ಮಂಡ್ಯ: ಜಿಲ್ಲೆಯಲ್ಲಿ ಎರಡನೇ ಅಲೆಯ ಕೊರೊನಾ ಸೋಂಕು ವೇಗವಾಗಿಹೆಚ್ಚುತ್ತಿದೆ. ಅದರಂತೆ ಸಾರಿ (ತೀವ್ರ ಉಸಿರಾಟದ ತೊಂದರೆ) ಪ್ರಕರಣಗಳುದಾಖಲಾಗುತ್ತಿದ್ದು, ಸಾವಿನ ಸಂಖ್ಯೆಯೂ ಏರುತ್ತಿರುವುದರಿಂದಸಾರ್ವಜನಿಕರು ಆತಂಕಪಡುವಂತೆ ಮಾಡಿದೆ.
ಉಸಿರಾಟದ ತೊಂದರೆ, ಕೆಮ್ಮು, ಜ್ವರದಿಂದಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.ಇದುವರೆಗೂ 174 ಮಂದಿ ಮೃತಪಟ್ಟಿದ್ದಾರೆ.ಮಾ.28ರಿಂದ ಸಾವಿನ ಸಂಖ್ಯೆ ಏರಿಕೆಯಾಗುತ್ತಾಬಂದಿದೆ. ಅದರಲ್ಲೂ ತೀವ್ರ ಉಸಿರಾಟದತೊಂದರೆ(ಸಾರಿ) ಪ್ರಕರಣ ಹೆಚ್ಚು ದಾಖಲಾಗಿದೆ.
20 ಮಂದಿ ಕೋವಿಡ್ಗೆ ಬಲಿ: ಕಳೆದ 25 ದಿನಗಳಿಂದ ಸಾವಿನ ಸಂಖ್ಯೆಯೂಏರುತ್ತಿದ್ದು, ಸುಮಾರು 16 ಮಂದಿ ಮೃತಪಟ್ಟಿದ್ದಾರೆ. ಮಾ.28ರವರೆಗೆ 154ಮಂದಿ ಮೃತಪಟ್ಟಿದ್ದರು. ಅಲ್ಲಿಂದ ಏ.22ರವರೆಗೆ 16 ಮಂದಿ ಮೃತಪಟ್ಟರೆ,ಏ.22ರಿಂದ ನಾಲ್ವರು ಸಾವನ್ನಪ್ಪಿದ್ದಾರೆ.
ವಯಸ್ಸಾದವರೇ ಹೆಚ್ಚು: 60 ವರ್ಷ ಮೇಲ್ಪಟ್ಟ ವಯಸ್ಸಾದವರೇ ಹೆಚ್ಚುಸೋಂಕಿಗೆ ಬಲಿಯಾಗುತ್ತಿದ್ದಾರೆ. ಸೋಂಕಿನ ಜತೆಗೆ ಇತರೆ ಆರೋಗ್ಯ ಸಮಸ್ಯೆ,ಉಸಿರಾಟದ ತೊಂದರೆ, ಜ್ವರ, ಕೆಮ್ಮಿನಿಂದ ಮೃತಪಟ್ಟವರ ಸಂಖ್ಯೆಹೆಚ್ಚಾಗುತ್ತಿದೆ.ಯುವಕರು ಬಲಿ: ಕಳೆದ ಮೂರು ವಾರಗಳಿಂದ 35 ವರ್ಷದೊಳಗಿನನಾಲ್ಕು ಮಂದಿ ಯುವಕರು ಮೃತಪಟ್ಟಿದ್ದಾರೆ. ಕೊರೊನಾ ಸೋಂಕುವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿ ಪ್ರಕರಣಗಳು ಹೆಚ್ಚುತ್ತಿವೆ.
14 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ: ಸೋಂಕಿನಿಂದ ಗಂಭೀರ ಸಮಸ್ಯೆಎದುರಿಸುತ್ತಿರುವ 14 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರಉಸಿರಾಟದ ತೊಂದರೆ, ನಿರಂತರ ಕೆಮ್ಮು, ಜ್ವರ ಇರುವವರಿಗೆ ತುರ್ತಾಗಿಚಿಕಿತ್ಸೆ ನೀಡಲಾಗುತ್ತಿದೆ.300 ಆಕ್ಸಿಜನ್ ಬೆಡ್‌ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದರಿಂದಜಿಲ್ಲಾಸ್ಪತ್ರೆಯನ್ನು ಸಂಪೂರ್ಣವಾಗಿಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲುಪ್ರಯತ್ನ ನಡೆಸಲಾಗುತ್ತಿದೆ.
ಈಗಾಗಲೇ300 ಆಕ್ಸಿಜನ್ ಬೆಡ್ ವ್ಯವಸ್ಥೆಮಾಡಲಾಗಿದ್ದು, ಕೊರೊನೇತರ ಚಿಕಿತ್ಸೆಗೆಒಪಿಡಿ ಬಂದ್ ಮಾಡಿದರೆ ಇನ್ನೂ 100ಆಕ್ಸಿಜನ್ ಬೆಡ್‌ಗಳು ಸಿಗಲಿವೆ.ಆಕ್ಸಿಜನ್‌ಪ್ಲಾಂಟ್‌ಗೆಪ್ರಸ್ತಾವ®ಮಿಮ್ಸ್‌ನಲ್ಲಿ ಈಗಾಗಲೇ ಒಂದು ಆಕ್ಸಿಜನ್‌ಪ್ಲಾಂಟ್ ಇದ್ದು, ನಿರಂತರ ಆಕ್ಸಿಜನ್ ಪೂರೈಕೆಮಾಡಲಾಗುತ್ತಿದ್ದು, ಆಕ್ಸಿಜನ್ ಕೊರತೆ ಇಲ್ಲ.ಆದರೆ ಮುಂದಿನ ದಿನಗಳಲ್ಲಿ ಕೋವಿಡ್‌ಹೆಚ್ಚಳವಾದರೆ ಸಮಸ್ಯೆಯಾಗಬಾರದುಎಂಬ ಉದ್ದೇಶದಿಂದ ಮತ್ತೂಂದು ಆಕ್ಸಿಜನ್‌ಪ್ಲಾಂಟ್‌ಗೆ ಸರ್ಕಾರಕ್ಕೆ ಪ್ರಸ್ತಾವನೆಸಲ್ಲಿಸಲಾಗಿದೆ.
ಎಚ್.ಶಿವರಾಜು