Advertisement

ಲಸಿಕೆ ತೆಗೆದುಕೊಂಡರೆ ಅಪಾಯ ಕಡಿಮೆ: ರಾಜ್ಯಪಾಲ

12:25 PM Jul 09, 2021 | Team Udayavani |

ಮುಂಬಯಿ: ಕೊರೊನಾ ಮೊದಲ ಮತ್ತು ಎರಡನೆಯ ಅಲೆಯಲ್ಲಿ ದೇಶದ ಹಾಗೂ ರಾಜ್ಯದ ಜನರು ಅನೇಕ ಸಮಸ್ಯೆ ಗಳನ್ನು ಎದುರಿಸಬೇಕಾಯಿತು. ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡರು ಮತ್ತು ಆದಾ ಯವನ್ನು ಕಳೆದುಕೊಂಡರು.

Advertisement

ಹೊಟೇಲ್‌ ಉದ್ಯಮದಲ್ಲಿ ಕೆಲಸ ಮಾಡುವವರು ಉದ್ಯೋಗ ಕಳೆದುಕೊಂಡರು, ಮಾಲಕರ ಆದಾಯ ಕುಸಿಯಿತು. ಈ ಕಷ್ಟದ ಸಮಯದಲ್ಲಂತೂ ಕೊರೊನಾ ವಾರಿಯರ್ಸ್‌ ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇವತೆಗಳಂತೆಸೇವೆ ಸಲ್ಲಿಸಿದ್ದಾರೆ. ದೇಶದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಎಲ್ಲರಿಗೂ ಆದಷ್ಟು ಬೇಗ ಲಸಿಕೆ ಹಾಕಿಸಿದರೆ, ಮೂರನೇ ಅಲೆಯಲ್ಲಿ ಅಪಾಯ ಕಡಿಮೆಯಾಗುತ್ತದೆ ಎಂದು ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ತಿಳಿಸಿದರು.

ರಾಜಭವನದಲ್ಲಿ 50 ಆ್ಯಂಬುಲೆನ್ಸ್‌ ಚಾಲಕರು, ವ್ಯವಸ್ಥಾಪಕರು, ಶಾಲಾ ಬಸ್‌ ಮಾಲಕರು ಮತ್ತು ಶಾಲಾ ಮತ್ತು ಕಂಪೆನಿ ಬಸ್‌ ಚಾಲಕರ ಸಂಘದ ಪದಾಧಿಕಾರಿಗಳನ್ನು ರಾಜ್ಯಪಾಲರು ಗೌರವಿಸಿ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಅಗತ್ಯವಿರುವ ರೋಗಿಗಳಿಗೆ ಶಾಲೆ ಮತ್ತು ಕಂಪೆನಿ ಬಸ್‌ಗಳು ಮತ್ತು ವಾಹನಗಳನ್ನು ಆ್ಯಂಬುಲೆನ್ಸ್‌ ಸೇವೆಗೆ ಬಳಸಿದ್ದಾರೆ.

ಚಾಲಕ ಅಥವಾ ಯಾವುದೇ ಕೆಲಸಗಾರನ ಕೆಲಸ ಮುಖ್ಯವಾಗಿದೆ ಎಂದು ಚಾಲಕರನ್ನು ಶ್ಲಾಘಿಸಿದರು.ಸ್ಕೂಲ್‌ ಮತ್ತು ಕಂಪೆನಿ ಬಸ್‌ ಮಾಲಕರ ಸಂಘದಿಂದ ಕೊರೊನಾ ವಾರಿಯರ್ಸ್‌ಗಳ ಸೇವೆಗೆ ಅಭಿನಂದನೆ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಅನಿಲ್‌ ಗರ್ಗರ್‌, ಕಾರ್ಯದರ್ಶಿ ದೀಪಕ್‌ ನಾಯಕ್‌ ಮತ್ತು ಪ್ರಧಾನ ಕಾರ್ಯದರ್ಶಿ ರಮೇಶ್‌ ಮಣಿಯನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next