ರಾಯಚೂರು: ಜನತಾ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ ಎನ್ನುತ್ತಿರುವಪೊಲೀಸರು ಚಾಪೆ ಕಳೆಗೆ ನುಸುಳಿದವರಂತೆಆಡಿದರೆ; ಗಪ್‌ಚುಪ್ ವ್ಯಾಪಾರ ನಡೆಸುವಮೂಲಕ ವರ್ತಕರು ರಂಗೋಲಿ ಕೆಳಗೇನುಸುಳುತ್ತಿದ್ದಾರೆ.
ಬೆಳಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯವಸ್ತುಗಳ ಖರೀದಿ ನೀಡಿದ ವಿನಾಯಿತಿವೇಳೆ ಅನಗತ್ಯ ವಸ್ತುಗಳ ವ್ಯಾಪಾರವೂಜೋರಾಗಿಯೇ ನಡೆಯುತ್ತಿದೆ.ಮಾರುಕಟ್ಟೆಯಲ್ಲಂತೂ ಬೆಳಗ್ಗೆ 10ಗಂಟೆವರೆಗೂ ಜನಜಂಗುಳಿಯೇಏರ್ಪಡುತ್ತಿದೆ.
ಪೊಲೀಸರು ಬಂದು ಎಚ್ಚರಿಕೆನೀಡುವವರೆಗೂ ಜನ ಮಾತ್ರ ಸ್ವಯಂಪ್ರೇರಿತರಾಗಿ ಕಾಲ್ಕಿತ್ತುತ್ತಿಲ್ಲ.10ಗಂಟೆ ನಂತರ ವೈದ್ಯಕೀಯ ಸೇವೆ,ತುರ್ತು ಕೆಲಸಗಳು ಹೊರತಾಗಿಸಿ ಇತರೆಯಾವುದೇ ವಹಿವಾಟು ನಡೆಸಬಾರದು ಎಂದಿದ್ದರೂ, ವರ್ತಕರು ಮಾತ್ರ ಒಳಗೊಳಗೆವ್ಯಾಪಾರ ಜೋರಾಗಿಯೇ ನಡೆಸುತ್ತಿದ್ದಾರೆ.
ಅರ್ಧಬಂರ್ಧ ಶೆಟರ್ ಎತ್ತಿಕೊಂಡು ಒಳಗೆವ್ಯಾಪಾರ ನಡೆಸುತ್ತಿದ್ದಾರೆ. ಪೊಲೀಸರ ವಾಹನಬಂದಾಗ ಶೆಟರ್ ಎಳೆಯುವುದು ಅವರುಹೋಗುತ್ತಿದ್ದಂತೆ ಶೆಟರ್ ಎತ್ತಿಕೊಳ್ಳುವುದುನಡದೇ ಇದೆ. ಆಟೊನಗರದಲ್ಲಿ ಒಳಗೊಳಗೆಕೆಲಸ ಕಾರ್ಯಗಳು ನಡೆದರೆ, ಬಟ್ಟೆ ಬಜಾರ್,ಪಟೇಲ್ ರಸ್ತೆ, ಮಹಾವೀರ್ ಸರ್ಕಲ್‌ನಲ್ಲಿಕೆಲವೊಂದು ಎಲೆಕ್ಟ್ರಾನಿಕ್ ಅಂಗಡಿಗಳುಒಳಗೊಳಗೆ ವ್ಯಾಪಾರ ನಡೆಸಿದವು.
ಪೊಲೀಸರು ಕೂಡ ಕೆಲವೊಂದು ಪ್ರಮುಖರಸ್ತೆಗಳಲ್ಲಿ ವಾಹನಗಳ ತಪಾಸಣೆ ನಡೆಸುವುದುಬಿಟ್ಟರೆ ನಗರದ ಒಳಗೆ ಕೇಳುವವರೇ ಇಲ್ಲಎನ್ನುವಂತಾಗಿದೆ. ದಿನಕ್ಕೊಂದೆರಡು ಬಾರಿಆಯಾ ಠಾಣೆಗಳ ವ್ಯಾಪ್ತಿಯ ಪೊಲೀಸರುಪೆಟ್ರೋಲಿಂಗ್ ನಡೆಸುವುದು ಬಿಟ್ಟರೆ ಹೆಚ್ಚಿನಕ್ರಮಗಳೇನು ಕೈಗೊಳ್ಳುತ್ತಿಲ್ಲ