ದಾವಣಗೆರೆ: ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್ ಸೋಂಕಿಗೆ ಮತ್ತೊಂದು ಬಲಿಯಾಗಿದೆ. 80 ವರ್ಷದ ವಯೋವೃದ್ದ(ರೋಗಿ ನಂಬರ್ 16675) ಶುಕ್ರವಾರ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಒಂಬತ್ತು ಜನರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ದಾವಣಗೆರೆಯ ಬೇತೂರು ರಸ್ತೆಯ ವೃದ್ದನನ್ನು ಜೂ. 24 ರಂದು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿಸಿತ್ತು. ಶುಕ್ರವಾರ ನಿಧನರಾದರು.
ಶುಕ್ರವಾರ ಜಿಲ್ಲೆಯಲ್ಲಿ 5 ಪ್ರಕರಣ ದೃಢಪಟ್ಟಿವೆ. ರೋಗಿ ನಂಬರ್ 13222 ರ ಸಂಪರ್ಕದಿಂದ 63 ವರ್ಷದ ವೃದ್ಧ (ರೋಗಿ ನಂಬರ್ 18100), 27 ವರ್ಷದ ವ್ಯಕ್ತಿ(ರೋಗಿ ನಂಬರ್ 18101) ಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ತೀವ್ರ ಉಸಿರಾಟದ ಸಮಸ್ಯೆಯಿಂದ 68 ವರ್ಷದ ವೃದ್ಧ (ರೋಗಿ ನಂಬರ್ 18102), 49 ವರ್ಷದ ವ್ಯಕ್ತಿ (ರೋಗಿ ನಂಬರ್ 18103), 60 ವರ್ಷದ ವೃದ್ದ(ರೋಗಿ ನಂಬರ್ 18104)ನಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕೋವಿಡ್ ನಿಂದ ಗುಣಮುಖರಾದ ರೋಗಿ ನಂಬರ್ 9421,10391, 11156,11159,11160, 11950,11952,11954,11955,14400,14401,15386 ಶುಕ್ರವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದರು.
ಜಿಲ್ಲೆಯಲ್ಲಿ ಒಟ್ಟು 338 ಸೋಂಕಿತರಲ್ಲಿ ಈವರೆಗೆ 284 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಂಬತ್ತು ಜನರು ಮೃತಪಟ್ಟಿದ್ದಾರೆ.44 ಸಕ್ರಿಯ ಪ್ರಕರಣಗಳಿವೆ.