Advertisement

ಕೋವಿಡ್‌ ಪತ್ರದ ಚಿಕ್ಕ ಕಾರ್ಡ್‌ಗೆ ಡಿಮ್ಯಾಂಡ್‌

01:50 PM Dec 09, 2021 | Team Udayavani |

ದಾವಣಗೆರೆ: ನಿಮ್ಮ ಕಿಸೆ ಇಲ್ಲವೇ ಬ್ಯಾಗ್‌ನಲ್ಲಿ ಎಟಿಎಂಕಾರ್ಡ್‌, ಆಧಾರ್‌ ಕಾರ್ಡ್‌, ಪ್ಯಾನ್‌ಕಾರ್ಡ್‌, ಓಟರ್‌ಕಾರ್ಡ್‌, ಐಡೆಂಟಿಟಿ ಕಾರ್ಡ್‌ ಸೇರಿದಂತೆ ಇನ್ನಿತರ ಅಗತ್ಯಕಾರ್ಡ್‌ಗಳಿದ್ದರೆ ಅವುಗಳ ಜತೆಗೆ ಇನ್ನು ಮುಂದೆ ಕೋವಿಡ್‌ಕಾರ್ಡನ್ನೂ ಇಟ್ಟುಕೊಳ್ಳಿ!ಹೌದು, ಈಗ ಎಲ್ಲ ಅತ್ಯವಶ್ಯಕ ಕಾರ್ಡ್‌ಗಳ(ಗುರುತಿನಚೀಟಿ) ಜತೆಗೆ ಕೋವಿಡ್‌ ಕಾರ್ಡ್‌ಗೂ (ಕೋವಿಡ್‌ಲಸಿಕೆ ಪ್ರಮಾಣಪತ್ರ) ಬೇಡಿಕೆ ಬಂದಿದೆ. ಇದು ಸಹಅತ್ಯವಶ್ಯಕ ದಾಖಲೆಗಳ ಸಾಲಿಗೆ ಈಗಷ್ಟೇ ಸೇರಿಕೊಳ್ಳುತ್ತಿದೆ.

Advertisement

ಈದಾಖಲೆಯೂ ಈಗ ಚಿಕ್ಕ ಕಾರ್ಡ್‌ ಸ್ವರೂಪ ಪಡೆದುಕೊಂಡುಎಲ್ಲರಿಗೂ ಹೆಚ್ಚು ಆಪ್ತವಾಗುತ್ತಿರುವುದು ವಿಶೇಷ.ದೇಶದ ನಾಗರಿಕರೆಲ್ಲರೂ ಕೊರೊನಾ ವೈರಸ್‌ನಿಂದರಕ್ಷಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕೋವಿಡ್‌ ಲಸಿಕೆಎರಡು ಡೋಸ್‌ ಪಡೆಯುವುದನ್ನು ಹಾಗೂ ಸಾರ್ವಜನಿಕವಲಯದಲ್ಲಿ ಹಲವು ವ್ಯವಹಾರ, ಪ್ರವೇಶಕ್ಕೆ ಕೋವಿಡ್‌ಲಸಿಕಾ ಪ್ರಮಾಣಪತ್ರ ಪ್ರದರ್ಶಿಸುವುದನ್ನು ಸರ್ಕಾರಕಡ್ಡಾಯಗೊಳಿಸಿದೆ.

ಹೀಗಾಗಿ ಜನರು ಈಗ ಕೋವಿಡ್‌ಲಸಿಕಾ ಪ್ರಮಾಣಪತ್ರವನ್ನು ಚಿಕ್ಕ ಕಾರ್ಡ್‌ ರೂಪದಲ್ಲಿಸುಲಭವಾಗಿ ಇಟ್ಟುಕೊಳ್ಳಲು ಮುಂದಾಗಿದ್ದರಿಂದಲಸಿಕಾಕರಣ ಪ್ರಮಾಣಪತ್ರದ ಚಿಕ್ಕ ಕಾರ್ಡ್‌ಗೆ ಭಾರೀಬೇಡಿಕೆ ಬಂದಿದೆ.ಪ್ರಸ್ತುತ ಅನೇಕರು ತಾವು ಕೋವಿಡ್‌ ಲಸಿಕೆ ಪಡೆದಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್‌ಮಾಡಿಕೊಂಡು ಕಾಗದದ ಮುದ್ರಣ ಪ್ರತಿ ಇಟ್ಟುಕೊಂಡುಓಡಾಡುತ್ತಿದ್ದಾರೆ. ಈ ಕಾಗದದ ಪ್ರತಿ ಜೇಬಲ್ಲಿ, ಬ್ಯಾಗಲ್ಲಿ ಮಡಚಿಇಟ್ಟುಕೊಂಡರೆ ಎರಡೂ¾ರು ದಿನಗಳಲ್ಲಿ ಹರಿದುಹೋಗುತ್ತದೆ.ನೀರು ಬಿದ್ದರಂತೂ ಹರಿದೇ ಹೋಗುತ್ತದೆ.

