Advertisement

ಕೋವಿಡ್‌ಗೆ ಬಲಿ ಆದ ರೈತರ ಕೈಹಿಡಿದ ಅಪೆಕ್ಸ್

08:26 PM Jun 20, 2021 | Team Udayavani |

ಕೋಲಾರ: ಅವಳಿ ಜಿಲ್ಲೆಗಳಲ್ಲಿ ಕೊರೊನಾಸೋಂಕಿಗೆ ಜೀವ ತೆತ್ತ ರೈತರು ಡಿಸಿಸಿ ಬ್ಯಾಂಕ್‌ಮತ್ತು ಬ್ಯಾಂಕ್‌ ವ್ಯಾಪ್ತಿಯ ಸಹಕಾರ ಸಂಘಗಳಲ್ಲಿ ಬೆಳೆಸಾಲ ಮಾಡಿದ್ದರೆ ಅಂತಹ ಕುಟುಂಬಗಳಿಗೆಪರಿಹಾರ ಒದಗಿಸಲು ಅಪೆಕ್ಸ್‌ ಬ್ಯಾಂಕ್‌ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅಪೆಕ್ಸ್‌ ಬ್ಯಾಂಕ್‌ ನಿರ್ದೇಶಕರೂ ಹಾಗೂ ಡಿಸಿಸಿಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದ್ದಾರೆ.

Advertisement

ಕೋವಿಡ್‌ನಿಂದ ಮೃತರಾದ ರೈತರ ಮಾಹಿತಿಸಂಗ್ರಹಿಸುವ ಸಂಬಂಧ ಶನಿವಾರಕೋಲಾರ ಡಿಸಿಸಿಬ್ಯಾಂಕ್‌ ಸಭಾಂಗಣದಲ್ಲಿ ಬ್ಯಾಂಕ್‌ ಅಧಿಕಾರಿಗಳಸಭೆ ನಡೆಸಿದ ಅವರು, ಅಪೆಕ್ಸ್‌, ಡಿಸಿಸಿ ಬ್ಯಾಂಕ್‌ಸಹಯೋಗದಲ್ಲಿ ರೈತರಿಗೆ ಈ ನೆರವು ನೀಡಲುನಿರ್ಧರಿಸಿದ್ದು, ಸಾಲ ಪಡೆದು ಮೃತರಾಗಿರುವರೈತರ ಮಾಹಿತಿ ಸಂಗ್ರಹಿಸಿ ಬ್ಯಾಂಕಿನ ಕೇಂದ್ರಕಚೇರಿಗೆ ಜು.1 ರೊಳಗೆ ಸಲ್ಲಿಸಲು ಸೂಚಿಸಿದರು.

ಏಪ್ರಿಲ್‌-2020 ರಿಂದಜೂ.2021ಕ್ಕೆಪರಿಗಣನೆ:ಏಪ್ರಿಲ್‌ 1, 2020 ರಿಂದ ಜೂ.30, 2021ರ ಈಅವಧಿಯಲ್ಲಿ ಬ್ಯಾಂಕಿನಿಂದ ಬೆಳೆಸಾಲ ಪಡೆದಿದ್ದು,ಕೋವಿಡ್‌ನಿಂದ ಮೃತಪಟ್ಟ ರೈತನ ಕುಟುಂಬಕ್ಕೆಪರಿಹಾರ ಒದಗಿಸಲು ನಿರ್ಧಾರ ಕೈಗೊಳ್ಳಲಾಗಿದೆ.ಡಿಸಿಸಿ ಬ್ಯಾಂಕಿನಿಂದ ಅಥವಾ ಬ್ಯಾಂಕಿನ ಆರ್ಥಿಕನೆರವಿನೊಂದಿಗೆ ಸೊಸೈಟಿಗಳಿಂದ ಬ್ಯಾಂಕ್‌ ನಿಗದಿಪಡಿಸಿರುವ ಅವಧಿಯಲ್ಲಿ ಮತ್ತು ಕೃಷಿ ಭೂಮಿಪಹಣಿ ಅಡಮಾನವಿಟ್ಟು ಬೆಳೆಸಾಲ ಪಡೆದಿರುವರೈತ ಕೋವಿಡ್‌ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿಬಲಿಯಾ ಗಿದ್ದರೆ ಅಂತಹವರಿಗೆ ಮಾತ್ರ ಈಪರಿಹಾರದ ಪ್ರಯೋಜನ ಸಿಗಲಿದೆ ಎಂದು ತಿಳಿಸಿದರು.

