Advertisement

ಕೊರೊನಾ ಶವ ಸಂಸ್ಕಾರಕ್ಕೆ ಹಣ, ಅಧಿಕಾರಿಗಳ ಜಾಣಮೌನ

08:58 PM Jul 04, 2021 | Team Udayavani |

ಕೆಂಪರಾಜು ಜಿ.ಆರ್‌.

Advertisement

ಗುಬ್ಬಿ: ಕೋವಿಡ್‌ 2ನೇ ಅಲೆಯಿಂದ ಇಡೀರಾಜ್ಯವೇ ಲಾಕ್‌ಡೌನ್‌ ಆದ ಸಂದರ್ಭದಲ್ಲಿಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾಪಾಸಿಟಿವ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಮಾಡಲು ಆಸ್ಪತ್ರೆ ಅಧಿಕಾರಿಗಳು, ಸಿಬ್ಬಂದಿಸೋಂಕಿತರ ಕುಟುಂಬದಿಂದ 20 ಸಾವಿರ ರೂ.ತೆಗೆದುಕೊಂಡಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಮೃತರ ಶವ ಪ್ಯಾಕ್‌ ಮಾಡುವುದಕ್ಕೆ ಎರಡು ಸಾವಿರ ರೂ., ಸಂಸ್ಕಾರಕ್ಕೆ 18 ಸಾವಿರ ರೂ. ನೀಡಿದರೆ ಆಸ್ಪತ್ರೆ ಕೆಲ ಡಿ.ಗ್ರೂಪ್‌ ನೌಕರರು ಹಾಗೂಆ್ಯಂಬುಲೆನ್ಸ್‌ ಚಾಲಕರು ನಿಮ್ಮ ಗ್ರಾಮಕ್ಕೆ ಬಂದುಶವಸಂಸ್ಕಾರ ಮಾಡುತ್ತಾರೆ ಎಂದು ನಂಬಿಸಿ, ಆಸ್ಪತ್ರೆಅಧಿಕಾರಿಗಳು, ಸಿಬ್ಬಂದಿ ಇಂತಹ ಪಾಪ ಕೃತ್ಯದಲ್ಲಿತೊಡಗಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸ್ವಯಂ ಸೇವಕರಿಗೆ ಬೆದರಿಕೆ: ಪಟ್ಟಣದ ಸಾರ್ವಜನಿಕಆಸ್ಪತ್ರೆಯಕೋವಿಡ್‌ಕೇರ್‌ನಲ್ಲಿಕೆಲಸ ನಿರ್ವಹಿಸುವಕೆಲ ಸಿಬ್ಬಂದಿ ಮತ್ತು ಕೆಲ ಹೊರಗುತ್ತಿಗೆ ವಾಹನಚಾಲಕರು ಕೋವಿಡ್‌ ಸೋಂಕಿನಿಂದ ಮೃತಪಟ್ಟವರಶವ ಸಂಸ್ಕಾರವನ್ನು ಉಚಿತವಾಗಿ ಮಾಡಲು ಬರುವಸ್ವಯಂ ಸೇವಕರಿಗೆ ಸರ್ಕಾರಿ ಆಸ್ಪತ್ರೆಗೆ ಬರಕೂಡದುನಾವೇ ಅಂತ್ಯಸಂಸ್ಕಾರ ಮಾಡುತ್ತೇವೆ. ಆಸ್ಪತ್ರೆಯ ಕೆಲ ಸಿಬ್ಬಂದಿ ಮೃತರ ಕುಟುಂಬದ ನೆರವಿಗೆ ಧಾವಿಸುವಸ್ವಯಂಸೇವಕರ ಗುಂಪಿಗೆ ಹೆದರಿಸಿ, ಅವರನ್ನುವಾಪಾಸ್‌ ಕಳುಹಿಸಿ ಮೃತರ ಕುಟುಂಬದ ಸದಸ್ಯರಜತೆ ಇಲ್ಲಿಗೆ ಯಾರು ಕೂಡ ಅಂತ್ಯಕ್ರಿಯೆ ಮಾಡಲುಬರುವುದಿಲ್ಲವೆಂದು ಕುಟುಂಬದವರಿಂದ ದುಪ್ಪಟ್ಟುಹಣ ಪಡೆದು ಮೃತರ ಗ್ರಾಮಕ್ಕೆ ತೆರಳಿ ಅಂತ್ಯಕ್ರಿಯೆನಡೆಸುವ ಮೂಲಕ ಸಂಕಷ್ಟದಲ್ಲಿರುವ ಕುಟುಂಬಗಳಿಂದ ಹಣ ಪಡೆದುಕೊಂಡಿರುವುದಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ವೈದ್ಯಾಧಿಕಾರಿಯ ಜಾಣ ಮೌನ: ಸಾರ್ವಜನಿಕಆಸ್ಪತ್ರೆಯಲ್ಲಿ ಕೋವಿಡ್‌ ಸಂದರ್ಭದಲ್ಲಿ ಹಲವುಭ್ರಷ್ಟ ದಂಧೆಗಳು ನಡೆಯುತ್ತಿದ್ದರೂ, ಈ ಎಲ್ಲಅಕ್ರಮ ಚಟುವಟಿಕೆಗಳಿಗೆ ಪರೋಕ್ಷವಾಗಿ ಬೆಂಬಲನೀಡುತ್ತಾ, ಆಡಳಿತ ವೈದ್ಯಾಧಿಕಾರಿ ಜಾಣಮೌನವಹಿಸಿರುವುದು ಕೆಲ ಭ್ರಷ್ಟ ಸಿಬ್ಬಂದಿಗೆ ಶ್ರೀರಕ್ಷೆಯಾಗಿರುವುದಕ್ಕೆ ಸಾಕ್ಷಿಯೆಂಬಂತಿದೆ. ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಹಾಗೂ ಕೆಲ ಭ್ರಷ್ಟಸಿಬ್ಬಂ ಕೋವಿಡ್‌ ಸಂಕಷ್ಟದ ಸಮಯವನ್ನು ಲಾಭದಾಯಕ ಕೆಲಸವನ್ನಾಗಿ ಮಾಡಿಕೊಂಡಿರುವುದಕ್ಕೆಜನರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.ಕರೆ ಸ್ವೀಕರಿಸದ ತಹಶೀಲ್ದಾರ್‌: ಸಾರ್ವಜನಿಕಆಸ್ಪತ್ರೆಯಲ್ಲಿ ನಡೆಯುತ್ತಿರುವ ಈ ಅಕ್ರಮದ ಬಗ್ಗೆಪ್ರತಿಕ್ರಿಯೆ ಪಡೆಯಲು ಹಲವು ಬಾರಿ ಕರೆ ಮಾಡಿದರೂ ತಹಶೀಲ್ದಾರ್‌ ಡಾ.ಪ್ರದೀಪ್‌ ಕುಮಾರ್‌ಹಿರೇಮs… ಅವರುಕರೆ ಸ್ವೀಕರಿಸಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next