Advertisement

ಶೂನ್ಯ ಸ್ಥಿತಿ ಮುಂದುವರಿಯಲು ಪ್ರಯತ್ನಿಸಿ

08:35 PM Jul 03, 2021 | Team Udayavani |

ಚಿಕ್ಕಬಳ್ಳಾಪುರ: ಗುಡಿಬಂಡೆ ತಾಲೂಕು ಕೊರೊನಾಮುಕ್ತಗೊಳಿಸಿರುವ ತಾಲೂಕುಆಡಳಿತಕ್ಕೆ ಅಭಿನಂದನೆತಿಳಿಸುತ್ತೇನೆ. ಶೂನ್ಯ ಸ್ಥಿತಿ ಯಥಾವತ್‌ ಕಾಪಾಡಿಕೊಂಡು ಕೊರೊನಾ ನಿಯಂತ್ರಣದಲ್ಲಿಟ್ಟು ಕೊಳ್ಳುವಂತೆ ಜಿಲ್ಲಾಧಿಕಾರಿ ಆರ್‌.ಲತಾ ಸೂಚನೆ ನೀಡಿದರು.

Advertisement

ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿ,ಗುಡಿಬಂಡೆ ತಾಲೂಕಿನಲ್ಲಿ ಆರಂಭದಿಂದ ಈವರೆಗೆ2682 ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು, ಈಪೈಕಿ2669 ಜನರು ಜಿಲ್ಲಾಡಳಿತದ ಎಲ್ಲಾ ಇಲಾಖೆಗಳಪರಿಶ್ರಮದಿಂದ, ಅದರಲ್ಲೂ ಆರೋಗ್ಯ ಇಲಾಖೆಯವಿಶೇಷ ಆರೈಕೆಯಿಂದಾಗಿ ಕೋವಿಡ್‌ನಿಂದ ಗುಣವಾಗಿದ್ದಾರೆ. ಚೇತರಿಕೆ ಪ್ರಮಾಣವೂ ಶೇ.99.52ಇರುವುದು ಉತ್ತಮ ಸಾಧನೆಗೆ ನಿದರ್ಶನವಾಗಿದೆ.

ಈಸಾಧನೆಗೆಸಹಕರಿಸಿದಸಾರ್ವಜನಿಕರಿಗೆ,ಸರ್ಕಾರೇತರಸಂಸ್ಥೆಗಳಿಗೆ, ಕೋವಿಡ್‌ ಟಾಸ್ಕ್ ಫೋರ್ಸ್‌ ಕಮಿಟಿಸದಸ್ಯರಿಗೆ ಹಾಗೂ ಜನಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಧನ್ಯವಾದ ತಿಳಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ ಪಾಸಿಟಿವಿಟಿ ದರವು ಶೇ.0.76ರಷ್ಟಿದ್ದು, ಆದಷ್ಟು ಬೇಗ ಇತರ ತಾಲೂಕುಗಳನ್ನುಕೊರೊನಾ ಮುಕ್ತಗೊಳಿಸಲು ಶ್ರಮಿಸಬೇಕು.ಜಿಲ್ಲೆಯಲ್ಲಿರುವ ಪ್ರಸ್ತುತ ಇರುವ 383 ಸಕ್ರಿಯಪ್ರಕರಣಗಳನ್ನು ಬೇಗ ಗುಣಪಡಿಸಬೇಕು, ಹೊಸಪ್ರಕರಣಗಳು ದಾಖಲಾಗದಂತೆ ಕೋವಿಡ್‌ನ‌ಮುನ್ನೆಚcರಿಕ ಾ ಕ್ರಮಗಳನ್ನು ಮುಂದುವರಿಸಿಕೊಂಡುಹೋಗಬೇಕೆಂದು ಜಿಲ್ಲಾ ಹಾಗೂ ತಾಲೂಕು ಮಟ್ಟದಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next