ಮೃತ ರೈತ ಕುಟುಂಬದಿಂದ ಪಡಿತರಚೀಟಿ, ಕೋವಿಡ್‌ನಿಂದ ಮೃತಪಟ್ಟ ದೃಢೀಕೃತಪ್ರಮಾಣ ಪತ್ರ, ಆಧಾರ್‌, ಸಾಲ ಪಡೆದಿರುವ ದಾಖಲೆಗಳನ್ನು ಆಯಾ ವ್ಯಾಪ್ತಿಯ ಪ್ಯಾಕ್ಸ್‌ಗಳಕಾರ್ಯದರ್ಶಿಗಳೇ ಸಂಗ್ರಹಿಸಿ ಕೇಂದ್ರ ಕಚೇರಿಗೆ ಜು.1ರೊಳಗೆ ಸಲ್ಲಿಸಲು ಸೂಚಿಸಿದರು.

ಇತರೆ ರೈತರು ಸಾಲ ಪಾವತಿಗೆ ಸೂಚನೆ:ಕೋವಿಡ್‌ನಿಂದಾಗಿ ಸಾಲ ಪಾವತಿ 2 ತಿಂಗಳುಸ್ಥಗಿತಗೊಂಡಿತ್ತು ಎಂದ ಅವರು, ಬಡ್ಡಿರಹಿತ ಸಾಲಪಡೆದಿರುವ ರೈತರು, ಮಹಿಳಾ ಸ್ವಸಹಾಯಸಂಘಗಳ ಪ್ರತಿನಿಧಿಗಳು ಸಾಲದ ಕಂತುಪಾವತಿಸುವ ಮೂಲಕ ಬಡ್ಡಿಯ ಹೊರೆ ಬೀಳದಂತೆಎಚ್ಚರವಹಿಸಿ ಎಂದುಕೋರಿದರು.

Advertisement

ಅಪೆಕ್ಸ್ಬ್ಯಾಂಕಿನ ನಿರ್ಧಾರಕ್ಕೆ ಸ್ವಾಗತ: ಬ್ಯಾಂಕಿನನಿರ್ದೇಶಕರಾದ ನಾಗನಾಳ ಸೋಮಣ್ಣ, ಎಂ.ಎಲ್‌.ಅನಿಲ್‌ಕುಮಾರ್‌, ಕೆ.ವಿ.ದಯಾನಂದ್‌ಮಾತನಾಡಿ, ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿಅಫೆಕ್ಸ್‌ ಬ್ಯಾಂಕ್‌ ಉತ್ತಮ ನಿರ್ಧಾರ ಮಾಡಿದೆ,ಮೃತ ರೈತ ಕುಟುಂಬಗಳಿಗೆ ನೆರವಾಗುವ ಮೂಲಕ ಅನ್ನದಾತನ ರಕ್ಷಣೆಗೆ ಮುಂದಾಗಿರುವುದು ಸ್ವಾಗತಾರ್ಹ ಎಂದರು. ಡಿಸಿಸಿ ಬ್ಯಾಂಕ್‌ನ ಎಜಿಎಂಖಲೀಮುಲ್ಲಾ, ಅಧಿಕಾರಿಗಳಾದ ತಿಮ್ಮಯ್ಯ,ಶುಭಾ, ಮಮತಾ, ಬಾಲಾಜಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next