ಬೆಂಗಳೂರು: ಬಿಬಿಎಂಪಿ ವಾರ್ ರೂಂ ನಲ್ಲಿಕೋವಿಡ್ ಹಾಸಿಗೆಗಳ ಬ್ಲಾಕ್ ಮಾಡುವ ಹಗರಣ ಪತ್ತೆ ಮಾಡುವಾಗ ನಾವು ಯಾವುದೇ ಒಂದುಕೋಮಿನ ಜನರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿಲ್ಲ. ನಮಗೆ ಸಂವಿಧಾನವೇ ಪರಮೋತ್ಛ. ಪ್ರತಿಯೊಂದು ಜಾತಿ, ಜನಾಂಗದ ಎಲ್ಲರೂ ನಮಗೆಸಮಾನರು ಎಂದು ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಶಾಸಕಉದಯ್ ಗರುಡಾಚಾರ್ ಹೇಳಿದ್ದಾರೆ.
ನಗರದ ನ್ಯಾಷನಲ್ ಕಾಲೇಜ್ ಬಳಿ ಇರುವ ವಾಸವಿ ಕನ್ವೆನ್ಷನ್ ಸೆಂಟರ್ ನಲ್ಲಿ 40 ಬೆಡ್‌ಗಳ ಕೋವಿಡ್ ಎಮರ್ಜೆನ್ಸಿ ಆಕ್ಸಿಜನ್ ಸೆಂಟರ್ ಕೇಂದ್ರವನ್ನಾಗಿ ಪರಿವರ್ತನೆ ಮಾಡಲಾಗಿದೆ. ಶಾಸಕಉದಯ ಗರುಡಾಚಾರ್ ಹಾಗೂ ವಾಸವಿ ಸಂಸ್ಥೆಯಮುಖ್ಯಸ್ಥರು ಸ್ಥಳಕ್ಕೆ ಭೇಟಿ ನೀಡಿ ಆಕ್ಸಿಜನ್ ಅಳವಡಿಕೆ ಬೆಡ್ ಗಳ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಎಲ್ಲಾ ಜನಪ್ರತಿನಿಧಿಗಳಿಗೂ ಸಂವಿಧಾನವೇ ಪರಮೋತ್ಛವಾಗಿದೆ. ಸಂಸದ ತೇಜಸ್ವಿ ಸೂರ್ಯಅವರ ಜತೆ ತಾವು ಹಾಗೂ ಶಾಸಕ ಸತೀಶ್ ರೆಡ್ಡಿ ಅವರಿದ್ದೆವು. ನಾವು ವಾರ್ ರೂಂ ನಲ್ಲಿ ಯಾವುದೇನಿರ್ದಿಷ್ಟ ಕೋಮಿನ ಜನರನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಿಲ್ಲ. ಸಂಸದ ತೇಜಸ್ವಿ ಸೂರ್ಯಅವರ ಬಗ್ಗೆ ವರದಿಯಾಗಿರುವಂತೆ ಅವರು ಸಹವರ್ತನೆ ಮಾಡಿಲ್ಲ. ಅವರಿಗೂ ಈ ರೀತಿಯ ಭಾವನೆಇಲ್ಲ ಎಂದು ಸ್ಪಷ್ಟನೆ ನೀಡಿದರು.
ವಾರ್ ರೂಂನಲ್ಲಿ ಬಿಸಿ ಬಿಸಿ ಮಾತಿನ ವಿನಿಯಮನಡೆಯಿತು. ಇದಕ್ಕೆ ಕಾರಣವಿದೆ. ವಾರ್ ರೂಂನಲ್ಲಿಡಾ. ರೆಹಾನ್ ಎಂಬ ವೈದ್ಯರಿದ್ದರು. ಅವರಿಗೆ ನಾವುಪ್ರತಿದಿನ ಐದು ಬೆಡ್‌ಗಳ ವ್ಯವಸ್ಥೆ ಮಾಡಿ ಎಂದುಕೋರಿದ್ದೇವು. ಅದಕ್ಕೆ ಅವರು ಒಪ್ಪಿಗೆ ನೀಡಿದ್ದರು.ನಂತರ ಕರೆ ಮಾಡಿದರೆ ಬೆಡ್ ಇಲ್ಲ ಎನ್ನುತ್ತಿದ್ದರು.ಹೀಗಾಗಿ ನಾವು ಸಂಸದರ ಜತೆಗೂಡಿ ವಾರ್ ರೂಂಗೆಹೋಗಿದ್ದೇವು. ವಲಯ ಆಯುಕ್ತರಾದ ತುಳಸೀಮದ್ದಿನೇನಿ, ಮತ್ತೋರ್ವ ಅಧಿಕಾರಿವೀರಭದ್ರಸ್ವಾಮಿ, ಡಾ. ಶಿವಕುಮಾರ್ ಮತ್ತಿತರರಜತೆ ಚರ್ಚೆ ನಡೆಸಿದೆವು.
ಅಧಿಕಾರಿಗಳನ್ನು ನಾವು ಎಳೆದಾಡಿಲ್ಲ. ಅಲ್ಲಿ ಸುಮಾರು 200 ಜನರಿದ್ದರು. ಅಧಿಕಾರಿಗಳ ಜತೆ ಚರ್ಚೆ ನಂತರ ನಾವು ವಾಪಸ್ ಬಂದೆವು. ವಿವಾದದ ಸ್ವರೂಪ ಪಡೆಯು ವಂತಹ ಯಾವುದೇ ವರ್ತನೆ ನಾವು ತೋರಿಲ್ಲ ಎಂದರು.ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ 60 ಸಾವಿರಮುಸ್ಲಿಂ ಮತದಾರರಿದ್ದಾರೆ. 32 ಮಸೀದಿಗಳಿವೆ. ಮಸೀದಿ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಹಿಂದೂ,ಮುಸ್ಲಿಂ, ಕ್ರೈಸ್ತರ ಜತೆ ನಾವು ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ಯಾವುದೇ ಕೋಮಿನವರು ಮತ್ತೂಂದು ಕೋಮಿನ ಮೇಲೆ ಮಾತನಾಡಬಾರದು ಎಂದರು.