Advertisement

ಕೋವಿಡ್‌ ನೆಗೆಟಿವ್‌ ವರದಿ ಇಲ್ಲದಿದ್ದರೆ ಸ್ಥಳದಲ್ಲೇ ಪರೀಕ್ಷೆ :ದ.ಕ. ಡಿಎಚ್‌ಒ

01:18 AM Nov 30, 2021 | Team Udayavani |

ಮಂಗಳೂರು: ಕೊರೊನಾ 3ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ನಿರ್ದೇಶನದ ಮೇರೆಗೆ ಸೋಮವಾರದಿಂದ ತಲಪಾಡಿ, ಸಾರಡ್ಕ ಸೇರಿದಂತೆ 17 ಗಡಿಗಳಲ್ಲಿ ಕೊರೊನಾ ಪರೀಕ್ಷೆಯನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಕಿಶೋರ್‌ ಕುಮಾರ್‌ ತಿಳಿಸಿದ್ದಾರೆ.

Advertisement

ದ.ಕ. ಜಿಲ್ಲೆಯ ಗಡಿಯಲ್ಲಿ ಈ ಹಿಂದೆಯೂ ಕೊರೊನಾ ಪರೀಕ್ಷೆ ವ್ಯವಸ್ಥೆ ಇತ್ತು. ಕೊರೊನಾ 2ನೇ ಅಲೆಯ ಅನ್‌ಲಾಕ್‌ ಬಳಿಕ ಕೇವಲ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಆಧಾರದಲ್ಲಿ ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಇದೀಗ ಪರೀಕ್ಷೆಯನ್ನು ಪುನಃ ಆರಂಭಿಸಲಾಗಿದ್ದು, ನೆಗೆಟಿವ್‌ ವರದಿ ಇಲ್ಲದವರನ್ನು ಸ್ಥಳದಲ್ಲೇಪರೀಕ್ಷೆ ಮಾಡಿ ಮೂಗು ಮತ್ತು ಗಂಟಲದ್ರವದ ಮಾದರಿ ಪಡೆದು ಪ್ರಯಾಣ ಮುಂದುವರಿಸಲು ಅವಕಾಶ ನೀಡಲಾಗು ವುದು ಎಂದವರು ಸೋಮವಾರ ನಗರ ದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನ. 12ರ ಬಳಿಕ ಜಿಲ್ಲೆಯ ವಿವಿಧ ಮೆಡಿಕಲ್‌, ಪ್ಯಾರಾ ಮೆಡಿಕಲ್‌ ಸೇರಿದಂತೆ ಕಾಲೇಜು ಹಾಸ್ಟೆಲ್‌ಗ‌ಳಿಗೆ ಆಗಮಿಸಿರುವ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸುವಂತೆ ಕಾಲೇಜುಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಪ್ರತಿನಿತ್ಯ ಕೇರಳದಿಂದ ಜಿಲ್ಲೆಗೆ ಸಂಚರಿಸುವವರೂ 14 ದಿನಗಳಿಗೊಮ್ಮೆ ಕೊರೊನಾ ತಪಾಸಣೆ ನಡೆಸ ಬೇಕು. ವಿಮಾನ ನಿಲ್ದಾಣದಲ್ಲಿಯೂ ಬೇರೆ ರಾಷ್ಟ್ರಗಳಿಂದ ಬರುವರಿಗೆ ನಿಯಮಾನುಸಾರ ತಪಾಸಣೆ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಒಮಿಕ್ರಾನ್‌ ಬಗ್ಗೆ ಗಾಬರಿ
ಬೇಡ, ಕಾಳಜಿ ಇರಲಿ
ಕೊರೊನಾ ರೂಪಾಂತರಿತ ತಳಿ ಒಮಿಕ್ರಾನ್‌ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಹಾಂಕಾಂಗ್‌, ನೆದರ್‌ಲ್ಯಾಂಡ್‌ ಮತ್ತಿತರ ವಿದೇಶಗಳಿಂದ ಬರುವವರ ಮೇಲೆ ನಿಗಾ ವಹಿಸಲಾಗುತ್ತಿದೆ. ಇದು ಕೊರೊನಾದ ರೂಪಾಂತರಿತ ತಳಿಯಾದ ಡೆಲ್ಟಾಕ್ಕಿಂತಲೂ ವಿಭಿನ್ನ ಎಂದು ಹೇಳಲಾಗುತ್ತಿದ್ದು, ಕೆಲವು ದಿನಗಳ ಹಿಂದಷ್ಟೇ ಪತ್ತೆಯಾಗಿದೆ; ಇದರಿಂದ ಆಗುವ ತೊಂದರೆಗಳ ಬಗ್ಗೆ ಇನ್ನಷ್ಟೇ ದಾಖಲೆ, ದೃಢತೆ ಸಿಗಬೇಕಿದೆ. ಹಾಗಿದ್ದರೂ ಇದು ಸೌಮ್ಯ ವೈರಸ್‌ ಆಗಿದ್ದು, ಹರಡುವಿಕೆಯ ಪ್ರಮಾಣ ಮಾತ್ರ ಹೆಚ್ಚಿನ ಮಟ್ಟದ್ದು ಎಂದು ಮಾತ್ರವೇ ಹೇಳಲಾಗುತ್ತಿದೆ. ಹಾಗಾಗಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪಾಲಿಸುವುದನ್ನು ಬಿಟ್ಟು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಬದಲಾಗಿ ಕಾಳಜಿ ವಹಿಸಿಕೊಂಡರಷ್ಟೇ ಸಾಕು ಎಂದು ತಿಳಿಸಿದರು.

ಮೊದಲ ದಿನ 220
ಮಂದಿಗೆ ಪರೀಕ್ಷೆ
ಮೊದಲ ದಿನವಾದ ಸೋಮವಾರ ತಲಪಾಡಿ ಗಡಿಭಾಗದಲ್ಲಿ 220 ಮಂದಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಲಾಗಿದೆ. ಫ‌ಲಿತಾಂಶ ಇನ್ನಷ್ಟೇ ಬರಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next