Advertisement

ವಾರದೊಳಗೆ ಕೋವಿಡ್‌ ಪ್ರಯೋಗಾಲಯ

03:45 PM Apr 30, 2020 | mahesh |

ಮಂಡ್ಯ: ಮುಂದಿನ ಒಂದು ವಾರದೊಳಗೆ ನಗರದ ಮಿಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕು ಪರೀಕ್ಷೆ ಮಾಡುವ ಪ್ರಯೋಗಾಲಯ ಸ್ಥಾಪಿಸಲಾಗುವುದು ಎಂದು ವೈದ್ಯಕೀಯ
ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಭರವಸೆ ನೀಡಿದರು. ಮಂಡ್ಯದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಕೋವಿಡ್‌ ನಿಯಂತ್ರಣ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಕೋವಿಡ್ ಕಾಣಿಸಿಕೊಂಡ ಸಮಯದಲ್ಲಿ ಕರ್ನಾಟಕದಲ್ಲಿ ಕೇವಲ 2  ಯೋಗಾಲಯಗಳಿದ್ದವು. ಒಂದು ತಿಂಗಳಲ್ಲಿ 26 ಪ್ರಯೋಗಾಲಯ ಸ್ಥಾಪಿಸಲಾಗಿದೆ. ಇವೆಲ್ಲವೂ ಐಸಿಎಂಆರ್‌ ಹಾಗೂ ಎನ್‌ಎಬಿಎಲ್‌ ಅಂಗೀಕೃತ ಪ್ರಯೋಗಾಲಯಗಳಾಗಿವೆ. ಸರ್ಕಾರದ 15 ಹಾಗೂ 50 ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮುಂದಿನ 15 ದಿನಗಳೊಳಗೆ ಪ್ರಯೋಗಾಲಯಗಳು ಸಿದ್ಧಗೊಳ್ಳಲಿವೆ ಎಂದು ಹೇಳಿದರು.

Advertisement

ರಾಜ್ಯ 3ನೇ ಸ್ಥಾನ: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇದ್ದರೂ ತಪಾಸಣೆಗೆ ಒಳಗಾದವರ ಪ್ರಮಾಣ ಹೆಚ್ಚಿದೆ. ತಪಾಸಣೆಗೊಳಗಾದವರ ಸರಾಸರಿಯಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. ಪರೀಕ್ಷೆಗೊಳಪಡಿಸಲಾದ 103 ಜನರಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದುವರೆಗೆ ರಾಜ್ಯದಲ್ಲಿ 55,117 ಪರೀಕ್ಷೆ ನಡೆಸಲಾಗಿದೆ. ಪ್ರತಿದಿನ 5 ಸಾವಿರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನಗರದ ವ್ಯಾಪ್ತಿಯೊಳಗೆ ಜನಸಂದಣಿ ಇಲ್ಲದ ಪ್ರದೇಶಗಳಲ್ಲಿ ಕೋವಿಡ್‌ ಸ್ವಾಬ್‌ ಪರೀಕ್ಷೆ ನಡೆಸಬೇಕು. ಒಂದು ಅಥವಾ ಎರಡು ಸಂಚಾರ ಸ್ವಾಬ್‌ ಪರೀಕ್ಷಾ ವಾಹನಗಳನ್ನು ಸಿದಟಛಿಗೊಳಿಸುವಂತೆ ಸೂಚಿಸಿದ ಅವರು, ಇದಕ್ಕೆ ಲಭ್ಯವಿರುವ ಅನುದಾನವನ್ನು ಬಳಸಬೇಕು. ಥರ್ಮಾ ಸ್ಕ್ಯಾನರ್‌ ಸೇರಿದಂತೆ ಕೋವಿಡ್‌ಗೆ ಸಂಬಂಧಿಸಿದ ಸಲಕರಣೆಗಳನ್ನು ಖರೀದಿಸುವ ಸಮಯದಲ್ಲಿ ಡಿಎಂಎ ಗಮನಕ್ಕೆ ತರುವುದು ಕಡ್ಡಾಯ ಎಂದರು. ರಾಜ್ಯದಲ್ಲಿ ಕೋವಿಡ್‌ ಪರೀಕ್ಷೆ ನಡೆಸುತ್ತಿರುವ ವೈದ್ಯರು, ಸ್ಟಾಫ್ನರ್ಸ್‌ಗಳು, ಆ್ಯಂಬುಲೆನ್ಸ್‌, ಫಿವರ್‌ ಕ್ಲಿನಿಕ್‌ಗಳಲ್ಲಿ
ಕೆಲಸ ಮಾಡುವವರ ಸುರಕ್ಷತೆಗಾಗಿ 3 ಲಕ್ಷ ಪಿಪಿ ಕಿಟ್‌ಗಳಿಗೆ ಬೇಡಿಕೆ ಇಡಲಾಗಿದ್ದು, 65 ಸಾವಿರ ಕಿಟ್‌ ತಲುಪಿವೆ ಎಂದರು.

ಸಚಿವ ಕೆ.ಸಿ.ನಾರಾಯಣಗೌಡ, ಸಂಸದೆ ಸುಮಲತಾ, ಜಿಪಂ ಅಧ್ಯಕ್ಷೆ ನಾಗರತ್ನ, ಜಿಲ್ಲಾಧಿಕಾರಿ ಡಾ.ವೆಂಕಟೇಶ್‌, ಜಿಪಂಸಿಇಒ ಯಾಲಕ್ಕೀಗೌಡ, ಎಸ್ಪಿ ಪರಶುರಾಮ, ಶಾಸಕರಾದ ಪುಟ್ಟರಾಜು, ಶ್ರೀನಿವಾಸ್‌, ಸುರೇಶ್‌ಗೌಡ, ಡಾ.ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ವಿಧಾನಪರಿಷತ್‌ ಸದಸ್ಯರಾದ ಅಪ್ಪಾ ಜಿಗೌಡ, ಶ್ರೀಕಂಠೇಗೌಡ ಇತರರಿದ್ದರು.

60 ವರ್ಷ ವಯಸ್ಸಿನವರು ಹೊರಗೆ ಬರಲೇಬೇಡಿ
ಲಾಕ್‌ಡೌನ್‌ ಸಡಿಲಿಕೆಯಾದ ನಂತರವೂ 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮನೆಯಿಂದ ಹೊರಗೆ ಬರಬಾರದು. ರಕ್ತದೊತ್ತಡ, ಮಧುಮೇಹ, ಹೃದ್ರೋಗ, ಅಸ್ತಮಾ, ಶ್ವಾಸಕೋಶ ತೊಂದರೆಯಿಂದ ಬಳಲುತ್ತಿರುವವರು ಹೊರಗೆ ಬರುವುದು ಸೂಕ್ತವಲ್ಲ. ಇದಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ಆಶಾ ಕಾರ್ಯ ಕರ್ತೆಯರು, ಬಿಎಲ್‌ಒ, ಪಿಡಿಒ, ಗ್ರಾಪಂ ಕಾರ್ಯ ದರ್ಶಿ, ವಿಎ ನೇತೃತ್ವದಲ್ಲಿ ತಂಡವನ್ನು ರಚಿಸಿ ಮನೆ ಮನೆಗೆ ತೆರಳಿ ಸ್ಕ್ರೀನಿಂಗ್‌ ಮಾಡುವಂತೆ ಆರೋಗ್ಯ ಇಲಾಖೆಯವರಿಗೆ ಎಂದು ಸಚಿವ ಸುಧಾಕರ್‌ ಸೂಚನೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next