Advertisement

ಕಲ್ಯಾಣಕ್ಕೆ ಕೋವಿಡ್  ಕಂಟಕ

03:02 PM Apr 22, 2021 | Team Udayavani |

ಚನ್ನರಾಯಪಟ್ಟಣ: ಮದುವೆ ಸೀಜನ್‌ನಲ್ಲಿಕೊರೊನಾ ಪ್ರಾರಂಭವಾಗುವ ಮೂಲಕ ಸಾವಿರಾರುಮಂದಿ ನವವಿವಾಹಿತರಿಗೆ ತೊಂದರೆ ನೀಡಿತ್ತು. ಈಗಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಪುನಃಕಲ್ಯಾಣಕ್ಕೆ ಕಂಟಕವಾಗುತ್ತಿದೆ.ಕೊರೊನಾ ದೇಶಕ್ಕೆ ಕಾಲಿಟ್ಟ ವರ್ಷದಲ್ಲಿ ವಿವಾಹ,ನಾಮಕರಣ ಇತ್ಯಾದಿಗಳಿಗೆ ಕಲ್ಯಾಣ ಮಂದಿರ ಬುಕ್‌ಮಾಡಿಕೊಂಡಿದ್ದವರು ನೀಡಿದ್ದ ಮುಂಗಡ ಹಣವಾಪಸ್‌ ಪಡೆದಿದ್ದರು. ಕೆಲವರು ಮುಂದಿನ ವರ್ಷದಲ್ಲಿ ಮಾಡೋಣ ಎಂದು ಕೊಂಡಿದ್ದರು.

Advertisement

ಆದರೆ,ಎರಡನೇ ಅಲೆ ಪುನಃ ಎದುರಾಗಿ ಸರ್ಕಾರ ಕರ್ಫ್ಯೂಜಾರಿ ಮಾಡಿರುವ ಹಿನ್ನೆಲೆಯಲ್ಲಿ ವಿವಾಹ ಮಹೋತ್ಸವಕ್ಕೆ ಅಡ್ಡಿ ಎದುರಾಗಿದೆ.

ಕೊರೊನಾ ನಿರ್ಬಂಧ: ಸೋಂಕಿನ ಪ್ರಮಾಣ ಎಲ್ಲೆಡೆಕಡಿಮೆಯಾಗಿದ್ದು ಸಭೆ, ಸಮಾರಂಭ, ಸಮಾವೇಶಗಳುಮತ್ತೆ ಹೆಚ್ಚಾಗಿದ್ದವು. ಇದೇ ವೇಳೆಯಲ್ಲಿ ತಮ್ಮ ಮಕ್ಕಳವಿವಾಹ ಹಾಗೂ ನಾಮಕರಣಕ್ಕೂ ಸಕಲ ತಯಾರಿಮಾಡಿಕೊಂಡು ದೊಡ್ಡ ಕಲ್ಯಾಣ ಮಂಟಪವನ್ನುಬುಕ್‌ ಮಾಡಿದ್ದು ಇನ್ನೇನು ವಿವಾಹ ಶುರುವಾಗಲಿದೆಎನ್ನುವಷ್ಟರಲ್ಲಿ ಕೊರೊನಾ ನಿಬಂರ್ಧದ ನಿಯಮಗಳುಜನರ ನಿರೀಕ್ಷೆಗೆ ತಣ್ಣಿರೆರಚಿದೆ.

ಮತ್ತೆ ಮುಂಗಡ ಹಣಕ್ಕೆ ತೊಂದರೆ: ಈ ಬಾರಿಯೂಕರ್ಫ್ಯೂ, ಅರೆ ಲಾಕ್‌ಡೌನ್‌ನಿಂದ ಕಲ್ಯಾಣ ಮಂಟಪಕ್ಕೆನೀಡಿದ್ದ ಮುಂಗಡ ಹಣ ಮರು ಪಡೆಯಲುತೊಂದರೆ ಎದುರಾಗಿದೆ. ಕಲ್ಯಾಣ ಮಂಟಪದ ಮಾಲೀಕರು ಯಾವುದೆ ಕಾರಣಕ್ಕೂ ಹಣ ಹಿಂದಿರುಗಿಸುವುದಿಲ್ಲನಿಮ್ಮ ಮನೆ ಸಮಾರಂಭ ಮುಂದೂಡಿಕೊಳ್ಳುವಂತೆಸಲಹೆ ನೀಡುತ್ತಿದದಾರೆ. ಇದು ಹಿಂದಿನ ಲಾಕ್‌ಡೌನ್‌ಸನ್ನಿವೇಶವನ್ನು ಪುನರಾವರ್ತನೆ ಮಾಡುತ್ತಿದೆ.

