Advertisement

121ಮಂದಿಗೆ ಕೊರೊನಾ ಸೋಂಕು

09:13 PM Jul 19, 2021 | Team Udayavani |

ಹಾಸನ: ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 121 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆದರೆ, ಸಾವಿನ ಪ್ರಕರಣವರದಿಯಾಗಿಲ್ಲ. ಜಿಲ್ಲೆಯಲ್ಲೀಗ ಸೋಂಕಿತರ ಸಂಖ್ಯೆ1,05,268ಕ್ಕೇರಿದ್ದು, ಈವರೆಗೆಒಟ್ಟು1244 ಮಂದಿ ಮೃತ ಪಟ್ಟಿದ್ದಾರೆ.

Advertisement

ಭಾನುವಾರ 256 ಮಂದಿಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ1516ಕ್ಕಿಳಿದಿದೆ. ಭಾನುವಾರಸೋಂಕು ದೃಢಪಟ್ಟಿರುವ121 ಮಂದಿ ಪೈಕಿ ಹಾಸನ ತಾಲೂಕಿನ25 ಮಂದಿ ಸೇರಿದ್ದರೆ,ಬೇಲೂರು ತಾಲೂಕಿನ23 ಮಂದಿ, ಅರಕಲಗೂಡು ತಾಲೂಕಿನ20 ಮಂದಿ, ಅರಸೀಕೆರೆತಾಲೂಕಿನ 16 ಮಂದಿ, ಚನ್ನರಾಯಟ್ಟಣ ತಾಲೂಕಿನ ತಲಾ14 ಮಂದಿ, ಆಲೂರುತಾಲೂಕಿನ 10 ಮಂದಿ, ಸಕಲೇಶಪುರ ತಾಲೂಕಿನ ತಲಾ7 ಮಂದಿ, ಹೊಳೆನರಸೀಪುರತಾಲೂಕಿನ6 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಡಿಎಚ್‌ಒ ಡಾ.ಸತೀಶ್‌ಕುಮಾರ್‌ ತಿಳಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದವರಪೈಕಿ ಭಾನುವಾರ 256 ಮಂದಿ ಗುಣಮುಖರಾಗಿದ್ದು ಒಟ್ಟು1,02,508 ಮಂದಿ ಗುಣಮಖರಾಗಿದ್ದಾರೆ. ಐಸಿಯುನಲ್ಲಿರುವ65 ಮಂದಿ ಸೇರಿ ಒಟ್ಟು1516 ಮಂದಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next