Advertisement

ಸೋಂಕು ಇಳಿಕೆ: ತಾತ್ಕಾಲಿಕ ಚಿತಾಗಾರ ಬಂದ್‌

06:07 PM Jun 27, 2021 | Team Udayavani |

ಬೆಂಗಳೂರು: ನಗರದಲ್ಲಿ ಕೊರೊನಾ ಪ್ರಕರಣಹಾಗೂ ಸೋಂಕಿತರ ಸಾವಿನ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ತಾವರೆಕೆರೆಯ ಕುರುಬರಹಳ್ಳಿಯಲ್ಲಿನಿರ್ಮಿಸಲಾಗಿದ್ದ ತಾತ್ಕಾಲಿಕ ಸಾಮೂಹಿಕ ಚಿತಾಗಾರವನ್ನು ಸ್ಥಗಿತಗೊಳಿಸಲಾಗಿದೆ.

Advertisement

ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಏರಿಕೆಯಾಗಿದ್ದಸೋಂಕಿತರ ಸಾವಿನ ಪ್ರಮಾಣ ಜೂನ್‌ ತಿಂಗಳಲ್ಲಿಗಣನೀಯವಾಗಿ ಇಳಿಮುಖವಾಗಿದೆ. ಹೀಗಾಗಿ,ನಗರದ ಅತಿದೊಡ್ಡ ಸಾಮೂಹಿಕ ಚಿತಾಗಾರಗಳಲ್ಲಿಒಂದಾಗಿದ್ದ ಕುರುಬರಹಳ್ಳಿ ಚಿತಾಗಾರವನ್ನು ಜೂ.24ರಂದು ಸ್ಥಗಿತಗೊಳಿಸಲಾಗಿದೆ.

ಅಲ್ಲದೆ, ಗಿಡ್ಡನಹಳ್ಳಿಹಾಗೂ ಬಿದರಗುಪ್ಪೆ ಸಾಮೂಹಿಕ ಚಿತಾಗಾರವನ್ನುಜೂನ್‌ ತಿಂಗಳ ಪ್ರಾರಂಭದಲ್ಲೇ ಮುಚ್ಚಲಾಗಿತ್ತು.ಕುರುಬರಹಳ್ಳಿ ಚಿತಾಗಾರ ದೊಡ್ಡದಾಗಿದ್ದು,ಏಕಕಾಲದಲ್ಲಿ41ಮೃತದೇಹಗಳನ್ನುದಹಿಸಬಹುದು.ಪಾಲಿಕೆಯಿಂದ30ಕ್ಕೂ ಹೆಚ್ಚು ಗುತ್ತಿಗೆ ಸಿಬ್ಬಂದಿಯನ್ನುಇಲ್ಲಿ ನಿಯೋಜಿಸಲಾಗಿತ್ತು.

ಕಳೆದ ಮೂರ್‍ನಾಲ್ಕುವಾರಗಳಿಂದ ಚಿತಾಗಾರಕ್ಕೆ ಕೆಲವು ಮೃತದೇಹ ಮಾತ್ರಬರುತ್ತಿದ್ದವು. ಜೂನ್‌ 23ರಂದು ಒಂದೇ ಮೃತದೇಹಅಂತ್ಯಸಂಸ್ಕಾರಕ್ಕೆ ಬಂದಿತ್ತು. ಪ್ರಸ್ತುತ ಸೋಂಕಿತರಮೃತದೇಹಗಳನ್ನು ಪಾಲಿಕೆ ವ್ಯಾಪ್ತಿಯಲ್ಲಿನಚಿತಾಗಾರಗಳಲ್ಲಿ ಅಂತ್ಯಸಂಸ್ಕಾರ ಮಾಡಬಹುದು.ಹೀಗಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳುತಿಳಿಸಿದ್ದಾರೆ.

1,708 ಮೃತದೇಹ ಅಂತ್ಯಕ್ರಿಯೆ: ಕುರುಬರಹಳ್ಳಿಗ್ರಾಮದಲ್ಲಿ ಏ.25 ರಂದು 4 ಎಕರೆಯಲ್ಲಿ ತಾತ್ಕಾಲಿಕಚಿತಾಗಾರ ತೆರೆಯಲಾಗಿತ್ತು. ಮೊದಲ ದಿನವೇ 16ಕೋವಿಡ್‌ ಸೋಂಕಿತರ ಮೃತದೇಹಗಳನ್ನು ಅಂತ್ಯಕ್ರಿಯೆ ನಡೆದಿತ್ತು. ಮೇ 7 ರಂದು ಒಂದೇ ದಿನ 84ಮೃತದೇಹಗಳ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.ಕಳೆದೆರಡು ತಿಂಗಳಲ್ಲಿ 1,708 ಮೃತದೇಹಗಳನ್ನುದಹನ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next