Advertisement

ಸಾವಿನ ಸಂಖ್ಯೆ ಹೆಚ್ಚಳಕ್ಕೆ ಇಲ್ಲಿದೆ ಕಾರಣ

06:22 PM Jun 16, 2021 | Team Udayavani |

ಮೈಸೂರು: ಕೊರೊನಾ ಸೋಂಕು ದೃಢಪಟ್ಟು ಮನೆಯಲ್ಲಿಮೃತಪಟ್ಟವರೂ ಸೇರಿದಂತೆ ಹಲವು ಕೋವಿಡ್‌ ಸಾವುಗಳನ್ನುಪರಿಗಣನೆಗೆ ತೆಗೆದುಕೊಳ್ಳುತ್ತಿರುವ ಕಾರಣ ಕಳೆದ ಕೆಲ ದಿನಗಳಿಂದ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ಸೋಂಕು ದೃಢಪಟ್ಟು ಮನೆಯಲ್ಲಿ ಸಾವು ಸಂಭವಿಸಿದಸಂದರ್ಭದಲ್ಲಿ ಕಮ್ಯೂನಿಟಿ ಡೆತ್‌ ಆಡಿಟ್‌ನಲ್ಲಿ ವರದಿಮಾಡಿಕೊಳ್ಳಲಾಗುತ್ತಿದೆ. ಈ ಕಾರಣದಿಂದಾಗಿ ಮೈಸೂರುಜಿÇÉೆಯಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್‌-19 ಪ್ರಕರಣಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದರೂ, ಸಾವಿನಪ್ರಮಾಣ ಹೆಚ್ಚಾಗಿ ದಾಖಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೆಲವು ಆಸ್ಪತ್ರೆಗಳು ಕೋವಿಡ್‌ನಿಂದ ಮೃತರಾದವರಪಟ್ಟಿಯನ್ನು ಒಂದು ವಾರದ ನಂತರ ತಡವಾಗಿ ಒಂದೇಬಾರಿಗೆ ಜಿಲ್ಲಾ ಸರ್ವೇಕ್ಷಣಾ ಘಟಕಕ್ಕೆ ನೀಡುತ್ತಿರುವುದರಿಂದ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿ ಕಂಡುಬರುತ್ತಿದೆ. ಕೋವಿಡ್‌-19 ಮರಣದ ಮಾಹಿತಿಯನ್ನು ಟ್ರಯಾಜ್‌ತಂಡದಿಂದ 10 ದಿನಗಳ ನಂತರ ಕರೆ ಮಾಡಿದಾಗ ಲಭ್ಯವಾದ ಮಾಹಿತಿಯನ್ನು ಪಡೆದು ರಾಜ್ಯಕ್ಕೆ ಕಳುಹಿಸಲಾಗಿದೆ. ಜೊತೆಗೆ ಸಿಟಿಸ್ಕ್ಯಾನ್‌ ಮೂಲಕ ಕೋವಿಡ್‌-19 ದೃಢೀಕೃತ ಮರಣದ ವರದಿಯನ್ನು ಕೂಡ ಸಾಸ್ಟ್ ಮೂಲಕ ಸಲ್ಲಿಸಲಾಗುತ್ತಿದೆ. ಈ ಕಾರಣದಿಂದ  ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಾಣುತ್ತಿದೆ ಎಂದುಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next