Advertisement
ನಗರದ ಡಾ.ರಾಜ್‌ಕುಮಾರ್ ಕಲಾ ಮಂದಿರದಲ್ಲಿಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ವತಿಯಿಂದ “ನೀವುಅನಾಥರಲ್ಲ’ ಮಕ್ಕಳ ದತ್ತು ಸ್ವೀಕಾರ ಕಾರ್ಯಕ್ರಮದಲ್ಲಿಸಾಂಕೇತಿಕವಾಗಿ ಮಕ್ಕಳನ್ನು ದತ್ತು ಸ್ವೀಕಾರ ಪ್ರಮಾಣಪತ್ರ ವಿತರಿಸಿ ಮಾತನಾಡಿ, ಕೊರೊನಾ ಪರಿಸ್ಥಿತಿನಿರ್ವಹಣೆಯಲ್ಲಿ ಸರ್ಕಾರ ಶಕ್ತಿ ಮೀರಿ ಕೆಲಸಮಾಡುತ್ತಿದೆ. ಕೊರೊನಾದಿಂದ ಸಾವಿಗೀಡಾದ ಬಡಕುಟುಂಬಗಳಿಗೆ 1 ಲಕ್ಷ ರೂ. ನೀಡಲಾಗುತ್ತಿದೆ. ಕೇಂದ್ರಸರ್ಕಾರದ ಸಹಯೋಗದಲ್ಲಿ ಡಿಸೆಂಬರ್ ಒಳಗಾಗಿಎಲ್ಲರಿಗೂ ಲಸಿಕೆ ನೀಡಲಾಗುವುದು.
Related Articles
Advertisement
ರಾಜ್ಯದಲ್ಲಿನಿರಂತರವಾಗಿ 47ನೇ ದಿನ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳಲಾಗಿದ್ದು, ಕೋವಿಡ್‌ನಿಂದ ತಂದೆ ಅಥವಾತಾಯಿಯನ್ನು ಕಳೆದುಕೊಂಡ ಮಕ್ಕಳನ್ನು ದತ್ತು ಪಡೆದು, ಅವರ ಶಿಕ್ಷಣ, ಆಹಾರ, ಕೆಲಸ ಹಾಗೂ ಹೆಣ್ಣುಮಕ್ಕಳ ಮದುವೆಯನ್ನು ಟ್ರಸ್ಟ್ ವತಿಯಿಂದ ಮಾಡಲಾಗುತ್ತದೆ. ಗಂಡು ಮಕ್ಕಳಿಗೆ ಉದ್ಯೋಗ ಕಲ್ಪಿಸುವವರೆಗೆದತ್ತು ಪಡೆಯಲಾಗುವುದು. ಈಗಾಗಲೇ ರಾಜ್ಯಾದ್ಯಂತಜಿಲ್ಲಾ ಕೇಂದ್ರದಲ್ಲಿ ಟ್ರಸ್ಟ್ ವತಿಯಿಂದ ಅನ್ನಅಭಿಯಾನವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಕೊರೊನಾದಿಂದ ಮೃತಪಟ್ಟಿದ್ದ 5ಪೋಷಕರ 7 ಮಕ್ಕಳನ್ನು ಸಾಂಕೇತಿಕವಾಗಿ ದತ್ತು ಪಡೆಯಲಾಯಿತು. ಆಶಾ ಕಾರ್ಯಕರ್ತೆಯರಿಗೆ ಆಕ್ಸಿಮೀಟರ್,ಮಾಸ್ಕ್, ಪೇಸ್ ಶೀಲ್ಡ್ ವಿತರಿಸಿದರು.
ಜಿÇÉಾಡಳಿತಕ್ಕೆಆಮ್ಲಜನಕ ಸಾಂದ್ರಕಗಳನ್ನು ಹಸ್ತಾಂತರಿಸಲಾಯಿತು.ಶಾಸಕ ಟಿ.ವೆಂಕಟರಮಣಯ್ಯ, ಉತ್ತರಹಳ್ಳಿಶಾಸಕ ಎಂ.ಕೃಷ್ಣಪ್ಪ, ಕರ್ನಾಟಕ ಕರಕುಶಲ ಅಭಿವೃದ್ಧಿನಿಗಮ ಹಾಗೂ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್‌ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ,ಕಾರ್ಯದರ್ಶಿ ಎ.ಸಿ.ಶಿವರಾಜು, ಜಿಲ್ಲಾಧಿಕಾರಿಕೆ.ಶ್ರೀನಿವಾಸ್, ಎಂ.ಸಿ.ಎ ಅಧ್ಯಕ್ಷ ಮುನಿಕೃಷ್ಣ,ಮುಖಂಡರಾದ ಬಿ.ಸಿ.ನಾರಾಯಣಸ್ವಾಮಿ,ಧೀರಜ್ ಮುನಿರಾಜು ಮತ್ತು ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.