Advertisement
ರಾತ್ರಿ ವೇಳೆ ಕರ್ಫ್ಯೂಹೇರುವ, ನಿಯಮ ಉಲ್ಲಂಘ ನೆಗೆ ದಂಡ ವಿಧಿಸುವ ಅಥವಾ ಇತರ ಕ್ರಮ ಕೈಗೊಳ್ಳುವ ಅವಕಾಶವನ್ನು ರಾಜ್ಯಗಳಿಗೆ ನೀಡಲಾಗಿದೆ. ಡಿ. 1ರಿಂದ 31ರ ವರೆಗೆ ಹೊಸ ಮಾರ್ಗಸೂಚಿ ಜಾರಿಯಲ್ಲಿರುವು ದಾಗಿಯೂ ಹೇಳಿದೆ. ಅಂತಾರಾಜ್ಯ ಹಾಗೂ ರಾಜ್ಯದೊಳಗಿನ ಸಂಚಾರಕ್ಕೆ ನಿರ್ಬಂಧವಿರುವುದಿಲ್ಲ ಎಂದೂ ಹೇಳಿದೆ.
ಜನರು ನಿಯಮ ಪಾಲಿಸುವಂತೆ ಆಯಾ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ನೋಡಿಕೊಳ್ಳಬೇಕು. ದಂಡ ಅಥವಾ ಇತರ ಕ್ರಮಗಳ ಕುರಿತು ಆಯಾ ಸರಕಾರಗಳೇ ತೀರ್ಮಾನ ಕೈಗೊಳ್ಳಬಹುದು. ಕೇಂದ್ರ ಸರಕಾರದ ಪೂರ್ವಾನುಮತಿ ಇಲ್ಲದೇ, ಕಂಟೈನ್‌ಮೆಂಟ್ ವಲಯ ಹೊರತುಪಡಿಸಿ ಇತರೆಡೆ ಲಾಕ್‌ಡೌನ್ ಹೇರಲು ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ಇದೇ ವೇಳೆ, ವಾರದ ಪಾಸಿಟಿವಿಟಿ ದರ ಶೇ. 10ಕ್ಕಿಂತ ಹೆಚ್ಚಿದ್ದರೆ ಅಂಥ ನಗರಗಳಲ್ಲಿ ಕಚೇರಿ ಸಮಯದಲ್ಲಿ ಬದಲಾವಣೆ ಮಾಡಬಹುದು.