Advertisement
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ 24 ಗ್ರಾ.ಪಂ.ಗಳ ಚುನಾವಣೆ ಹಿನ್ನೆಲೆಯೆಲ್ಲಿ ಡಿಸೆಂಬರ್ 21 ರಂದು ನಡೆದ ಮಸ್ಟರಿಂಗ್ ವೇಳೆಯಲ್ಲಿ ಮತಗಟ್ಟೆಯ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆಯ ವತಿಯಿಂದ ಆರೋಗ್ಯ ತಪಾಸಣೆಯನ್ನು ನಡೆಸಲಾಗಿತ್ತು. ಈ ಪೈಕಿ ಮತಗಟ್ಟೆ ಅಧಿಕಾರಿ ಒಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಹಾಗಾಗಿ ಈ ಅಧಿಕಾರಿಯ ಸಂಪರ್ಕಕ್ಕೆ ಬಂದಿರುವ ಎಲ್ಲರನ್ನೂ ಪತ್ತೆ ಹಚ್ಚಿ ಕೋವಿಡ್-19 ಪರೀಕ್ಷೆ ಗೆ ಒಳಪಡಿಸುವ ಮೂಲಕ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಶಿಡ್ಲಘಟ್ಟ ತಾಲೂಕು ಆರೋಗ್ಯ ಅಧಿಕಾರಿ ತಾಲೂಕು ದಂಡಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
Advertisement
ಗ್ರಾಮ ಪಂಚಾಯಿತಿ ಚುನಾವಣೆ ಮತಗಟ್ಟೆಯ ಅಧಿಕಾರಿಗೆ ಕೋವಿಡ್ ಸೋಂಕು ಧೃಡ
08:30 PM Dec 25, 2020 | Adarsha |
Advertisement
Udayavani is now on Telegram. Click here to join our channel and stay updated with the latest news.