Advertisement

ಸೋಂಕಿತರ ಸಂಖ್ಯೆ ಹೆಚ್ಚಿದ್ರೂ ಎಚ್ಚೆತ್ತುಕೊಳ್ಳದ ಜನ

02:49 PM Apr 30, 2021 | Team Udayavani |

ಎಂ.ರವಿಕುಮಾರ್

Advertisement

ಮಾಲೂರು: ಕೋವಿಡ್ ವೈರಸ್‌ ಸರಪಳಿಯನ್ನು ಬ್ರೇಕ್‌ ಮಾಡಲು ಸರ್ಕಾರ ಹಲವು ಕಠಿಣ ಕ್ರಮಗಳನ್ನುಕೈಗೊಂಡಿದ್ದರೂ ತಾಲೂಕಿನ ಜನರುಮಾತ್ರ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ದಿನದ 20 ಗಂಟೆ ಮನೆಯಲ್ಲೇ ಇರುವಜನ, ಅಗತ್ಯ ವಸ್ತುಗಳ ಖರೀದಿಗಾಗಿ ಮೀಸಲಿಟ್ಟ ನಾಲ್ಕು ಗಂಟೆಗಳಲ್ಲಿ ಮಾಸ್ಕ್ಧರಿಸಿದೇ, ಸಾಮಾಜಿಕ ಅಂತರಕಾಯ್ದುಕೊಳ್ಳದೇ ಗುಂಪಾಗಿಸೇರುತ್ತಿದ್ದು, ಸೋಂಕು ದ್ವಿಗುಣಗೊಳ್ಳುವಆತಂಕ ಶುರುವಾಗಿದೆ.ಬೆಳಗಾಗುತ್ತಿದ್ದಂತೆ ಪಟ್ಟಣಿಗರಜೊತೆಗೆ ಹಳ್ಳಿಗಳಿಂದ ಅಗತ್ಯ ವಸ್ತುಗಳಖರೀದಿಗೆ ತಾಲೂಕು ಕೇಂದ್ರಕ್ಕೆ ಬರುವಜನರು ಅಂಗಡಿ ಮುಂಗಟ್ಟುಗಳಮುಂದೆ ಸಾಮಾಜಿಕ ಅಂತರ ಇರಲಿ,ಕಡ್ಡಾಯ ಮಾಸ್ಕ್ ಧರಿಸದೇ ಗುಂಪಾಗಿ ನಿಲ್ಲುತ್ತಿದ್ದಾರೆ.

ಮಾಂಸ ಖರೀದಿಗೆ ವಿಶೇಷ ಆದ್ಯತೆ:ದಿನಸಿ ಅಂಗಡಿಗಳು ಹೆಚ್ಚಾಗಿರುವ ಪುರಸಭೆಯ ಐಡಿಎಸ್‌ಎಂಟಿ ವಾಣಿಜ್ಯ ಸಂಕೀರ್ಣ, ತರಕಾರಿ ಮಾರುಕಟ್ಟೆ, ಬೀದಿಬದಿಯಲ್ಲಿನ ಅಂಗಡಿಗಳ ಮುಂದೆ ಜನರು ಗುಂಪಾಗಿ ನಿಲ್ಲುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇನ್ನೂ ಮೀನು,ಮಾಂಸ, ಕೋಳಿ ಮೊಟ್ಟೆಯ ಖರೀದಿಗೆ ವಿಶೇಷ ಆದ್ಯತೆ ನೀಡುತ್ತಿರುವ ಗ್ರಾಹಕ, ಕೊರೊನಾ ಸೋಂಕು ಹರಡುವ ಭಯಬಿಟ್ಟು ಖರೀದಿಯಲ್ಲಿ ಮಗ್ನನಾಗುತ್ತಿದ್ದಾನೆ.

2 ಗ್ರಾಮ ಸೀಲ್‌ಡೌನ್‌: ತಾಲೂಕಿನಮಾಸ್ತಿ ಹೋಬಳಿಯ ಗಂಗಸಂದ್ರ,ಲಕ್ಕೂರು ಹೋಬಳಿಯ ಚಲಗನಹಳ್ಳಿಯಲ್ಲಿ ಕೊರೊನಾ ಸೋಂಕು ಹೆಚ್ಚಿರುವಕಾರಣ ಈ ಎರಡೂ ಗ್ರಾಮ ಸಂಪೂರ್ಣಸೀಲ್‌ಡೌನ್‌ ಮಾಡಲಾಗಿದೆ.

ಸಿಗರೇಟ್‌, ಪಾನ್‌ ಮಸಾಲಗಳ ಕೃತಕ ಅಭಾವ: ಕೊರೊನಾ ಕರ್ಫ್ಯೂಸಮಯವನ್ನೇ ದುರ್ಬಳಕೆಮಾಡಿಕೊಂಡ ತಂಬಾಕು, ಬೀಡಿ,ಸಿಗರೇಟ್‌, ಗುಟ್ಕಾ, ಮತ್ತಿತರ ಪಾನ್‌ಮಸಾಲೆಗಳನ್ನು ಸಗಟು ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿ, ಮೂರರಿಂದನಾಲ್ಕು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟಮಾಡುತ್ತಿದ್ದಾರೆ. ಈ ದುಶ್ಚಟಗಳಿಗೆ ದಾಸರಾಗಿರುವವರು ಎಷ್ಟೇಬೆಲೆಯಾದ್ರೂ ಸರಿ ಖರೀದಿಸುತ್ತಿದ್ದಾರೆ.

Advertisement

ರಂಜಾನ್‌ ಖರೀದಿ ಜೋರು:ಮುಸ್ಲಿಮರಿಗೆ ಪವಿತ್ರ ರಂಜಾನ್‌ಉಪವಾಸ ವ್ರತಾಚರಣೆಮಾಸವಾಗಿರುವ ಕಾರಣ, ಅವರ ಅಗತ್ಯವಸ್ತುಗಳ ಖರೀದಿ ಹೆಚ್ಚಾಗಿದೆ. ಹಣ್ಣಿನಅಂಗಡಿಗಳ ಮುಂದೆ ಜನ ದಟ್ಟಣೆಹೆಚ್ಚಾಗುತ್ತಿದೆ. ಬೆಳಗ್ಗೆ 6ರಿಂದ10ಗಂಟೆವರೆಗೆ ಕೊರ್ಫ್ಯೂ ಸಡಿಲಿಕೆಮಾಡಿರುವ ಕಾರಣ ಬಹುಪಾಲುಸರ್ಕಾರಿ ನಿಯೋಜಿತ ಅಧಿಕಾರಿಗಳುಮನೆಯಿಂದ ಹೊರಬರುವ ಪ್ರಮಾಣ ಕಡಿಮೆ. ಹೀಗಾಗಿ ಜನರು ಅಂಡಿಗಳಮುಂದೆ ಸಾಮಾಜಿಕ ಅಂತರ, ಮಾಸ್ಕ್ಇಲ್ಲದೆ ನಿಲ್ಲುತ್ತಿದ್ದು, ತಡೆಯುವವರೇ ಇಲ್ಲದಂತಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next