Advertisement

ಚಾ.ನಗರ: ಸತತ 2ನೇ ದಿನವೂ ಡಬಲ್‌ ಡಿಜಿಟ್‌ ಸೋಂಕು

07:03 PM Jun 17, 2021 | Team Udayavani |

ಚಾಮರಾಜನಗರ: ಕೋವಿಡ್‌ 2ನೇಅಲೆ ಆರಂಭವಾದ ಬಳಿಕ ಜಿಲ್ಲೆಯಲ್ಲಿ700 ರವರೆಗೂ ಹೋಗಿದ್ದ ಪ್ರತಿದಿನದಪ್ರಕರಣಗಳ ಸಂಖ್ಯೆ ಎರಡು ಅಂಕಿಗಿಳಿದಿದ್ದು, ಬುಧವಾರ 73 ಪ್ರಕರಣಗಳು ವರದಿಯಾಗಿವೆ.

Advertisement

ಚಾಮರಾಜನಗರ  ‌ಪಟ್ಟಣದಲ್ಲಿ 5 ಪ್ರಕರಣಗಳು, ಗ್ರಾಮಾಂತರ ದಲ್ಲಿ25, ಗುಂಡ್ಲುಪೇಟೆ ಪಟ್ಟಣದಲ್ಲಿ 2 ಹಾಗೂ ಗ್ರಾಮಾಂತರದಲ್ಲಿ 16, ಕೊಳ್ಳೇಗಾಲಪಟ್ಟಣದಲ್ಲಿ 3 ಹಾಗೂ ಗ್ರಾಮಾಂತರದಲ್ಲಿ 13, ಹನೂರು ಪಟ್ಟಣದಲ್ಲಿ ಶೂನ್ಯಹಾಗೂ ಗ್ರಾಮಾಂತರದಲ್ಲಿ 8ಪ್ರಕರಣಗಳು ಮತ್ತು ಯಳಂದೂರುಪಟ್ಟಣ ಹಾಗೂ ಗ್ರಾಮಾಂತರದಲ್ಲಿ ಶೂನ್ಯಪ್ರಕರಣಗಳು ವರದಿಯಾಗಿವೆ.

2ನೇ ಅಲೆ ಆರಂಭವಾದ ಬಳಿಕ ಜಿಲ್ಲೆಯಲ್ಲಿ ಪ್ರತಿದಿನದ ಪ್ರಕರಣಗಳುನಾಗಾಲೋಟದಿಂದ ಏರುತ್ತ 700ರವರೆಗೂ ತಲುಪಿದ್ದವು. ಕಳೆದ ಒಂದುವಾರದಿಂದ 200, 150ರ ಆಸುಪಾಸಿನಲ್ಲಿದ್ದ ಪ್ರಕರಣಗಳು, ಮಂಗಳವಾರ93ಕ್ಕೆ ಪ್ರಕರಣ ವರದಿಯಾಗಿದ್ದರೆ, ಬುಧವಾರ 73 ಪ್ರಕರಣಗಳು ದೃಢಪಟ್ಟಿವೆ.2,008 ಮಾದರಿಗಳನ್ನು ಪರೀಕ್ಷೆ ಮಾಡಿರುವುದು ವಿಶೇಷ.ಜಿಲ್ಲೆಯಲ್ಲಿ ಬುಧವಾರ1 ಸಾವಿನ ಪ್ರಕರಣ ವರದಿಯಾಗಿದೆ.

214 ಮಂದಿಗುಣಮುಖರಾಗಿದ್ದಾರೆ.ಇದರೊಂದಿಗೆ ಜಿಲ್ಲೆಯಲ್ಲಿಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿಗಣನೀಯ ಇಳಿಕೆ ಕಂಡು ಬಂದಿದೆ.ಜಿಲ್ಲೆಯಲ್ಲಿ ಪ್ರಸ್ತುತ 1,091 ಮಂದಿಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 464 ಮಂದಿ ಇದುವರೆಗೆ ಮೃತಪಟ್ಟಿದ್ದಾರೆ. ಒಟ್ಟು 29,903ಮಂದಿಗೆ ಸೋಂಕು ದೃಢಪಟ್ಟಿದ್ದು,ಇವರಲ್ಲಿ 28,228 ಮಂದಿಗುಣಮುಖರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next