Advertisement

ಕೋವಿಡ್ ಸೋಂಕು: ವಿಟ್ಲದ ವ್ಯಕ್ತಿ ಕುವೈಟ್‌ನಲ್ಲಿ ಸಾವು

09:38 AM May 19, 2020 | mahesh |

ವಿಟ್ಲ: ಕುವೈಟ್‌ನಲ್ಲಿ ಉದ್ಯೋಗಿಯಾಗಿರುವ ವಿಟ್ಲ ಕಾಶಿಮಠ ಮೂಲದ ವ್ಯಕ್ತಿಯೋರ್ವರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರು ಕಳೆದ ಒಂದು ತಿಂಗಳಿನಿಂದ ತುಸು ಅಸ್ವಸ್ಥರಾಗಿದ್ದು, ವಾರದ ಹಿಂದೆ ಕೋವಿಡ್‌ ಪರೀಕ್ಷೆಯಲ್ಲಿ ಸೋಂಕು ದೃಢಗೊಂಡಿತ್ತು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Advertisement

ಅವರು ವರ್ಷದ ಹಿಂದೆ ಊರಿಗೆ ಬಂದು ಮಗಳ ಮದುವೆ ಮುಗಿಸಿ ಮರಳಿದ್ದರು. ಅಂತ್ಯಕ್ರಿಯೆಯನ್ನು ಅಲ್ಲಿಯೇ ನಡೆಸಲಾಗಿದೆ. ಚರ್ಚ್‌ನ ಧರ್ಮಗುರುಗಳ ನೇತೃತ್ವದಲ್ಲಿ ಪ್ರಾರ್ಥನಾ ವಿಧಿಗಳನ್ನು ಊರಿನ ಮನೆಯಲ್ಲಿ ನೆರವೇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next