Advertisement
ಇನ್ನೊಂದೆಡೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿ ಕೊಂಡಿರುವ ಕೇಂದ್ರ ಸರಕಾರ ಇನ್ನಷ್ಟು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ತಂಡವನ್ನು ಕಳುಹಿಸಲು ಚಿಂತನೆ ನಡೆಸಿದೆ. ಗುರುವಾರವಷ್ಟೇ ಹರಿಯಾಣ, ರಾಜಸ್ಥಾನ, ಗುಜರಾತ್ ಮತ್ತು ಮಣಿಪುರಕ್ಕೆ ಕೇಂದ್ರ ತಂಡ ತೆರಳಿ, ಸೋಂಕಿನ ವ್ಯಾಪಿಸುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಆರಂಭಿಸಿದೆ.
ನ. 23ರಿಂದ ಶಾಲೆಗಳು ಪುನಾರಂಭವಾಗಲಿವೆ ಎಂದು ಬೃಹನ್ಮುಂಬಯಿ ಮಹಾನಗರಪಾಲಿಕೆ ಘೋಷಿಸಿತ್ತು. ಆದರೆ ಮಹಾರಾಷ್ಟ್ರದಲ್ಲಿ ಸೋಂಕಿನ ಎರಡನೇ ಅಲೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಾಲೆ ತೆರೆಯುವ ನಿರ್ಧಾರ ವಾಪಸ್ ಪಡೆಯಲಾಗಿದೆ. ಪರೀಕ್ಷೆ ಹೆಚ್ಚಳ
ಮಹಾರಾಷ್ಟ್ರದ ಔರಂಗಾಬಾದ್ ಪ್ರದೇಶದಲ್ಲಿ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಆಕ್ಸಿಜನ್ ಟ್ಯಾಂಕ್‌ಗಳನ್ನೂ ಅಳವಡಿಸಲಾಗುತ್ತಿದೆ. ಸಮರೋಪಾದಿಯಲ್ಲಿ ಎಲ್ಲ ಸಿದ್ಧತೆ ನಡೆಸಲಾಗುತ್ತಿದ್ದು, ಪರೀಕ್ಷೆ ಪ್ರಮಾಣ ಹೆಚ್ಚಿಸಲು ನಿರ್ಧರಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ, ದಿಲ್ಲಿಯಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ಅಲ್ಲಿಂದ ಮುಂಬಯಿಗೆ ತೆರಳುವ ರೈಲುಗಳು, ವಿಮಾನಗಳಿಗೆ ನಿರ್ಬಂಧ ಹೇರುವ ಕುರಿತೂ ಸರಕಾರ ಚಿಂತನೆ ನಡೆಸಿದೆ.
Related Articles
Advertisement
ಗಡಿಯಲ್ಲೇ ಪರೀಕ್ಷೆ: ದಿಲ್ಲಿಯಲ್ಲಿ ಸೋಂಕಿನ 3ನೇ ಅಲೆ ಕಾಣಿಸಿಕೊಂಡು ಜನರನ್ನು ಭೀತಿಗೆ ತಳ್ಳಿದೆ. ಈ ಹಿನ್ನೆಲೆಯಲ್ಲಿ ನೋಯ್ಡಾ, ಫರೀದಾಬಾದ್, ಗುರು ಗ್ರಾಮಕ್ಕೆ ದಿಲ್ಲಿಯಿಂದ ಬರುವ ಎಲ್ಲ ರನ್ನೂ ಶುಕ್ರವಾರದಿಂದಲೇ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಹರಿಯಾಣ ಸಚಿವರಿಗೆ ಲಸಿಕೆಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗ ಶುಕ್ರವಾರ ಆರಂಭವಾಗಿದ್ದು, ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್(67) ಅವರೇ ಲಸಿಕೆಯ ಮೊದಲ ಪ್ರಯೋ ಗಕ್ಕೆ ಒಳಗಾಗಿದ್ದಾರೆ. ಅಂಬಾಲಾ ಕಂಟೋನ್ಮೆಂಟ್‌ನ ಸಿವಿಲ್ ಆಸ್ಪತ್ರೆಯಲ್ಲಿ ಬಿಜೆಪಿ ಹಿರಿಯ ನಾಯಕನಿಗೆ ಮೊದಲ ಡೋಸ್ ನೀಡಲಾಗಿದೆ. ಅವರು ಸ್ವಯಂಪ್ರೇರಿತವಾಗಿ ಲಸಿ ಕೆಯ ಪ್ರಯೋಗಕ್ಕೆ ಒಳಗಾಗಲು ಮುಂದೆ ಬಂದಿದ್ದರು. ಈ ಮಧ್ಯೆ ಗುರುವಾರದಿಂದ ಶುಕ್ರವಾರದ ನಡು ವಣ 24 ತಾಸುಗಳ ಅವಧಿಯಲ್ಲಿ ದೇಶಾದ್ಯಂತ 45,882 ಮಂದಿಗೆ ಸೋಂಕು ದೃಢಪಟ್ಟಿದ್ದು, 584 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಕೊರೊನಾ ಸೋಂಕಿನ ಪತ್ರ; ರಾಜಕೀಯ ನಾಯಕರೇ ಗುರಿ!
“ಪತ್ರ ಬಂದರೆ ಅದನ್ನು ತೆರೆಯು ವಾಗ ಎಚ್ಚರವಿರಲಿ. ಆ ಪತ್ರಕ್ಕೆ ಕೊರೊನಾ ಸೋಂಕುಪೀಡಿತನ ಉಗುಳು, ಕಫ ಮತ್ತಿತರ ಅಂಶ ಗಳನ್ನು ಸವರಿರಬಹುದು. ಅದರ ಮೂಲಕ ನಿಮಗೂ ಸೋಂಕು ತಗುಲಬಹುದು!’ ಅಂತಾ ರಾಷ್ಟ್ರೀಯ ಪೊಲೀಸ್ ಸಂಸ್ಥೆಯಾದ ಇಂಟರ್‌ಪೋಲ್ ಹಲವು ದೇಶಗಳ ಗಣ್ಯರನ್ನು ಉದ್ದೇಶಿಸಿ ಹೀಗೊಂದು ಎಚ್ಚರಿಕೆ ನೀಡಿದೆ. “ಕೊರೊನಾ ವೈರಸ್ ಲೇಪಿತ ಪತ್ರ’ಗಳ ಮೂಲಕ ಭಾರತ ಸಹಿತ ವಿವಿಧ ದೇಶಗಳ ಪ್ರಮುಖ ರಾಜಕೀಯ ನಾಯಕರನ್ನು ಗುರಿ ಮಾಡಲು ಸಂಚು ನಡೆದಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಇಂಟರ್‌ಪೋಲ್ ಹೊರಹಾಕಿದೆ. ಉದ್ದೇಶಪೂರ್ವಕವಾಗಿ ರಾಜ ಕೀಯ ಗಣ್ಯರಿಗೆ ಸೋಂಕು ತಗ ಲಿಸಲು ಸಂಚು ನಡೆದಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ಭಾರತ ಮತ್ತು 193 ಇತರ ದೇಶಗಳಿಗೆ ಇಂಟರ್‌ಪೋಲ್ ಸಂದೇಶ ರವಾನಿಸಿದೆ. ಜತೆಗೆ ಸೂಕ್ತ ಮುನ್ನೆಚ್ಚರಿಕೆ ವಹಿಸಲು ಅಗತ್ಯವಿರುವ ಮಾರ್ಗಸೂಚಿಯನ್ನೂ ನೀಡಿದೆ.