ಪದೇ ಪದೇಪ್ರಮಾಣಪತ್ರ ಮುದ್ರಿಸಿಕೊಟ್ಟುಕೊಳ್ಳಬೇಕಾಗುತ್ತದೆ. ಈಸಮಸ್ಯೆಗೆ ಪರಿಹಾರವೆಂಬಂತೆ ಅನೇಕ ಸೈಬರ್‌ ಸೆಂಟರ್‌ಗಳು, ಸಾಮಾನ್ಯ ಸೇವಾ ಕೇಂದ್ರದವರು ಕೋವಿಡ್‌ ಲಸಿಕಾಪ್ರಮಾಣಪತ್ರಗಳನ್ನು ಚಿಕ್ಕ ಕಾರ್ಡ್‌ಗಳನ್ನಾಗಿ ಮಾಡಿಕೊಡುವಹೊಸ ಉದ್ಯೋಗ ಹುಡುಕಿಕೊಂಡಿದ್ದು ಅವರ ವ್ಯಾಪಾರಕ್ಕೆಹೊಸ ಉತ್ತೇಜನ ಸಿಕ್ಕಂತಾಗಿದೆ.ಕಾರ್ಡ್‌ ಹೇಗೆ ಮಾಡುತ್ತಾರೆ?: ಸಾಮಾನ್ಯವಾಗಿ ಮತದಾರರಚೀಟಿ, ಆಧಾರ್‌ ಚೀಟಿಗಳನ್ನು ಸಣ್ಣ ಕಾರ್ಡ್‌ ರೀತಿಯಲ್ಲಿಮಾಡಿಕೊಳ್ಳಲು ಸಾರ್ವಜನಿಕರಿಗೆ ಅನುಕೂಲವಾಗುವಂತೆಆಯಾ ಅಧಿಕೃತ ಸಂಸ್ಥೆ, ಇಲಾಖೆಗಳಿಂದಲೇ ಚಿಕ್ಕದಾದಮಾಹಿತಿ ಪತ್ರವನ್ನೂ ನೀಡಿವೆ. ಅದನ್ನು ಕತ್ತರಿಸಿ ಇಲ್ಲವೇಇನ್ನೊಮ್ಮೆ ಮುದ್ರಿಸಿಕೊಂಡು ಲ್ಯಾಮಿನೇಶನ್‌ ಅಥವಾಪ್ಲಾಸ್ಟಿಕ್‌ ಕಾರ್ಡ್‌ಗಳನ್ನಾಗಿ ಮಾಡಿಕೊಂಡು ಇಟ್ಟುಕೊಳ್ಳಲು ಅನುಕೂಲವಾಗಿದೆ.

