ದೊಡ್ಡಬಳ್ಳಾಪುರ: ಜನರ ಸೇವೆಗಾಗಿ ವೈದ್ಯರ ಶ್ರಮ ಹೆಚ್ಚಿದೆ. ವೈದ್ಯಕೀಯ ಕ್ಷೇತ್ರದ ಮಹತ್ವವನ್ನು ಅರಿಯಬೇಕಿದ್ದು, ವೈದ್ಯರನ್ನು ನಾವುಗೌರವಿಸಬೇಕಿದೆ ಎಂದು ಅಪರ ಜಿಲ್ಲಾಧಿಕಾರಿಡಾ.ಜಗದೀಶ್‌ಕೆ. ನಾಯಕ್ ಹೇಳಿದರು.
ರಾಷ್ಟ್ರೀಯ ವೈದ್ಯಕೀಯ ದಿನಾಚರಣೆಪ್ರಯುಕ್ತ ನಗರದ ಒಕ್ಕಲಿಗರ ಸಮುದಾಯದಭವನದಲ್ಲಿ ನಡೆದ ವೈದ್ಯರಿಗೆ ಅಭಿನಂದನೆಕಾರ್ಯಕ್ರಮದಲ್ಲಿ ಮಾತನಾಡಿ,ಕೋವಿಡ್ ಸಂಕಷ್ಟದಲ್ಲಿವೈದ್ಯಕೀಯ ಕ್ಷೇತ್ರದ ಸಿಬ್ಬಂದಿ ತ್ಯಾಗ ಅಪಾರವಿದೆ. ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ, ಕೊರೊನಾ ವಿರುದ್ಧ ಅವರು ನಡೆಸಿದಹೋರಾಟ ಅಪಾರವಿದೆ. ಕೊರೊನಾ ವಿರುದ್ಧಸರ್ಕಾರ, ವೈದ್ಯಕೀಯ ಕ್ಷೇತ್ರ ಶ್ರಮಿಸಿದ್ದರೂ ವೈದ್ಯಕೀಯ ಕ್ಷೇತ್ರದ ಪಾತ್ರ ಸರ್ಕಾರಕ್ಕಿಂತ ಹೆಚ್ಚಾಗಿದೆ ಎಂದರು.
ದೂರುವುದು ಸಲ್ಲದು: ಇತ್ತೀಚಿನ ದಿನಗಳಲ್ಲಿಚಿತ್ರಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿವೈದ್ಯರ ಅವಹೇಳನಕಾರಿಯಾಗಿ ಚಿತ್ರಿಸುವುದು,ಅವಹೇಳನವಾಗಿ ಮಾತುಗಳು ಆಡುವುದನ್ನು ಖಂಡಿಸಬೇಕಿದೆ. ಯಾರೋ ಒಬ್ಬರು ಮಾಡಿದತಪ್ಪಿಗೆ ಇಡೀ ವೈದ್ಯಕೀಯ ಕ್ಷೇತ್ರವನ್ನು ದೂರುವುದು ಸಲ್ಲದು ಎಂದರು.
ವೈದ್ಯರ ಮಹತ್ವ ಅರಿವು: ತಹಶೀಲ್ದಾರ್ ಟಿ.ಎಸ್.ಶಿವರಾಜ್ ಮಾತನಾಡಿ, ವೈದ್ಯರ ಮಹತ್ವಈ ಹಿಂದಿಗಿಂತಲೂ ಕೊರೊನಾ ಸಂದರ್ಭದಲ್ಲಿಜನರಿಗೆ ಅರಿವಾಗಿದೆ. ತಾಲೂಕಿನ ವೈದ್ಯಕೀಯ ಸಿಬ್ಬಂದಿ ಕೊರೊನಾದಲ್ಲಿ ಬಹಳಷ್ಟು ಕಾಳಜಿವಹಿಸಿ ಕಾರ್ಯನಿರ್ವಹಿಸಿದ್ದಾರೆ. ಜಿಲ್ಲಾಡಳಿತಹಾಗೂ ತಾಲೂಕು ಆಡಳಿತ ಕೋವಿಡ್ ನಿಗ್ರಹಕ್ಕೆನೀಡಿದ ಒತ್ತಡದ ನಡುವೆಯೂ ಮಾಡಿದ ಸೇವೆಪ್ರಶಂಸನೀಯ. ಇದೇ ರೀತಿ ತಾಲೂಕಿನಲ್ಲಿ ಸೇವೆಯನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.
ಮೃತ ವೈದ್ಯಕೀಯ ಸಿಬ್ಬಂದಿ ಕುಟುಂಬಕ್ಕೆ ಪರಿಹಾರ: ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಕೋವಿಡ್-19 ಕರ್ತವ್ಯದ ವೇಳೆ ಮೃತಪಟ್ಟ ವೈದ್ಯಕೀಯ ಸಿಬ್ಬಂದಿ ಕುಟುಂಬಕ್ಕೆ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಉದ್ಯೋಗವನ್ನು ಸರ್ಕಾರ ನೀಡಬೇಕು. ತಾಲೂಕಿನಲ್ಲಿಯಾವುದೇ ವೈದ್ಯಕೀಯ ವಿದ್ಯಾಲಯ ಇಲ್ಲವಾಗಿದೆ. ಎರಡನೇ ಅಲೆ ಆತಂಕ ತಾಲೂಕಿನಲ್ಲಿ ಕಡಿಮೆಯಾಗಿದ್ದು, ಮೂರನೇ ಅಲೆಯ ಆತಂಕಎದುರಿಗಿದೆ.ಈನಿಟ್ಟಿನಲ್ಲಿವೈದ್ಯರು ಸಜ್ಜಾಗಬೇಕುಎಂದರು. ಈ ಸಂದರ್ಭದಲ್ಲಿ 60 ವೈದ್ಯರನ್ನುಸನ್ಮಾನಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ, ಆಡಳಿತ ವೈದ್ಯಾಧಿಕಾರಿಡಾ.ರಮೇಶ್, ಕೊಡಿಗೇಹಳ್ಳಿ ಗ್ರಾಪಂ ಸದಸ್ಯೆನಾಗರತ್ನಮ್ಮ ಹಾಜರಿದ್ದರು.