ನೆಂಟರಿಷ್ಟರಿಗೆ ಆಮಂತ್ರಣ: ಈಗಾಗಲೇ ವಿವಾಹಹಾಗೂ ನಾಮಕರಣಕ್ಕೆ ಆಮಂತ್ರಣ ಪತ್ರಿಕೆ ಮುದ್ರಣಮಾಡಿ ನೂರಾರು ಮಂದಿಗೆ ಆಹ್ವಾನ ನೀಡಿದ್ದಾರೆ,ಆದರೆ ಸರ್ಕಾರ ಹೆಚ್ಚು ಜನ ಸೇರಿಸದಂತೆ ಮಿತಿಹೇರಿದೆ. ಸಮಾರಂಭಕ್ಕೆ ತಾಲೂಕು ಆಡಳಿತವೇನಾದರೂ ಪಾಸ್‌ ಕಡ್ಡಾಯ ಮಾಡಿದರೆ ಅನೇಕ ಮಂದಿಅಡಕತ್ತರಿಗೆ ಸಿಲುಕಲಿದ್ದಾರೆ.

Advertisement

ಸರಳತೆಗೆ ಅನುಕೂಲ: ಮಧ್ಯಮ, ಬಡವರು ತಮ್ಮಮನೆ ಅಂಗಳದಲ್ಲಿ ಇಲ್ಲವೆ ದೇವಾಲದ ಆವರಣದಲ್ಲಿಸರಳವಾಗಿ ವಿವಾಹ ಮಾಡಿಕೊಳ್ಳಲು ಇದು ಒಳ್ಳೆಯಅವಕಾಶ. ದುಬಾರಿ ಮದುವೆಗೆ ಕಡಿವಾಣ ಹಾಕಿ ಸರಳವಿವಾಹ ಆಗುವುದರಿಂದ ಆರ್ಥಿಕ ಹೊರೆ ತಪ್ಪಲಿದೆಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಆದರೆ ಪ್ರತಿಷ್ಠೆಗಾಗಿ ಹೆಚ್ಚು ಹಣ ವಿನಿಯೋಗಿಸಿವಿವಾಹ ಮಾಡಬೇಕು ಎಂದು ಕೊಂಡಿದ್ದ ಭಾರೀಕುಳಗಳಿಗೆ ಈ ಸಂದರ್ಭ ನುಂಗಲಾದತುತ್ತಾಗಿ ಪರಿಣಮಿಸಿದೆ.ಕಳೆದ ಸಾಲಿನಲ್ಲಿ ಮಗಳ ನಾಮಕರಣಮಾಡಬೇಕಿತ್ತು ಕೊರೊನಾ ಹಿನ್ನೆಲೆಯಲ್ಲಿಒಂದು ವರ್ಷ ಮುಂದಕ್ಕೆ ಹಾಕಿಕೊಂಡು ಹೊಸವರ್ಷ ಯುಗಾದಿ ನಂತರ ನಾಮಕರಣ ಇಟ್ಟುಕೊಂಡು ಕನ್ವೆಷನ್‌ ಹಾಲ್‌ ಬುಕ್‌ ಮಾಡಿ ಆಮಂತ್ರಣ ಪತ್ರಿಕೆ ಹಂಚಿದ್ದೇವೆ. ಈ ವೇಳೆ ಸರ್ಕಾರದಕೊರೊನಾ ನಿರ್ಬಂಧ ನಿರಾಸೆ ಮೂಡಿಸಿದೆ.

ಕೆ.ಪಿ.ಲಕ್ಷ್ಮೀ, ಮಗಳ ನಾಮಕರಣಕ್ಕೆ ಸಿದ್ಧವಾಗಿದ್ದ ಗೃಹಿಣಿ. ಚನ್ನರಾಯಪಟ್ಟಣ

 

ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next