Advertisement

118 ಮಂದಿಗೆ ಕೊರೊನಾ ಸೋಂಕು

07:57 PM Jul 21, 2021 | Team Udayavani |

ಹಾಸನ: ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 118ಮಂದಿಗೆಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿನಿಂದಮೂವರು ಮೃತಪಟ್ಟಿದ್ದು, ಮೃತರಲ್ಲಿ ಹಾಸನ, ಆಲೂರು,ಹೊಳೆನರಸೀಪುರ ತಾಲೂಕಿನ ತಲಾ ಒಬ್ಬರು ಸೇರಿದ್ದಾರೆ,ಜಿಲ್ಲೆಯಲ್ಲೀಗ ಸೋಂಕಿತರ ಸಂಖ್ಯೆ 1,05,530 ಕ್ಕೆಏರಿದ್ದು, ಸೋಂಕಿನಿಂದ ಈವರೆಗೆ ಒಟ್ಟು 1,251ಮಂದಿಮೃತಪಟ್ಟಿದ್ದಾರೆ.

Advertisement

ಮಂಗಳವಾರ 163ಮಂದಿ ಗುಣಮುಖರಾಗಿದ್ದು, ಜಿಲ್ಲೆಯಲ್ಲಿಈಗ ಸಕ್ರಿಯ ಪ್ರಕರಣಗಳ ಸಂಖ್ಯೆ1433ಕ್ಕೆಇಳಿದಿದೆ. ಮಂಗಳವಾರ ಸೋಂಕುದೃಢಪಟ್ಟಿರುವ 118 ಮಂದಿ ಪೈಕಿ ಹಾಸನತಾಲೂಕಿನ 38 ಮಂದಿ ಸೇರಿದ್ದರೆ, ಚನ್ನರಾಯಟ್ಟಣ 19, ಅರಕಲಗೂಡು ಮತ್ತುಬೇಲೂರು ತಾಲೂಕಿನ 16 ಮಂದಿ, ಅರಸೀಕೆರೆ 12,ಹೊಳೆನರಸೀಪುರ 9, ಆಲೂರು5, ಸಕಲೇಶಪುರ ತಾಲೂಕಿನ3 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಡಿಎಚ್‌ಒಡಾ.ಸತೀಶ್‌ಕುಮಾರ್‌ ತಿಳಿಸಿದ್ದಾರೆ.

ಚಿಕಿತ್ಸೆಪಡೆಯುತ್ತಿದ್ದವರಪೈಕಿ ಮಂಗಳವಾರ 163 ಮಂದಿ ಗುಣಮುಖರಾಗಿದ್ದು,ಇದುವರೆಗೂ ಒಟ್ಟು 1,02, 846 ಮಂದಿ ಗುಣಮಖರಾಗಿದ್ದಾರೆ. ಐಸಿಯುನಲ್ಲಿರುವ 51 ಮಂದಿ ಸೇರಿಒಟ್ಟು 1,433 ಮಂದಿಗೆ ಚಿಕಿತ್ಸೆ ಮುಂದುವರಿದಿದೆ ಎಂದುಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next