ಗೌರಿಬಿದನೂರು: ಕೊರೊನಾ ಸೋಂಕುನಿವಾರಿಸುವಲ್ಲಿ ಕೇಂದ್ರ-ರಾಜ್ಯ ಸರ್ಕಾರವಿಫಲವಾಗಿದೆ ಎಂದು ಮಾಜಿ ಸಚಿವ ಹಾಗೂಶಾಸಕ ಶಿವಶಂಕರರೆಡ್ಡಿ ಆರೋಪಿಸಿದರು.ಗೌರಿಬಿದನೂರು ನಗರದ ಪೆಟ್ರೋಲ್ ಬಂಕ್‌ಮುಂಭಾಗದಲ್ಲಿ ಕಾಂಗ್ರೆಸ್ ವತಿಯಿಂದ ಕೇಂದ್ರಮತ್ತು ರಾಜ್ಯ ಸರ್ಕಾರದ ಆರ್ಥಿಕ ನೀತಿ ಮತ್ತುಅಗತ್ಯ ವಸ್ತುಗಳಾದ ಪೆಟ್ರೋಲ್, ಡೀಸೆಲ್, ಗ್ಯಾಸ್,ಅಡುಗೆ ಎಣ್ಣೆ, ದಿನಸಿ ವಸ್ತುಗಳ, ಬೆಲೆ ಏರಿಕೆಖಂಡಿಸಿ ತಾಲೂಕು ಕಾಂಗ್ರೆಸ್ ಹಮ್ಮಿಕೊಂಡಿದ್ದಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜೀನಾಮೆ ನೀಡಿ: ದೇಶವನ್ನು ಕಾಡುತ್ತಿರುವಮಹಾಮಾರಿ ಕೊರೊನಾ ಸೋಂಕನ್ನುತಡೆಯುವಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳುಸಂಪೂರ್ಣವಾಗಿ ವಿಫಲಗೊಂಡಿವೆ. ರಾಜ್ಯದಆರೋಗ್ಯ ಸಚಿವರ ನಿರ್ಲಕ್ಷ ಮತ್ತು ಅವರಕಾರ್ಯವೈಖರಿಯಿಂದ ಅಮಾಯಕ ರೋಗಿಗಳಪ್ರಾಣ ಹೋಗಿದೆ. ಹೀಗಾಗಿ ನೈತಿಕ ಹೊಣೆ ಹೊತ್ತುಆರೋಗ್ಯ ಸಚಿವರು ಕೂಡಲೇ ರಾಜೀನಾಮೆನೀಡಬೇಕು ಎಂದು ಆಗ್ರಹಿಸಿದರು.
ದಿಕ್ಕು ತಪ್ಪಿಸಿದ್ದಾರೆ: ಕೇಂದ್ರದಲ್ಲಿ ಪ್ರಧಾನಿ ಮೋದಿಅಧಿಕಾರ ಸ್ವೀಕರಿಸಿ 7 ವರ್ಷ ಕಳೆದಿದೆ. ಕೇವಲಭಾಷಣ, ಧಾರ್ಮಿಕ ಭಾವನೆಗಳ ಮೂಲಕಯುವಜನತೆ ದಿಕ್ಕು ತಪ್ಪಿಸುವುದೇ ಅವರ ಸಾಧನೆಎಂದು ದೂರಿದರು.ದೇಶದ ಸಂಪತ್ತು ಕಾರ್ಪೊರೇಟ್ ಕಂಪನಿಗಳಿಗೆನೀಡಿ ಅವರ ಗುಲಾಮರಾಗಿದ್ದಾರೆ. ದೇಶದಆಧಾರ ಸ್ತಂಭವಾದ ಕೃಷಿ ಕ್ಷೇತ್ರ ಇನ್ನು ಬರಡಾಗಿದೆ.ಕೂಲಿ ಕಾರ್ಮಿಕರು ಪರದಾಡುವಂತಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದಂತಾಗಿದೆ ಎಂದರು.
ಸಂಕಷ್ಟದ ಪರಿಸ್ಥಿತಿಯಿದೆ: ಕಳೆದ 2 ವರ್ಷದಿಂದಕೊರೊನಾ ಸೋಂಕು ದೇಶವನ್ನು ಕಾಡಿದೆ. ಇದನ್ನುತಡೆಯಲು ಬಿಜೆಪಿ ಸರ್ಕಾರ ಯಾವುದೇ ಕ್ರಮಕೈಗೊಳ್ಳಲಿಲ್ಲ .ಕೇವಲ ಲಾಕ್‌ಡೌನ್ ಮಾಡುತ್ತಿದ್ದಾರೆ.ಇದರಿಂಯುವ ಕೈಗಳಿಗೆ ಕೆಲಸವಿಲ್ಲದೆ ಬೀದಿಗೆಬೀಳುವ ಪರಿಸ್ಥಿತಿ ತಂದಿದ್ದಾರೆಂದು ಆರೋಗ್ಯಸಚಿವರ ವಿರುದ್ಧ ಹರಿಹಾಯ್ದರು.