ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಭಾವತಗ್ಗಿರುವ ಜಿಲ್ಲೆಯಲ್ಲಿ ವ್ಯಾಪಾರ ಮತ್ತು ವಹಿವಾಟು ಮಾಡಿಕೊಳ್ಳಲು ಸರ್ಕಾರ ಅವಕಾಶಕಲ್ಪಿಸಿರುವ ಹಿನ್ನೆಲೆಯಲ್ಲಿ ರೇಷ್ಮೆ-ದ್ರಾಕ್ಷಿ ನಾಡು ಚಿಕ್ಕಬಳ್ಳಾಪುರದಲ್ಲೂಅನ್‌ಲಾಕ್‌ಮಾಡಲಾಗಿದೆ.ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲಾಡಳಿತಸಂಪೂರ್ಣ ಲಾಕ್‌ಡೌನ್‌ಘೋಷಣೆ ಮಾಡಿತ್ತು.
ಇದಕ್ಕೆ ಜನಸಹಕಾರ ನೀಡಿದ ಪರಿಣಾಮ ಜಿಲ್ಲೆಯಲ್ಲಿ ಪಾಸಿಟಿವ್ ರೇಟ್‌ಕಡಿಮೆ ಆಗಿದೆ. ಸ್ವತಃ ಜಿಲ್ಲಾಧಿಕಾರಿ ಆರ್.ಲತಾ ಇದನ್ನುಸ್ಪಷ್ಟಪಡಿಸಿದ್ದರು. ಸರ್ಕಾರವೂ ಪಾಸಿಟೀವ್ ರೇಟ್ ಕಡಿಮೆಇರುವ ಜಿಲ್ಲೆಯಲ್ಲಿ ಕೆಲವೊಂದು ನಿರ್ಬಂಧ ಸಡಿಲಗೊಳಿಸಿಬೆಳಗ್ಗೆ 6ರಿಂದ ಸಂಜೆ 5 ಗಂಟೆಯವರೆಗೆ ವ್ಯಾಪಾರವಹಿವಾಟು ಮಾಡಿಕೊಳ್ಳಲು ಅವಕಾಶ ಒದಗಿಸಿದೆ.
ಜಿಲ್ಲೆಪುನಃ ಸಹಜ ಸ್ಥಿತಿಗೆ ತಲುಪಲಿದೆ ಎಂಬ ಸಂತಸ ವರ್ತಕರುಮತ್ತು ಜನರಲ್ಲಿ ಮನೆ ಮಾಡಿದೆ.ಸಾರಿಗೆ ಬಸ್ ಸಂಚಾರ: ಶೇ.50 ಪ್ರಯಾಣಿಕರೊಂದಿಗೆ ರಸ್ತೆಸಾರಿಗೆ ಸಂಸ್ಥೆಯ ಬಸ್ ಸಂಚಾರಕ್ಕೂ ಅವಕಾಶಕಲ್ಪಿಸಿದ್ದರಿಂದ ಜಿಲ್ಲೆಯಲ್ಲಿ ಸೋಮವಾರದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ಆರಂಭಿಸಲಿವೆ.ಕೋವಿಡ್ ಪರೀಕ್ಷೆ ಕಡ್ಡಾಯ: ರಸ್ತೆ ಸಾರಿಗೆ ಸಂಸ್ಥೆ ಬಸ್‌ಓಡಾಟ ಆರಂಭಿಸಲು ಅಧಿಕಾರಿಗಳು ಸಕಲ ಸಿದ್ಧತೆಮಾಡಿಕೊಂಡಿದ್ದಾರೆ.
ಮೊದಲಿಗೆ ಎಲ್ಲಾ ಬಸ್ ಸ್ವತ್ಛಗೊಳಿಸಿ,ಸ್ಯಾನಿಟೈಸ್ ಮಾಡಲಾಗಿದೆ. ಕರ್ತವ್ಯಕ್ಕೆ ಹಾಜರಾಗುವಚಾಲಕರು ಮತ್ತು ನಿರ್ವಹಕರಿಗೆ ಕೋವಿಡ್-19 ಪರೀಕ್ಷೆಮಾಡಿಸಿಕೊಂಡು ನೆಟಿಗಿವ್ ವರದಿ ಇದ್ದರೇ ಮಾತ್ರ ಕೆಲಸಕ್ಕೆಅವಕಾಶ ಕಲ್ಪಿಸಲಾಗಿದೆ.
ಜೊತೆಗೆ ಲಸಿಕೆ ಕಡ್ಡಾಯಗೊಳಿಸಲಾಗಿದೆ.ಜಿಲ್ಲೆಯ ವಿವಿಧ ತಾಲೂಕುಗಳಿಗೆ 200 ಬಸ್ ಸಂಚಾರಆರಂಭವಾಗಲಿದ್ದು,ಪ್ರಯಾಣಿಕರ ಸ್ಪಂದನೆ ನೋಡಿಕೊಂಡುಬಸ್‌ಗಳ ಸಂಖ್ಯೆ ಹೆಚ್ಚಿಸಲು ಸಹ ಕ್ರಮ ಕೈಗೊಳ್ಳಲಾಗಿದೆ,ಸಂಜೆ ವಾಪಸ್ ಬರುವ ಬಸ್‌ಗಳನ್ನು ಸ್ಯಾನಿಟೈಸ್ ಮಾಡಲುಕ್ರಮ ಕೈಗೊಳ್ಳಲಾಗಿದೆ ಎಂದು ಎಂದು ಕೆಎಸ್‌ಆರ್‌ಟಿಸಿಚಿಕ್ಕಬಳ್ಳಾಪುರ ವಿಭಾಗೀಯ ನಿಯಂತ್ರಣಾಧಿಕಾರಿವಿ.ಬಸವರಾಜ್ ತಿಳಿಸಿದ್ದಾರೆ.