Advertisement

ಕೋವಿಡ್ ಲಾಕ್‌ಡೌನ್‌: ಸಂಕಷ್ಟದಲ್ಲಿ ಚೆಂಡು ಹೂ ಬೆಳೆಗಾರರು

12:55 PM May 08, 2021 | Team Udayavani |

ಡಹಾಣು: ಕೊರೊನಾ ಮಹಾಮಾರಿ ಹರಡುತ್ತಿರುವ ಹಿನ್ನೆಲೆ ಯಲ್ಲಿ ಸರಕಾರ ರಾಜ್ಯವ್ಯಾಪಿ ವಿಧಿಸಿರುವ ಲಾಕ್‌ಡೌನ್‌ನಿಂದ ಮಾರಿಗೋಲ್ಡ…(ಚೆಂಡು) ಹೂವಿಗೆ ಬೇಡಿಕೆ ಇಲ್ಲದ ಕಾರಣ ಬೆಳೆಗಾರರು ಆರ್ಥಿಕ ಬಿಕ್ಕಟ್ಟನ್ನು ಎದುರಿಸುವಂತಾಗಿದೆ.

Advertisement

ಚೆಂಡು ಹೂವಿಗೆ ಹಬ್ಬ ಮತ್ತು ಮದುವೆ ಸಂದರ್ಭ ವಿಶೇಷ ಬೇಡಿಕೆ. ಈ ವರ್ಷ ಯುಗಾದಿ ಹಬ್ಬ, ಮದುವೆ, ಸಮಾರಂಭ, ಜಾತ್ರೆಗಳಿಗೆ ಕಟ್ಟುನಿಟ್ಟಿನ ನಿರ್ಬಂಧದಿಂದಾಗಿ ಮಾರುಕಟ್ಟೆಗಳಲ್ಲಿ ಚೆಂಡು ಹೂವಿಗೆ ಬೇಡಿಕೆಯಿಲ್ಲದೆ 400ಕ್ಕೂ ಹೆಚ್ಚು ಬೆಳಗಾರರು ಸಂಕಷ್ಟದಲ್ಲಿದ್ದಾರೆ.

ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಆದಾಯ ಗಳಿಸುವ ಉದ್ದೇಶದಿಂದ ಡಹಾಣು, ವಾಡಾ, ಪಾಲ^ರ್‌ ಮತ್ತು ವಿಕ್ರಮಗಡ್‌ ರೈತರು ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿದ್ದರೂ ಮಾರುಕಟ್ಟೆಗಳಲ್ಲಿ ಬೇಡಿಕೆ ಇಲ್ಲದ ಕಾರಣ ಚೆಂಡು ಹೂ ಗಳನ್ನು ಎಸೆಯುವ ಸ್ಥಿತಿ ನಿರ್ಮಾಣವಾಗಿದೆ ಎನ್ನುವುದು ರೈತರ ಅಳಲು. ಡಹಾಣು ತಾಲೂಕಿನ ಬೋರ್ಡಿ, ವಂಗಾಂವ್‌, ಚಿಂಚನಿ, ಒಸರ್‌, ವಾಧ್ವಾನ್‌, ವೇರರ್‌, ಅಸಂಗಾಂವ್‌, ದೆದಾàಲೆ, ಚಂದ್ರನಗರ, ನಿಕೆ°, ರಾನೆÏತ್‌, ಪಾಲ^ರ್‌, ವಿಕ್ರಮಗಡ್‌, ತಲಸಾರಿ ತಾಲೂಕುಗಳಲ್ಲಿ ಸುಮಾರು 300 ಹೆಕ್ಟೇರ್‌ ಪ್ರದೇಶದಲ್ಲಿ ಚೆಂಡು ಹೂವಿನ ತೋಟಗಳಿವೆ. ದೊಡ್ಡ ಬೆಳೆಗಾರರಿಗೆ 10ರಿಂದ 12 ಲಕ್ಷ ರೂ.ವರೆಗೆ ನಷ್ಟವನ್ನುಂಟಾಗಿದೆ ಎಂದು ರೈತರು ಅಂದಾಜಿಸಿದ್ದಾರೆ.

ಹಬ್ಬದ ಸಮಯದಲ್ಲಿ ಉತ್ತಮ ಇಳುವರಿ ಪಡೆಯಲು ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ ತೋಟಗಾರರು ಸಾಂಪ್ರದಾಯಿಕ ಕೃಷಿಯಿಂದ ವಾಣಿಜ್ಯ ಕೃಷಿಯನ್ನು ಅವಲಂಬಿಸುತ್ತಾರೆ. ಹೂವಿನ ಮಾರಾಟದಿಂದ ಉತ್ತಮ ಆದಾಯ ಗಳಿಸುವ ಭರವಸೆಯಲ್ಲಿ ಕೃಷಿ ಕಾರ್ಮಿಕರು ಸಹಿತ ಇಡೀ ಕುಟುಂಬದೊಂದಿಗೆ ದೈನಂದಿನ ತೋಟಗಾರಿಕೆಯಲ್ಲಿ ತೊಡಗುತ್ತಾರೆ. ಆದರೆ ಈ ವರ್ಷ ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆ ಸ್ಥಗಿತಗೊಂಡಿದ್ದು, ರೈತರು ತಮ್ಮ ಜೀವನೋಪಾಯವನ್ನು ಕಳೆದುಕೊಂಡಿ¨ªಾರೆ.

ಕೋಲ್ಕತ್ತಾ ಕೆಂಪು (ಅಷ್ಟಗಂಧ), ಹಳದಿ ಚೆಂಡು ಹೂವುಗಳಿಗೆ ಮಾರು ಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಕೋಲ್ಕತ್ತಾ ಕೆಂಪು ಹೆಚ್ಚಿನ ಬೆಲೆಯನ್ನು ಪಡೆದರೆ ಹಳದಿ ದೊಡ್ಡ ಗಾತ್ರದ ಹೂವುಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ಗುಡಿಪಾಡ್ವಾ, ಯಾತ್ರೆ, ಉತ್ಸವ ಮತ್ತು ಮದುವೆ ಸಮಾರಂಭದ ಅಲಂಕಾರಕ್ಕಾಗಿ ಬೋರ್ಡಿ, ವಂಗಾಂ ವ್‌, ಕೆಲ್ವೆ, ಪಾಲ^ರ್‌, ಸಫಲೆ, ವಾಡಾ ಮತ್ತು ವಿಕ್ರಮಗಡ್‌ಗಳಲ್ಲಿ ಚೆಂಡು ಹೂವುಗಳಿಗೆ ಹೆಚ್ಚಿನ ಬೇಡಿಕೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next