Advertisement

ಹಾಸನ: 283 ಮಂದಿಗೆ ಕೊರೊನಾ ಸೋಂಕು

09:04 PM Jun 23, 2021 | Team Udayavani |

ಹಾಸನ:ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 283 ಮಂದಿಗೆಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿ ನಿಂದ7ಜನರು ಸಾವಿಗೀಡಾಗಿದ್ದಾರೆ. ಮೃತರಲ್ಲಿ ಅರಸೀಕೆರೆ ತಾಲೂ ಕಿನ ಮೂವರು, ಹಾಸನ, ಚನ್ನರಾಯಪಟ್ಟಣ, ಹೊಳೆನರಸೀಪುರ ಮತ್ತು ಬೇಲೂರು ತಾಲೂಕಿನ ತಲಾ ಒಬ್ಬರುಸೇರಿದ್ದಾರೆ. ಜಿಲ್ಲೆಯಲ್ಲೀಗ ಸೋಂಕಿತರ ಸಂಖ್ಯೆ99,494ಕ್ಕೆ ಏರಿದ್ದು, ಸೋಂಕಿನಿಂದ ಈವರೆಗೆ ಒಟ್ಟು1,171 ಮಂದಿ ಮೃತಪಟ್ಟಿದ್ದಾರೆ.

Advertisement

ಮಂಗಳವಾರ652ಮಂದಿಗುಣಮುಖರಾಗಿದ್ದು,ಜಿಲ್ಲೆಯಲ್ಲಿಈಗಸಕ್ರಿಯಪ್ರಕರಣಗಳ ಸಂಖ್ಯೆ4,612ಕ್ಕೆಇಳಿದಿದೆ.ಮಂಗಳವಾರ ಸೋಂಕುದೃಢಪಟ್ಟಿರುವ283ಮಂದಿಪೈಕಿ ಹಾಸನ ತಾಲೂ ಕಿನ 86 ಮಂದಿ ಸೇರಿದ್ದರೆ, ಚನ್ನರಾಯಪಟ್ಟಣ57, ಅರಕಲಗೂಡು40, ಅರಸೀಕೆರೆ37, ಬೇಲೂರು25, ಹೊಳೆನರಸೀಪುರ15, ಸಕಲೇಶಪುರ14, ಆಲೂರು ತಾಲೂಕಿನ7 ಮಂದಿ , ಹೊರ ಜಿಲ್ಲೆಯ ಇಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ಡಿಎಚ್‌ಒಡಾ.ಸತೀಶ್‌ಕುಮಾರ್‌ ತಿಳಿಸಿದ್ದಾರೆ. ಐಸಿಯುನಲ್ಲಿರುವ112 ಮಂದಿ ಸೇರಿ ಒಟ್ಟು 4,612 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next