Advertisement

ಆರೋಪಕ್ಕೆ ತಲೆಬಾಗದೆ ಲಸಿಕೆ ಮುಂದುವರಿಸಿ

01:36 PM Sep 20, 2021 | Team Udayavani |

ಬೆಂಗಳೂರು: ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದಂತೆ ಕಾರ್ಮಿಕ ಇಲಾಖೆರಾಜ್ಯಾದ್ಯಂತ ಸಂಘಟಿತ, ಅಸಂಘಟಿತ ಮತ್ತು ವಲಸೆಕಾರ್ಮಿಕರಿಗೆ ಆಹಾರದ ಕಿಟ್‌ ವಿತರಣೆ ಮೂಲಕ ಕಾರ್ಮಿಕರಿಗೆ ಆಸರೆಯಾಗಿದೆ.

Advertisement

ಆದರೂ ಕೂಡ ಕೆಲಕಾರ್ಮಿಕ ಸಂಘಟನೆಗಳು ತಮ್ಮ ಸ್ವಪ್ರತಿಷ್ಠೆಗಾಗಿ ಕಾರ್ಮಿಕ ಇಲಾಖೆಯನ್ನು ದೂಷಿಸುತ್ತಿವೆ ಎಂಬ ಮಾತುಗಳುಕಾರ್ಮಿಕ ವಲಯದಲ್ಲಿ ಈಗ ಕೇಳಿ ಬಂದಿದೆ.ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸಂಘಟಿತಮತ್ತು ಅಸಂಘಟಿತ ವಲಯಕ್ಕೆ ಸೇರಿದ 1 ಕೋಟಿಗೂಅಧಿಕ ಕಾರ್ಮಿಕರಿದ್ದು ವಿವಿಧ ವಲಯದಲ್ಲಿ ದುಡಿಯುತ್ತಿದ್ದಾರೆ. ಇದರಲ್ಲಿ ಕಟ್ಟಡ ಕಾರ್ಮಿಕರಿಗಾಗಿ ಕಾರ್ಮಿಕಇಲಾಖೆ ಲಸಿಕೆ ನೀಡುವ ಬೃಹತ್‌ ಅಭಿಯಾನಹಮ್ಮಿಕೊಂಡಿತ್ತು.

ಆದರೆ ರಾಜ್ಯದಲ್ಲಿರುವ ಹತ್ತು ಹಲವು ಕಾರ್ಮಿಕರ ಸಂಘಟನೆಗಳಲ್ಲಿ ಕೇವಲ ಒಂದು ಕಾರ್ಮಿಕ ಸಂಘಟನೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಬೀದಿ ಹೋರಾಟಮಾಡಿತು. ಆ ಹೋರಾಟವನ್ನು ಪರಿಗಣಿಸಿದ ಸರ್ಕಾರ ಕಾರ್ಮಿಕ ಲಸಿಕೆ ಅಭಿಯಾನವನ್ನು ಕೈಬಿಟ್ಟಿರುವುದುಎಷ್ಟು ಸರಿ ಪ್ರಶ್ನೆ ಕಾರ್ಮಿಕ ವಲಯದಲ್ಲಿ ಹುಟ್ಟು ಹಾಕಿದೆ ಎಂದು ಕರ್ನಾಟಕ ರಾಜ್ಯ ಕಾರ್ಮಿಕ ಹಿತರಕ್ಷಣಾಯೂನಿನ್‌ನ ಅಧ್ಯಕ್ಷ ಡಿ.ಸಿ.ಪಾಪಣ್ಣ ಆರೋಪಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ಸಿಗುತ್ತಿದೆ.ಹೀಗಾಗಿ ಕಾರ್ಮಿಕ ಕಲ್ಯಾಣ ನಿಧಿಯಿಂದ ಕಾರ್ಮಿಕರಿಗೆಲಸಿಕೆ ಬೇಡ ಎಂದು ವಿರೋಧಿಸಲಾಗುತ್ತಿದೆ. ಲಸಿಕೆಗಾಗಿಯಾವುದೇ ಹಣ ಬಳಕೆ ಮಾಡಿದರೂ ಅದು ಹಣವೇ.ಕಟ್ಟಡ ಕಾರ್ಮಿಕರ ಸೆಸ್‌ ಹಣವನ್ನು ಕಟ್ಟಡಕಾರ್ಮಿಕರಿಗಾಗಿ ಬಳಸಿದರೆ ತಪ್ಪೇನು? ಎಂದುಪ್ರಶ್ನಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಿಗೆ ಲಸಿಕೆಗಾಗಿ ಹಣನೀಡಲಾಗುತ್ತಿದೆ ಎಂಬ ವಾದವನ್ನು ಮುಂದಿಟ್ಟು ಕೊಂಡುಕಾರ್ಮಿಕರಿಗೆ ನೀಡುತ್ತಿರುವ ಲಸಿಕೆ ವಿರೋಧಿಸುತ್ತಿರುವುದು ಅಸಮಂಜಸವಾಗಿದೆ ಎಂದು ಹೇಳಿದ್ದಾರೆ.

Advertisement

ಹಲವು ಕಾರ್ಮಿಕರಿಗೆ ಲಸಿಕೆ ಸಿಕ್ಕಿಲ್ಲ: ಸರ್ಕಾರದಅಂದಾಜಿನ ಪ್ರಕಾರ ರಾಜ್ಯದಲ್ಲಿ ಇರುವ ಸಂಘಟಿತ,ಅಸಂಘಟಿತ ಮತ್ತು ವಲಸೆ ಕಾರ್ಮಿಕರ ಪೈಕಿ ಈವರೆಗೆಶೇ.5 ಮಂದಿ ಲಸಿಕೆ ಪಡೆದಿದ್ದಾರೆ. ಕಾರ್ಮಿಕರು ಲಸಿಕೆಪಡೆಯಲು ಕನಿಷ್ಠ 3 ದಿನ ವ್ಯಯಿಸಬೇಕಿದೆ.

ಅವರುಇದ್ದಲ್ಲಿಗೇ ತೆರಳಿ ಲಸಿಕೆ ನೀಡಿ ಜಾಗೃತಿಗೊಳಿಸುವಸಲುವಾಗಿ ಸರ್ಕಾರ ಹಮ್ಮಿಕೊಂಡಿದ್ದ ಅಭಿಯಾನಕ್ಕೆಬ್ರೇಕ್‌ ಬಿದ್ದಿದೆ. ಈ ಬೆಳವಣಿಗೆಯಿಂದ ಶೇ.95ಶ್ರಮಿಕರಿಗೆ ಲಸಿಕೆ ಸಿಕ್ಕಿಲ್ಲ ಎಂದು ಕೆಂಪೇಗೌಡ ಕಟ್ಟಡನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಸಹಕಾರ್ಯದರ್ಶಿ ಸಿ.ರಮೇಶ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next