ರಾಮನಗರ: ಜನಸೇವಾ ಫೌಂಡೇಷನ್ ಅಧ್ಯಕ್ಷ, ನಗರ ಬಿಜೆಪಿ ಪ್ರಧಾನ ಕಾರ್ಯ ದರ್ಶಿ ಡಿ.ನರೇಂದ್ರ ಹಿಂದೂ ರುದ್ರಭೂಮಿಯಲ್ಲಿ ಸ್ವತ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡ ಶ್ರಮಿಕರಿಗೆ ದಿನಸಿ ಕಿಟ್ ವಿತರಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜ್ ಮಾತನಾಡಿ, ಲಾಕ್ಡೌನ್ ವೇಳೆ ಸಮಾಜದ ಎಲ್ಲಾ ವರ್ಗದವರು ಸಂಕಷ್ಟದಲ್ಲಿದ್ದಾರೆ. ವಾರಿಯರ್ಸ್ ಕರ್ತವ್ಯಕ್ಕೆ ಇಡೀ ಸಮಾಜ ಬಹುಪರಾಕ್ ಹೇಳು ತ್ತಿದೆ. ಆದರೆ, ಸ್ಮಶಾನದ ಕಾವಲು ಕಾಯುತ್ತ, ಸ್ವತ್ಛತೆಯಲ್ಲಿ ತೊಡಗಿಸಿಕೊಂಡವರನ್ನು ಸಮಾಜ ಸ್ಮರಿಸಲಿಲ್ಲ. ತಮ್ಮ ಸ್ನೇಹಿ ತರು, ನೆಂಟರಿಷ್ಟರ ಶವಸಂಸ್ಕಾರಕ್ಕೆ ಸ್ಮಶಾನಕ್ಕೆ ಹೋದಾಗ ಮಾತ್ರ ಅಲ್ಲಿನ ವ್ಯವಸ್ಥೆ, ಅಲ್ಲಿ ಶ್ರಮಿಸುವವರ ಬಗ್ಗೆ ಒಂದಿಷ್ಟು ಕಾಳಜಿ ವ್ಯಕ್ತವಾಗುತ್ತದೆ.
ಸೋಂಕಿತರು ಸೇರಿದಂತೆ ಮೃತಪಡುವ ಎಲ್ಲ ದೇಹಗಳು ಸ್ಮಶಾನ ಸೇರಲೇಬೇಕು. ಸ್ಮಶಾನದಲ್ಲಿ ಕರ್ತವ್ಯ ನಿರ್ವಹಿಸುವವರ ಬಗ್ಗೆ ಸಮಾಜಕ್ಕೆ ಕಾಳಜಿ ಕಡಿಮೆ. ಅವರ ಬವಣೆಯನ್ನು ಕಣ್ಣಾರೆ ಕಂಡು ಡಿ.ನರೇಂದ್ರ ಕಿಟ್ ವಿತರಿಸುತ್ತಿರುವುದು ಶ್ಲಾಘನೀಯ. ಕರ್ಫ್ಯೂ ವೇಳೆ ನಿರ್ಗ ತಿಕರಿಗೆ ಸಿದ್ಧಪಡಿಸಿದ ಆಹಾರ ವಿತರಣೆ, ಅಗತ್ಯವಿದ್ದವರಿಗೆ ದಿನಸಿ ಕಿಟ್ ವಿತರಣೆ ಯನ್ನು ನರೇಂದ್ರ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅರ್ಹರನ್ನು ಗುರುತಿಸಿ ನೆರವು: ದಿನಸಿ ಕಿಟ್ ಆಯೋಜಕ ಡಿ.ನರೇಂದ್ರ ಮಾತ ನಾಡಿ, ಕರ್ಫ್ಯೂ ವೇಳೆ ಸವಿತಾ ಸಮಾಜದವರು, ರುದ್ರಭೂಮಿ ಕಾವಲುಗಾರರು, ಆಟೋ ಚಾಲಕರು ಹೀಗೆ ವಿವಿಧ ಕ್ಷೇತ್ರಗಳ ಜನ ಸಂಕಷ್ಟದಲ್ಲಿದ್ದಾರೆ. ನೆರವಿನ ತೀರಾ ಅಗತ್ಯವಿರುವವರನ್ನು ಗುರುತಿಸಿ ತಾವು ದಿನಸಿ ಕಿಟ್ಗಳನ್ನು ವಿತರಿಸುತ್ತಿರುವುದಾಗಿ ತಿಳಿಸಿದರು. ಶಾಲು ಹೊದಿಸಿ ಗೌರವ: ರುದ್ರಭೂಮಿ ಕಾವಲುಗಾರರಿಗೆ ಡಿ.ನರೇಂದ್ರ ಅವರು ಶಾಲು ಹೊದಿಸಿ, ಫಲ-ತಾಂಬೂಲ ನೀಡಿ ಸತ್ಕರಿಸಿ ನಂತರ ದಿನಸಿಕಿಟ್ ವಿತರಿಸಿದ್ದು ವಿಶೇಷವಾಗಿತ್ತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜ್, ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಚಂದ್ರಶೇಖರ ರೆಡ್ಡಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಶಿವಾನಂದ, ಪ್ರಧಾನ ಕಾರ್ಯದರ್ಶಿ ದರ್ಶನ್ ರೆಡ್ಡಿ, ನಗರ ಯುವ ಮೋರ್ಚಾ ಅಧ್ಯಕ್ಷ ಲೋಕೇಶ್, ಮುಖಂಡ ರಂಗಸ್ವಾಮಿ ಹಾಜರಿದ್ದರು.