Advertisement
ಅಧಿಕವಿದೆ ಭಾರತದ R-NaughtR-Naught or R-Zero ಎನ್ನುವುದು ರೋಗ ಪತ್ತೆಯ ಒಂದು ಮಾಪನ. ಇದನ್ನು ” R0′ ಎಂದು ಬರೆಯಲಾಗುತ್ತದೆ. ಒಂದು ಸಾಂಕ್ರಾಮಿಕದ ತೀವ್ರತೆ ಎಷ್ಟಿದೆ ಎನ್ನುವುದನ್ನು R0 ದಿಂದ ಅಳೆಯಲಾಗುತ್ತದೆ. ಉದಾಹರಣೆಗೆ R0 ತೀವ್ರತೆ 2 ಇದ್ದರೆ, ಒಬ್ಬ ಸೋಂಕಿತ ಸರಾಸರಿ ಇಬ್ಬರಿಗೆ ಸೋಂಕು ಹರಡಬಲ್ಲ ಎಂದರ್ಥ. R0 ಪ್ರಮಾಣ 1ಕ್ಕಿಂತಲೂ ಕಡಿಮೆಯಾದರೆ, ಸೋಂಕು ಹರಡುವುದಿಲ್ಲ ಎಂದರ್ಥ. ಭಾರತದಲ್ಲಿ R0 ಈಗ 1ಕ್ಕಿಂತಲೂ ಅಧಿಕವಿದೆ.
ಮಾರ್ಚ್ 23ಕ್ಕೆ, ಅಂದರೆ ದೇಶವು ಲಾಕ್‌ಡೌನ್‌ಗೆ ಒಳಗಾಗುವ ಮುನ್ನ R0 3.36 ರಷ್ಟಿತ್ತು. ಅಂದರೆ ಒಬ್ಬ ಸೋಂಕಿತನಲ್ಲಿ ಸಾಂಕ್ರಾಮಿಕದ ತೀವ್ರತೆ, ಆತ ಮೂರಕ್ಕಿಂತ ಹೆಚ್ಚು ಜನರಿಗೆ ಸೋಂಕು ಹರಡುವಷ್ಟಿತ್ತು ಮೊದಲ ಲಾಕ್‌ಡೌನ್ ಅಂತ್ಯವಾಗುವ ವೇಳೆಗೆ, ಅಂದರೆ ಎ.14ರ ವೇಳೆಗೆ R0 1.71ಕ್ಕೆ ಇಳಿಯಿತು. ಎರಡನೇ ಲಾಕ್‌ಡೌನ್ ಚರಣ ಅಂತ್ಯವಾಗುವ ವೇಳೆಗೆ, ಅಂದರೆ ಮೇ 3ಕ್ಕೆ R0 1.46ಕ್ಕೆ ಇಳಿಯಿತು. ಮೇ 16ಕ್ಕೆ R0 1.27ಕ್ಕೆ ಇಳಿಯಿತು. ಭಾರತದಲ್ಲಿ ಎಷ್ಟಿದೆ?
ಕೋವಿಡ್-19 ಸ್ಟಡಿ ಗ್ರೂಪ್, ಯೂನಿವರ್ಸಿಟಿ ಆಫ್ ಮಿಚಿಗನ್ ಭಾರತದಲ್ಲಿ ವೈರಸ್‌ನ R0 ಲೆಕ್ಕ ಹಾಕಿದ್ದು, ಭಾರತದಲ್ಲಿ R0 ದರ ಈಗ 1ಪ್ರತಿಶತಕ್ಕೂ ಅಧಿಕವಿದೆ ಎನ್ನುವುದು ಪತ್ತೆಯಾಗಿದೆ. ಇಲ್ಲಿ ನೆನಪಿಡಲೇಬೇಕಾದ ಅಂಶವೆಂದರೆ, ಒಂದು ರಾಜ್ಯದಲ್ಲಿ R0 ದರ ಅಧಿಕವಿದೆ ಎಂದಾಕ್ಷಣ ಆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಅಧಿಕವಿರುತ್ತದೆ ಎಂದಲ್ಲ. ಬದಲಾಗಿ, ಸಾಂಕ್ರಾಮಿಕದ ಅಪಾಯ ಅಧಿಕವಿರುತ್ತದೆ ಎಂದಷ್ಟೇ ಅರ್ಥ. ಮೇ 17ರ ವೇಳೆಗೆ ಕರ್ನಾಟಕದ ಸರಾಸರಿ R0 1.60ರಷ್ಟಿದ್ದರೆ, ಮಹಾರಾಷ್ಟ್ರದ ಸರಾಸರಿ R0 1.34 ದಾಖಲಾಗಿದೆ.
Related Articles
ಕೇಂದ್ರ ಸರ್ಕಾರದ ಕಾರ್ಯಕ್ರಮ ಅನುಷ್ಠಾನ ಹಾಗೂ ಸಾಂಖೀಕ ಸಚಿವಾಲಯದ ಅಧ್ಯಯನವು ಲಾಕ್‌ಡೌನ್ ಅನುಷ್ಠಾನದಿಂದಾಗಿ 20 ಲಕ್ಷಕ್ಕೂ ಅಧಿಕ ಪ್ರಕರಣಗಳು ಮತ್ತು 54,000ಕ್ಕೂ ಅಧಿಕ ಮರಣಗಳನ್ನು ತಪ್ಪಿಸಿದಂತಾಗಿದೆ ಎಂದು ಹೇಳುತ್ತಿದೆ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಒಂದು ವೇಳೆ ಭಾರತದಲ್ಲಿ ಲಾಕ್‌ಡೌನ್‌ಗೂ ಮುನ್ನ ಇದ್ದಷ್ಟೇ ಆರ್ ಝೀರೋ(R0) ಇದ್ದರೆ ದೇಶದಲ್ಲಿನ ಮರಣ ಹಾಗೂ ಸೋಂಕಿತರ ಪ್ರಮಾಣ ಅಪಾರವಾಗಿ ಇರುತ್ತಿತ್ತು. ಅದಾಗ್ಯೂ, ಈಗಲೂ R0 ಸರಾಸರಿ 1ಕ್ಕಿಂತಲೂ ಅಧಿಕವಿರುವುದು ಅಪಾಯಕಾರಿಯೇ ಸರಿ. ಎಲ್ಲಕ್ಕಿಂತ ಲಾಕ್‌ಡೌನ್‌ನ ನಾಲ್ಕನೇ ಚರಣದಲ್ಲಿ ನಿರ್ಬಂಧಗಳ ಸಡಿಲಿಕೆ ಯಿಂದಾಗಿ ಸೋಂಕಿತರ ಕಳೆದೊಂದು ವಾರದಿಂದ ನಿತ್ಯ ಸರಾಸರಿ 5 ಸಾವಿರಕ್ಕೂ ಅಧಿಕ ದಾಖಲಾಗುತ್ತಿದ್ದು, ಆರ್‌ಝೀರೋ ಸರಾಸರಿ ಮತ್ತೆ ಏರಿಕೆಯಾಗುವ ಅಪಾಯವೂ ಇದೆ
Advertisement