Advertisement

ಕೋವಿಡ್ ಸೋಂಕಿತರು ಕಡಿಮೆಯಾದರೂ ಸಮಸ್ಯೆ!

12:15 PM Jun 12, 2020 | mahesh |

ಲಂಡನ್‌: ಕೋವಿಡ್‌ಸೋಂಕಿತರ ಇಳಿಕೆಯು ಇದಕ್ಕೆ ಔಷಧ ಕಂಡು ಹಿಡಿಯಲು ಪ್ರಯತ್ನಿಸುತ್ತಿರುವ ಕಂಪೆನಿಗಳಿಗೆ ಉತ್ತಮ ಸುದ್ದಿಯಲ್ಲ. ಆಕ್ಸ್‌ ಫೋರ್ಡ್‌ ವಿವಿ ಸಂಶೋಧಕರ ತಂಡದ ಮುಖ್ಯಸ್ಥರೊಬ್ಬರ ಪ್ರಕಾರ, ಮುಂದಿನ ಹಂತದಲ್ಲಿ ಮಾನವರಿಗೆ ಔಷಧ ನೀಡಿ ಪ್ರಯೋಗ ನಡೆಸಬೇಕಿದ್ದು, ಈ ವೇಳೆ ಸೋಂಕಿತರ ಪ್ರಮಾಣ ಕಡಿಮೆಯಾಗುವುದು ಔಷಧ ಸಂಶೋಧನೆ ದೃಷ್ಟಿಯಿಂದ ಆಶಾದಾಯಕವಲ್ಲ.

Advertisement

ಸಂಶೋಧನೆಗೆ ಸಾಕಷ್ಟು ಸಂಖ್ಯೆಯಲ್ಲಿ ಸೋಂಕಿತರು ಬೇಕಾಗುತ್ತದೆ. ಇವರಲ್ಲಿ ರೋಗ ಲಕ್ಷಣ ಇರುವವರು, ಇಲ್ಲದವರೂ ಬೇಕು. ಅಲ್ಲದೇ ಸಂಶೋಧನೆ ವೇಳೆ ಕೆಲಸದ ಸ್ಥಳ, ರಸ್ತೆ, ಮನೆ ಹೀಗೆ ವಿವಿಧ ಕಡೆಗಳಲ್ಲಿ ಇರುವವರೂ ಬೇಕಾಗುತ್ತದೆ. ಔಷಧ ಅವರ ಮೇಲೆ ಏನು ಪರಿಣಾಮ ಬೀರುತ್ತದೆ ಎಂದು ನೋಡುವುದು ಅಗತ್ಯವಾಗುತ್ತದೆ. ಒಂದು ವೇಳೆ ಸಾಕಷ್ಟು ಸಂಖ್ಯೆಯಲ್ಲಿ ಪ್ರಕರಣಗಳು ಇಲ್ಲ ಎಂದಾದರೆ, ಸಂಶೋಧಕರು ಔಷಧ ಸಂಶೋಧನೆ ಮಾಡುವುದು ಕಷ್ಟವಾಗಿ ಅತಿ ಹೆಚ್ಚು ಪ್ರಕರಣಗಳಿರುವ ದೇಶಗಳನ್ನು, ಪ್ರದೇಶಗಳನ್ನು ಹುಡುಕಿಕೊಂಡು ಹೋಗಬೇಕಾಗುತ್ತದೆ. ಅತಿ ಶೀಘ್ರದಲ್ಲಿ ರೋಗಿಗಳು ಚೇತರಿಕೆಯಾಗುತ್ತಿದ್ದಂತೆ ಔಷಧ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂದು ಗುರುತಿಸುವುದೂ ಕಷ್ಟವಾಗುತ್ತದೆ ಎನ್ನುವುದು ಸಂಶೋಧಕರ ಅಳಲು.
ಬ್ರಿಟಿಷ್‌-ಸ್ವೀಡಿಶ್‌ ಔಷಧ ಕಂಪೆನಿಯೊಂದರ ಮುಖ್ಯಸ್ಥರ ಪ್ರಕಾರ, ಅವರ ಕಂಪೆನಿ ಒಂದು ವಿವಿ ಗುಂಪಿನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, 700 ಕೋಟಿ ರೂ.ಗಳಷ್ಟು ಹೂಡಿಕೆ ಮಾಡಲು ಉದ್ದೇಶಿಸಿದೆ. ಆದರೆ ಕೋವಿಡ್‌ ಸೋಂಕಿತರ ಪ್ರಮಾಣ ಇಳಿಕೆ ಕಾಣುತ್ತಿರುವುದು ಮತ್ತು ಪರೀಕ್ಷೆಗೆ ಸಮಯ ಕಡಿಮೆಯಿರುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಔಷಧ ಸಿದ್ಧಪಡಿಸುವುದು ಸವಾಲಾಗಿದೆ ಎಂದಿದ್ದಾರೆ.

ಆಕ್ಸ್‌ಫೋರ್ಡ್‌ ವಿ.ವಿ.ಯ ಸಂಶೋಧಕರೊಬ್ಬರು ಹೇಳುವಂತೆ, ನಾವೀಗ ಕೋವಿಡ್‌ ಸ್ವಲ್ಪವಾದರೂ ಉಳಿಯಬೇಕು ಎಂದು ಕೇಳಬೇಕಾದ ವಿಚಿತ್ರ ಸ್ಥಿತಿ ಯಲ್ಲಿದ್ದೇವೆ. ಹಾಗೆ ಉಳಿದರೆ ಮಾತ್ರ ಉತ್ತಮ ಔಷಧ ದೊರಕಬಹುದೇನೋ. ಆದರೆ ಪ್ರಕರಣಗಳು ಕಡಿಮೆಯಾಗುತ್ತಿವೆ. ಇನ್ನೊಂದು ಸಂಶೋಧಕರ ಪ್ರಕಾರ ಸದ್ಯ ಲಾಕ್‌ಡೌನ್‌ ತೆರವಾಗಿ ನಿರ್ಬಂಧಗಳನ್ನು ಸಡಿಲ ಗೊಳಿಸಿರುವುದರಿಂದ ಕೆಲವು ಕಡೆಗಳಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಸ್ವಲ್ಪ ಮಟ್ಟಿಗೆ ಪ್ರಯೋಗ ನಡೆಸಲು ಪ್ರಯೋಜವಾಗಬಹುದು. ಆದರೆ ದೊಡ್ಡ ಸಂಖ್ಯೆಯಲ್ಲಿ ಎಲ್ಲ ರೀತಿಯ ರೋಗಿಗಳೂ ಇರಬೇಕಾಗುತ್ತದೆ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next