ ಸಿಬ್ಬಂದಿ ಕಾರ್ಯಾಚರಣೆ ನಡೆಸಲಿದ್ದಾರೆ.ಸರ್ಕಾರದ ಆದೇಶದಂತೆ ಹೆಚ್ಚು ಜನ ಸೇರಿದರೆ ಐಪಿಸಿ 188 ರಡಿಉಲ್ಲಂಘನೆ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ರಾಘವನ್ ಮಾತನಾಡಿ, ನಗರಪ್ರವೇಶ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಎಲ್ಲ ನರ್ಸಿಂಗ್‌ಹಾಗೂ ಪ್ಯಾರಾ ಮೆಡಿಕಲ್ ಕಾಲೇಜುಗಳು ಹಾಗೂ ವಸತಿ ಶಾಲೆಯವಿದ್ಯಾರ್ಥಿಗಳಿಗೆ 15 ದಿನಗಳಿಗೊಮ್ಮೆ ತಪಾಸಣೆ ಮಾಡಲಾಗುತ್ತಿದೆಎಂದು ಹೇಳಿದರು.ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮಹಾನಗರ ಪಾಲಿಕೆಆಯುಕ್ತ ವಿಶ್ವನಾಥ್ ಮುದಜ್ಜಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ|ನಾಗರಾಜ್, ಆರ್‌ಸಿಎಚ್ ಅಧಿಕಾರಿ ಡಾ| ಮೀನಾಕ್ಷಿ, ಸಮಾಜಕಲ್ಯಾಣಾಧಿಕಾರಿ ರೇಷ್ಮಾ ಕೌಸರ್ ಸೇರಿದಂತೆ ಆರೋಗ್ಯ ಇಲಾಖೆಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.