ಆದರೆ ಕೋವಿಡ್‌ ಲಸಿಕಾಪ್ರಮಾಣಪತ್ರದಲ್ಲಿ ಗುರುತಿನ ಕಾರ್ಡ್‌ ಮಾದರಿಯಲ್ಲಿವಿವರ ನೀಡುವ ಅವಕಾಶವನ್ನು ಕೇಂದ್ರ ಆರೋಗ್ಯ ಇಲಾಖೆಮಾಡಿಕೊಟ್ಟಿಲ್ಲ. ಇಡೀ ಪ್ರಮಾಣಪತ್ರವನ್ನು ಲ್ಯಾಮಿನೇಶನ್‌ಮಾಡಿದರೆ ಅದೊಂದು ದೊಡ್ಡ ಎ*4 ಅಳತೆಯ ಕಾರ್ಡ್‌ಆಗುತ್ತದೆ. ಅದನ್ನು ಎಲ್ಲೆಂದರಲ್ಲಿ ಸುಲಭವಾಗಿ ಇಟ್ಟುಕೊಂಡುಓಡಾಡಲು ಆಗದು. ಈ ಸಮಸ್ಯೆಗೆ ಪರಿಹಾರವಾಗಿಸೈಬರ್‌, ಸಾಮಾನ್ಯ ಸೇವಾ ಕೇಂದ್ರದವರು ಕೋವಿಡ್‌ಪ್ರಮಾಣಪತ್ರದಲ್ಲಿರುವ ಎಲ್ಲ ಮಾಹಿತಿ ನಕಲು ಮಾಡಿಟ್ಟುಚಿಕ್ಕ ಕಾರ್ಡ್‌ ಗಾತ್ರದಲ್ಲಿ ಕೋವಿಡ್‌ ಲಸಿಕಾ ಪ್ರಮಾಣಪತ್ರಮಾಡಿಕೊಡಲು ಮುಂದಾಗಿದ್ದು ಈ ಕಾರ್ಡ್‌ಗಳು ಹೆಚ್ಚುಜನರನ್ನು ಸೆಳೆಯುತ್ತಿವೆ.

Advertisement

ಚಿಕ್ಕ ಕಾರ್ಡ್‌ ದೊಡ್ಡ ಲಾಭ: ಸೈಬರ್‌, ಸಾಮಾನ್ಯ ಸೇವಾಕೇಂದ್ರದವರು ಮಾಡಿಕೊಡುವ ಈ ಚಿಕ್ಕ ಗಾತ್ರದ ಕೋವಿಡ್‌ಕಾರ್ಡ್‌ ಅನ್ನು ಕೋವಿಡ್‌ ಲಸಿಕಾ ಪ್ರಮಾಣಪತ್ರದ ದೊಡ್ಡಪತ್ರದ ಬದಲಾಗಿ ಅಗತ್ಯವಿರುವಲ್ಲಿ ಬಳಸಬಹುದಾಗಿದೆ.ಇದರಲ್ಲಿ ಕೋವಿಡ್‌ ಪ್ರಮಾಣ ಪತ್ರದಲ್ಲಿರುವಂತೆ ಎಲ್ಲ ಮಾಹಿತಿಅಂದರೆ ಹೆಸರು, ಜನ್ಮದಿನಾಂಕ, ಲಸಿಕೆ ಯಾವುದು, ಯಾವಾಗಹಾಕಿಸಿಕೊಂಡಿದ್ದಾರೆ ಎಂಬ ವಿವರವನ್ನು ಯಥಾವತ್ತಾಗಿಮುದ್ರಿಸುವ ಜತೆಗೆ ಕೋವಿಡ್‌ ಪ್ರಮಾಣ ಪತ್ರದಲ್ಲಿರುವಕ್ಯೂಆರ್‌ ಕೋಡ್‌ ಕಡ್ಡಾಯವಾಗಿ ಮುದ್ರಿಸಲೇಬೇಕಾಗಿದೆ.ಯಾವುದೇ ಸ್ಥಳದಲ್ಲಿ ಈ ಕಾರ್ಡ್‌ ತೋರಿಸಿದಾಗ ಅವರುಸಂಶಯ ಬಂದರೆ ಕ್ಯೂಆರ್‌ ಕೋಡ್‌ ಸ್ಕಾÂನ್‌ ಮಾಡಿಪ್ರಮಾಣಪತ್ರವನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.ಒಟ್ಟಾರೆ ಹತ್ತು ಹಲವು ಅವಶ್ಯಕ ದಾಖಲೆಗಳ ಕಾರ್ಡ್‌ಗಳಸಾಲಿಗೆ ಈಗ ಕೋವಿಡ್‌ ಕಾರ್ಡ್‌ ಸಹ ಸೇರಿದೆ. ಹಾಗಾಗಿ ಈಕಾರ್ಡ್‌ ಮಾಡಿಸಲು ಎಲ್ಲೆಡೆ ಎಲ್ಲಿಲ್ಲದ ಬೇಡಿಕೆ ಬಂದಿದೆ.

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next