Advertisement
662 ದಿನಗಳಲ್ಲೇ ಕನಿಷ್ಠ: ಸೋಮವಾರದಿಂದ ಮಂಗಳವಾರಕ್ಕೆ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 3,993 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದು ಕಳೆದ 662 ದಿನಗಳಲ್ಲೇ ದಾಖಲಾದ ಕನಿಷ್ಠ ಪ್ರಕರಣ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಒಂದು ದಿನದಲ್ಲಿ 108 ಮಂದಿ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆ ಒಟ್ಟಾರೆ 5,15,210ಕ್ಕೇರಿದೆ ಎಂದೂ ಮಾಹಿತಿ ನೀಡಿದೆ.
ಬೀಜಿಂಗ್: ಚೀನ ತಯಾರಿಸಿರುವ ಲಸಿಕೆ ಪಡೆಯುವುದ ರಿಂದ ಕೊರೊ ನಾಕ್ಕಿಂತ ಭೀಕರ ವಾದ ರಕ್ತ ಕ್ಯಾನ್ಸರ್ ಬರುವ ಸಾಧ್ಯತೆ ಯಿದೆ ಎಂದು ವರದಿಯಾಗಿದೆ. ಇಂತ ದ್ದೊಂದು ವರದಿಯನ್ನು ಚೀನದ ರಾಷ್ಟ್ರೀಯ ಆರೋಗ್ಯ ಸಮಿತಿಯೇ (ಎನ್‌ಎಚ್‌ಸಿ) ಬಿಡುಗಡೆ ಮಾಡಿದೆ. ಸಿನೋವ್ಯಾಕ್ ಮತ್ತು ಸಿನೋಫಾರ್ಮ್ ಲಸಿಕೆಗಳಿಂದ ಮನುಷ್ಯನ ದೇಹದಲ್ಲಿ ಲ್ಯುಕೆಮಿಯಾ ಹೆಸರಿನ ರಕ್ತದ ಕ್ಯಾನ್ಸರ್ ಉಂಟಾಗ ಬಹುದು. ಈ ಕಾಯಿಲೆಗೆ ತುತ್ತಾಗುವವರ ಬೋನ್ ಮ್ಯಾರೋದಲ್ಲಿ ಬಿಳಿ ರಕ್ತದ ಕಣ ಅಧಿಕವಾಗಿ ಉತ್ಪತ್ತಿಯಾಗಿ ದೇಹವನ್ನು ಹಾಳು ಮಾಡುತ್ತದೆ ಎಂದು ವರದಿಯಲ್ಲಿ ತಿಳಿಸ ಲಾಗಿದೆ. ಹಾಗಾಗಿ ಈ ಲಸಿಕೆಯ ಬಗ್ಗೆ ಎಚ್ಚರವಿರಲಿ ಎಂದು ದೇಶದ 18 ಪ್ರಾಂತ್ಯಗಳಿಗೆ ಎನ್‌ಎಚ್‌ಸಿ ಸೂಚನೆ ನೀಡಿದೆ. ಚೀನದ 2 ಲಸಿಕೆಗಳೇ ಜಗತ್ತಿನಾದ್ಯಂತ ಹೆಚ್ಚಾಗಿ ರಫ್ತಾಗಿವೆ.