ಹುಣಸೂರು: ಹುಣಸೂರು ತಾಲೂಕಿನ ಗುರುಪುರದ ಟಿಬೆಟ್ ಕ್ಯಾಂಪಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಿರುವ ಹಿನ್ನೆಲೆಯಲ್ಲಿ ಚೋಟಾ ಲಾಮಾ ಕ್ಯಾಂಪ್‌ನ ರಸ್ತೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಟಿಬೆಟ್ ಕ್ಯಾಂಪಿನಲ್ಲಿ ಕಳೆದೊಂದು ವಾರದಿಂದ ನೂರಕ್ಕೂ ಹೆಚ್ಚು ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮೋಹನ್‌ಕುಮಾರ್, ತಾ.ಪಂ.ಇ ಓ ಗಿರೀಶ್ ಗುರುವಾರ ಕ್ಯಾಂಪಿಗೆ ಭೇಟಿ ಇತ್ತು. ಸಾಕಷ್ಟು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದರು. ಗುರುಪುರ ಗ್ರಾ.ಪಂ.ವತಿಯಿಂದ ರಸ್ತೆಯನ್ನು ಸೀಲ್ ಡೌನ್ ಮಾಡುವಂತೆ ಆದೇಶಿಸಿದ್ದರು.
ಇದನ್ನೂ ಓದಿ:ವಿಮಾನ ಚಲಿಸುತ್ತಿರುವಾಗಲೇ ಪೈಲಟ್‌ಗೆ ಹೃದಯಾಘಾತ; ನಾಗ್ಪುರದಲ್ಲಿ ವಿಮಾನ ತುರ್ತು ಭೂಸ್ಪರ್ಶ
ಅದರಂತೆ ಶುಕ್ರವಾರದಂದು ಪಿಡಿಓ ಯಶೋಧಾರ ನೇತೃತ್ವದಲ್ಲಿ ಗ್ರಾ.ಪಂ.ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಚೋಟಾಲಾಮಾ ಕ್ಯಾಂಪಿಗೆ ಹೋಗುವ ಹುಣಸೇಕಟ್ಟೆ ಬಳಿಯ ರಸ್ತೆಯನ್ನು ಸೀಲ್ ಡೌನ್ ಮಾಡಿ, ನಿರ್ಭಂಧ ವಿಧಿಸಿದ್ದಾರೆ.
ಐದು ಮಂದಿಗೆ ಪಾಸಿಟಿವ್: ಶುಕ್ರವಾರ 5 ಮಂದಿಗೆ ಪಾಸಿಟಿವ್ ಕಂಡುಬಂದಿದ್ದು, ತಾಲೂಕಿನ ತಿಪ್ಪಲಾಪುರ-2, ಅಗ್ರಹಾರ,ಗೋವಿಂದನಹಳ್ಳಿ, ಸಿ.ಬಿ.ಟಿ ಕಾಲೋನಿಯಲ್ಲಿ ತಲಾ ಒಬ್ಬರಿಗೆ ಪಾಸಿಟಿವ್ ಬಂದಿದೆ. ಗುರುಪುರದಲ್ಲಿ ಸೋಮವಾರದಂದು ಸಾಮೂಹಿಕವಾಗಿ ಕೊರೊನಾ ತಪಾಸಣೆ ನಡೆಸಲಾಗುವುದೆಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.