ಕೋಲಾರ: ಜಿಲ್ಲೆಯಲ್ಲಿ ಕೊರೊನಾ ಹರಡುವಿಕೆಕ್ರಮೇಣ ನಿಯಂತ್ರಣಕ್ಕೆ ಬರುತ್ತಿದ್ದು, ಜೂ.13 ರಂದುಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಗ್ರಾಮಗಳು ಸೋಂಕುಮುಕ್ತವಾಗಿವೆ. ಜಿಲ್ಲೆಯ ಪಾಟಿಸಿವಿಟಿ ಪ್ರಮಾಣಎರಡು ತಿಂಗಳ ನಂತರ ಶೇ.5ಕ್ಕಿಂತ ಕಡಿಮೆ ಬಂದಿದ್ದು,ಹಸಿರುವಲಯವಾಗಿ ಮಾರ್ಪಟ್ಟಿದೆ.
330ಕ್ಕೂ ಅಧಿಕ ಸಾವು: ಏಪ್ರಿಲ್ ಆರಂಭದಿಂದಲೂಜಿಲ್ಲೆಯನ್ನು ಇನ್ನಿಲ್ಲದಂತೆ ಕಾಡಿದ್ದ ಕೊರೊನಾ 2ನೇಅಲೆಯಲ್ಲಿ 330 ಮಂದಿ ಸಾವನ್ನಪ್ಪಿದ್ದಾರೆಂದು ಸರ್ಕಾರದ ಅಂಕಿ ಅಂಶಗಳು ಹೇಳುತ್ತಿವೆ. ಆದರೆ, ವಾಸ್ತವದಲ್ಲಿಇದಕ್ಕಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿರುವುದುಜಿಲ್ಲೆಯ ಜನರಿಂದಲೇ ಕೇಳಿ ಬರುತ್ತಿದೆ.
ನೆರೆಯ ಜಿಲ್ಲೆಯನ್ನೇ ಮೀರಿಸಿದೆ: ಮೊದಲ ಅಲೆಯಲ್ಲಿದಿನಕ್ಕೆ ಹತ್ತಿಪ್ಪತ್ತರ ಸಂಖ್ಯೆಯಲ್ಲಷ್ಟೇ ಇದ್ದ ಕೊರೊನಾಸೋಂಕಿತ ಪ್ರಕರಣ, ಎರಡನೇ ಅಲೆಯಲ್ಲಿ ಒಂದೇದಿನ 1200 ಪತ್ತೆ ಆಗಿದ್ದು ದಾಖಲೆಯಾಗಿದೆ. ಮೊದಲಅಲೆಯಲ್ಲಿ ನೆರೆಯ ಚಿಕ್ಕಬಳ್ಳಾಪುರಕ್ಕಿಂತಲೂ ಕಡಿಮೆಪಾಸಿಟಿವಿಟಿ, ಸಾವುಗಳು, ಸೋಂಕಿತರ ಸಂಖ್ಯೆಯನ್ನುಹೊಂದಿಲ್ಲದ ಕೋಲಾರ ಜಿಲ್ಲೆ, ಎರಡನೇ ಅಲೆಯಲ್ಲಿಚಿಕ್ಕಬಳ್ಳಾಪುರವನ್ನು ಎಲ್ಲಾ ವಿಭಾಗಗಳಲ್ಲೂ ಮೀರಿಸಿಮುನ್ನಡೆದು ಜನರನ್ನು ಕಾಡಿತ್ತು.ಮೊದಲ ಅಲೆ ನಗರದಲ್ಲಿ ಮಾತ್ರವೇ ಹೆಚ್ಚುಬಾಧಿಸಿತ್ತು. ಆದರೆ, ಎರಡನೇ ಅಲೆಯ ಸೋಂಕು ಜಿಲ್ಲೆಯ ಬಹುತೇಕ ಗ್ರಾಮಗಳನ್ನು ಸುತ್ತುವರೆದು ಹಳ್ಳಿಜನರನ್ನು ಕಂಗೆಡುವಂತೆ ಮಾಡಿಬಿಟ್ಟಿದೆ.
ಪಾಸಿಟಿವಿಟಿ ಶೇ.5 ಕ್ಕಿಂತ ಕಡಿಮೆ: ಕೇವಲ ಹತ್ತುದಿನಗಳ ಹಿಂದಷ್ಟೇ ಶೇ.20ಕ್ಕಿಂತಲೂ ಹೆಚ್ಚಿದ್ದ ಪಾಸಿಟಿವಿಟಿ ಜೂ.13 ರಂದು ಶೇ.5ಕ್ಕಿಂತ ಕಡಿಮೆದಾಖಲಾಗುವ ಮೂಲಕ ಇಡೀ ಜಿಲ್ಲೆಯನ್ನು ಹಸಿರು ದಾಖಲಾಗುವಂತಾಗಿದೆ.
1081 ಗ್ರಾಮ ಕೊರೊನಾ ಮುಕ್ತ: ಕೋಲಾರಜಿಲ್ಲೆಯಲ್ಲಿ ಗ್ರಾಮ ಮತ್ತು ಗ್ರಾಪಂ ಕಾರ್ಯಪಡೆ ಮೂಲಕಕೈಗೊಂಡಿದ್ದ ಕೊರೊನಾ ನಿಯಂತ್ರಣ ಕ್ರಮ ಫಲನೀಡಿದೆ. ಜೂ.13ರಂದು 1081 ಗ್ರಾಮ ಕೊರೊನಾಮುಕ್ತ ಎಂದು ಘೊಷಿಸಲಾಗಿದೆ. ಕೋಲಾರ ಜಿಲ್ಲೆಯಲ್ಲಿಸದ್ಯಕ್ಕೆ 2 ಸಾವಿರಕ್ಕಿಂತ ಹೆಚ್ಚು ಕೊರೊನಾ ಸಕ್ರಿಯಕೇಸುಗಳು ಇವೆ. ಈ ಪೈಕಿ 1924 ಕೇಸುಗಳುಗ್ರಾಮಾಂತರ ಪ್ರದೇಶದಲ್ಲಿಯೇ ಇರುವುದರಿಂದಇನ್ನು ಆಪಾಯದಿಂದ ಹೊರ ಬಂದಿಲ್ಲ.ಕೋಲಾರ ಜಿಲ್ಲೆಯ 156 ಗ್ರಾಪಂ ಪೈಕಿ 1081ಕೊರೊನಾ ಮುಕ್ತವಾಗಿದ್ದು, 1924 ಸೋಂಕಿತರಿದ್ದಾರೆ.ಈ ಪೈಕಿ 175 ಮಂದಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರೆ,351 ಮಂದಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿದ್ದಾರೆ.1249 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ.330 ಮಂದಿಗೂ ಅಧಿಕ ಸಾವನ್ನಪ್ಪಿದ್ದಾರೆ.
ಕೆ.ಎಸ್.ಗಣೇಶ್