ಬೀದರ್: ಜನರಲ್ಲಿ ತಲ್ಲಣ ಮೂಡಿಸುತ್ತಿರುವ ರಕ್ಕಸ ಕೋವಿಡ್ ಸೋಂಕು ಜಿಲ್ಲೆಯಲ್ಲಿ ಒಂದೇ ದಿನ ಮೂರು ಜನರನ್ನು ಬಲಿ ಪಡೆದಿದ್ದು, ಮೃತರ ಸಂಖ್ಯೆ 19ಕ್ಕೆ ಏರಿಕೆ ಆಗಿದೆ. 18 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದರೆ ಇನ್ನೊಂದೆಡೆ 60 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದು ಸಮಾಧಾನಕರ ಬೆಳವಣಿಗೆ ಆಗಿದೆ.
ಬೀದರ್ ನಗರ, ಬಸವಕಲ್ಯಾಣ ತಾಲೂಕಿನ ತ್ರಿಪುರಾಂತ ಮತ್ತು ಭಾಲ್ಕಿ ತಾಲೂಕಿನ ಹುಪಳಾ ಗ್ರಾಮದ ಸೋಂಕಿತರು ಸಾವನ್ನಪ್ಪಿದ್ದಾರೆ. ಕೋವಿಡ್-19 ಸೋಂಕಿನ ಲಕ್ಷಣಗಳೇ ಹೊಂದಿರದ 70 ವರ್ಷದ ಬೀದರನ ದುಲ್ಹನ್ ದರ್ವಾಜಾ ರಸ್ತೆಯ ನಿವಾಸಿ ಜೂ.23ರಂದು ಮೃತಪಟ್ಟಿದ್ದಾರೆ.
ನಮಾಜ್ ಬಳಿಕ ಏಕಾಏಕಿ ಮನೆಯಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದರು. ಜ್ವರ, ಉಸಿರಾಟದ ತೊಂದರೆ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ತ್ರಿಪುರಾಂತದ 73 ವರ್ಷದ ಮಹಿಳೆ ಮತ್ತು 65 ವರ್ಷದ ಹುಪಳಾ ಗ್ರಾಮದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದು, ಮೂವರ ಗಂಟಲು ದ್ರವ ಮಾದರಿ ಪರೀಕ್ಷೆ ವರದಿಯಲ್ಲಿ ಪಾಸಿಟಿವ್ ಬಂದಿದೆ.
ಇನ್ನು ಶನಿವಾರ ಪತ್ತೆಯಾಗಿರುವ ಹೊಸ ಸೋಂಕಿತರಲ್ಲಿ ಚಿಟಗುಪ್ಪ ಪಟ್ಟಣದವರೇ ಏಳು ಜನ ಸೇರಿದ್ದಾರೆ. ಇದಲ್ಲದೇ ಬೀದರ ನಗರದ 2, ನೌಬಾದ್‌ನ, ಜನವಾಡಾ ಮತ್ತು ಬೆಳ್ಳೂರಿನ ತಲಾ 1 ಸೇರಿ ಒಟ್ಟು 5 ಕೇಸ್, ಹುಮನಾಬಾದ ತಾಲೂಕಿನ ಘಾಟಬೋರಾಳ, ಚಂದನಹಳ್ಳಿ ಗ್ರಾಮದ ತಲಾ 1 ಸೇರಿ ಒಟ್ಟು 2 ಕೇಸ್ ಹಾಗೂ ಬಸವಕಲ್ಯಾಣ ಪಟ್ಟಣದಲ್ಲಿ 1 ಕೇಸ್ ಪತ್ತೆಯಾಗಿವೆ.
28 ವರ್ಷದ ಮಹಿಳೆ (ಪಿ-11421), 45 ವರ್ಷದ ಮಹಿಳೆ (ಪಿ-11422), 70 ವರ್ಷದ ಪುರುಷ (ಪಿ-11423), 45 ವರ್ಷದ ಮಹಿಳೆ (ಪಿ-11424), 31 ವರ್ಷದ ಪುರುಷ (ಪಿ-11425), 26 ವರ್ಷದ ಮಹಿಳೆ (ಪಿ-11426), 20 ವರ್ಷದ ಮಹಿಳೆ (ಪಿ-11427), 22 ವರ್ಷದ ಪುರುಷ (ಪಿ-11428), 20 ವರ್ಷದ ಮಹಿಳೆ (ಪಿ-11429), 30 ವರ್ಷದ ಪುರುಷ (ಪಿ-11430), 24 ವರ್ಷದ ಮಹಿಳೆ (ಪಿ-11431), 36 ವರ್ಷದ ಮಹಿಳೆ (ಪಿ-11432), 34 ವರ್ಷದ ಪುರುಷ (ಪಿ-14433), 26 ವರ್ಷದ ಪುರುಷ (ಪಿ-11435), 7 ವರ್ಷದ ಬಾಲಕಿ (ಪಿ-11435), 25 ವರ್ಷದ ಮಹಿಳೆ (ಪಿ-11436), 65 ವರ್ಷದ ಪುರುಷ (11437) ಮತ್ತು 73 ವರ್ಷದ ಮಹಿಳೆ (ಪಿ-11438) ರೋಗಿಗಳಿಗೆ ಸೋಂಕು ವಕ್ಕರಿಸಿದೆ.
ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ 555ಕ್ಕೆ ಏರಿಕೆ ಆದಂತಾಗಿದೆ. 19 ಜನ ಸಾವನ್ನಪ್ಪಿದ್ದರೆ, ಶನಿವಾರ 60 ಜನ ಸೇರಿ ಒಟ್ಟು 456 ಮಂದಿ ಡಿಸಾcರ್ಜ್ ಆಗಿದ್ದು, ಇನ್ನೂ 80 ಸಕ್ರೀಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.