ಹಾಸನ: ಹೆಚ್ಚು ಕೊರೊನಾ ಪ್ರಕರಣ ಕಂಡು ಬರುವ ಸ್ಥಳಗಳಲ್ಲಿ ಹೆಚ್ಚು ಲಸಿಕೆ ನೀಡುವುದರ ಮೂಲಕ ಕೊರೊನಾ ಹರಡದಂತೆ ಎಚ್ಚರವಹಿಸಿ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್‌ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆತಹಶೀಲ್ದಾರ್, ವಿವಿಧ ಇಲಾಖಾ ಅಧಿಕಾರಿಗಳಸಭೆ ನಡೆಸಿದ ಅವರು, ಕೊರೊನಾ ಪಾಸಿಟಿವ್‌ಬಂದವರನ್ನುಕಡ್ಡಾಯವಾಗಿ ಕೊರೊನಾಕೇರ್‌ಕೇಂದ್ರಗಳಿಗೆ Óಳಾಂ § ತರಿಸಿ ಚಿಕಿತ್ಸೆ ನೀಡಬೇಕು.ಪ್ರಾಥಮಿಕ ಸಂಪರ್ಕಿತರ ಪತ್ತೆ ಕಾರ್ಯಚುರುಕುಗೊಳಿಸಬೇಕೆಂದರು.
18 ವರ್ಷ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗುವಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆತ್ವರಿತವಾಗಿ ಲಸಿಕೆ ನೀಡಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.5 ಕ್ಕಿಂತ ಹೆಚ್ಚು ಪಾಸಿಟಿವ್ ಪ್ರಕರಣ ಕಂಡುಬಂದಲ್ಲಿಕಂಟೈನ್ಮೆಂಟ್ ವಲಯ ಎಂದು ಗುರುತಿಸಬೇಕು.
ಸೋಂಕಿತರಮನೆಬಳಿಚೀಟಿಅಂಟಿಸಿಜನರಲ್ಲಿ ಜಾಗೃತಿ ಮೂಡಿಸಬೇಕು. ಕೊರೊನಾದಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿರುವವರ ಪಟ್ಟಿಯನ್ನು ಶೀಘ್ರ ಜಿಲ್ಲಾಡಳಿತಕ್ಕೆಸಲ್ಲಿಸಬೇಕೆಂದರು.
ಕೊರೊನಾ 3ನೇ ಅಲೆಅಪ್ಪಳಿಸುವಮುನ್ಸೂಚನೆಇದ್ದುಎಲ್ಲತಾಲೂಕುಆಸ್ಪತ್ರೆಗಳಲ್ಲಿ ಶೌಚಾ ಲಯ, ವಿದ್ಯುತ್ ಸಂಪರ್ಕಸೇರಿ ಮೂಲ ಸೌಕರ್ಯ ದುರಸ್ತಿಯಲ್ಲಿದ್ದರೆ10ಲಕ್ಷ ರೂ.ಮಿತಿಯೊಳಗೆ ಸರಿಪಡಿಸಲು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ತಿಳಿಸಿದರು.
ಅಪರ ಜಿಲ್ಲಾಧಿ ಕಾರಿ ಕವಿತಾ ರಾಜಾರಾಂಮಾತನಾಡಿ, ತಾಲೂಕು ಮಟ್ಟದಲ್ಲಿ ಪಾಸಿಟಿಟಿದರ ಕಡಿಮೆ ಗೊಳಿಸಲು ಹೆಚ್ಚಿನ ನಿಗಾವಹಿಸಬೇಕು ಎಂದು ಹೇಳಿದರು.ಜಿಪಂ ಉಪ ಕಾರ್ಯದರ್ಶಿ ಪುನೀತ್‌ಕುಮಾರ್, ಭೂ ದಾಖಲೆಗಳ ಉಪ ನಿರ್ದೇಶಕಿಹೇಮಲತಾ, ಜಿಲ್ಲಾ ಆರೋಗ್ಯ ಕುಟುಂಬಕಲ್ಯಾಣಾಧಿಕಾರಿ ಡಾ.ಸತೀಶ್, ಆರ್‌ಸಿಎಚ್‌ಅಧಿಕಾರಿ ಡಾ.ಕಾಂತರಾಜ್ ಇದ್ದರು.